ದಾವಣಗೆರೆ: ಯತ್ನಾಳ್ (Basanagouda Patil Yatnal) ಹುಚ್ಚು ನಾಯಿಯಿದ್ದಂತೆ ಎಂದು ಸ್ವಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ (Renukacharya) ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಬಗ್ಗೆ ನಾನು ಮಾತನಾಡುವುದಕ್ಕೂ ಅಸಹ್ಯ ಎನಿಸುತ್ತದೆ.
ನಾಯಿಗೆ ಇರುವ ನಿಯತ್ತು ಆ ಮನುಷ್ಯನಿಗೆ ಇಲ್ಲ. ಜೆಡಿಎಸ್‌ಗೆ ಹೋದವರನ್ನು ಕರೆತಂದಿದ್ದು ಯಡಿಯೂರಪ್ಪ. ಆದರೆ ಆ ಮನುಷ್ಯನಿಗೆ ನಿಯತ್ತು ಅನ್ನೋದೇ ಇಲ್ಲ ಎಂದ ಅವರು, ಸರ್ವಜ್ಞರ ವಚನ ಹೇಳುವ ಮೂಲಕ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು.
ವಿಜಯೇಂದ್ರ, ಯಡಿಯೂರಪ್ಪ ಅವರನ್ನು ಟೀಕೆ ಮಾಡಿದರೇ, ಮೋದಿ ಮತ್ತು ಕೇಂದ್ರ ವರಿಷ್ಠರನ್ನು ಟೀಕೆ ಮಾಡಿದಂತೆ ಆಗುತ್ತದೆ. ಯಡಿಯೂರಪ್ಪ ಆನೆ ಇದ್ದಂತೆ, ಅವರ ಬಗ್ಗೆ ಮಾತನಾಡುವವರು ಹುಚ್ಚು ನಾಯಿ. ಹುಚ್ಚು ನಾಯಿ ಬಗ್ಗೆ ಮಾತನಾಡುವುದು ಕೂಡ ವೇಸ್ಟ್ ಎಂದು ಗುಡುಗಿದರು.