Breaking News

ಪ್ರಜ್ವಲ್ ನನ್ನ ಮಗ ಎಂದಿದ್ದ ಎಚ್‌ಡಿಕೆ: ಸಿದ್ದರಾಮಯ್ಯ ಕುಟುಕು

Spread the love

ಬಾಗಲಕೋಟೆ: ‘ಮಹಿಳೆಯರಿಗೆ ಅನ್ಯಾಯ ನಡೆದಿದೆ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕುಮಾರಸ್ವಾಮಿ, ಪ್ರಜ್ವಲ್ ನನ್ನ ಮಗ ಎಂದಿದ್ದರು. ಈಗ ಅವರ ಕುಟುಂಬವೇ ಬೇರೆ ಎನ್ನುತ್ತಿದ್ದಾರೆ. ಪ್ರಜ್ವಲ್ ವಿಡಿಯೊ ವಿಚಾರ ಬಿಜೆಪಿಯವರಿಗೆ ಮೊದಲೇ ಗೊತ್ತಿತ್ತು. ಆದರೂ, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜಕೀಯ ಮಾಡುವುದು, ಕುಕೃತ್ಯ ಮಾಡುವುದು,‌ ತಪ್ಪು ಮಾಡುವುದು ಒಟ್ಟಿಗೆ ಮಾಡುತ್ತಾರೆ‌. ಇಂತಹ ವಿಷಯ ಬಂದಾಗ ಬೇರೆ ಎನ್ನುತ್ತಾರೆ’ ಎಂದು ಲೇವಡಿ ಮಾಡಿದರು.

‘ಸಂತ್ರಸ್ತ ಮಹಿಳೆ ಅಪಹರಣ ಮಾಡಲಾಗಿದೆ ಎಂಬ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಹೆಣ್ಣು‌ಮಗಳು ಎಲ್ಲಿ ಹೋಗಿದ್ದಾರೆ ಎಂದು ಪತ್ತೆ ಹಚ್ಚಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪ್ರಜ್ವಲ್‌ ಕುಟುಂಬ ಬೇರೆ ಎಂದಿದ್ದ ಕುಮಾರಸ್ವಾಮಿ, ವಕೀಲರನ್ನು ಕರೆಯಿಸಿ ಯಾಕೆ ಚರ್ಚೆ ಮಾಡುತ್ತಿದ್ದಾರೆ’ ಎಂದು ಅವರು ಪ್ರಶ್ನಿಸಿದರು.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ