Breaking News

ರೈಲು ನಿಲ್ದಾಣದಲ್ಲಿ ವಿದ್ಯುತ್ ಕಂಬ ಏರಿದ ಮಾನಸಿಕ ಅಸ್ವಸ್ಥ

Spread the love

ನಂದೂರಬಾರ್ (ಮಹಾರಾಷ್ಟ್ರ) : ನಂದೂರಬಾರ್ ರೈಲು ನಿಲ್ದಾಣದಲ್ಲಿ ಮಾನಸಿಕ ರೋಗಿಯೊಬ್ಬ ವಿದ್ಯುತ್​ ಕಂಬ ಏರಿದ್ದರಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರ ಸುಮಾರು ಒಂದು ಗಂಟೆಯ ನಂತರ ಸುಗಮವಾಗಿ ಆರಂಭವಾಯಿತು.

ರೈಲ್ವೆ ನಿಲ್ದಾಣದ ವಿದ್ಯುತ್ ಕಂಬದ ಮೇಲೆ ಮಾನಸಿಕ ಅಸ್ವಸ್ಥ ವ್ಯಕ್ತಿ ಹತ್ತಿದ್ದರಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿತ್ತು. ವಿದ್ಯುತ್ ವ್ಯತ್ಯಯದಿಂದ ರೈಲು ಸಂಚಾರ ಸ್ಥಗಿತಗೊಂಡಿತ್ತು.

ಇದೇ ವೇಳೆ ಮುಂಬೈ ದಾನಪುರ್ ಎಕ್ಸ್​ಪ್ರೆಸ್​ ಹಾಗೂ ನವಜೀವನ್ ಎಕ್ಸ್ ಪ್ರೆಸ್ ರೈಲುಗಳನ್ನು ಸುಮಾರು ಎರಡು ಗಂಟೆಗಳ ಕಾಲ ನಿಲ್ಲಿಸಲಾಯಿತು. ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಸಾವಿರಾರು ಪ್ರಯಾಣಿಕರು ಪರದಾಡಿದರು. ಹಲವು ಪ್ರಯತ್ನಗಳ ನಂತರ, ರೈಲ್ವೆ ಆಡಳಿತವು ಮಾನಸಿಕ ರೋಗಿಯನ್ನು ಮಧ್ಯಾಹ್ನ ಹನ್ನೆರಡು ಗಂಟೆಗೆ ವಿದ್ಯುತ್ ಲೈನ್ ಕಂಬದಿಂದ ಕೆಳಗಿಳಿಸಿದೆ.

ಒಂದು ಗಂಟೆಯ ನಂತರ ರೈಲು ಸೇವೆಯನ್ನು ಪುನಾರಂಭಿಸಲಾಗಿದೆ. ಆದರೆ ಆರಂಭದಲ್ಲಿ ಮಾನಸಿಕ ರೋಗಿ ರೈಲ್ವೆ ಸಿಬ್ಬಂದಿಯ ಮಾತಿಗೆ ಕಿವಿಗೊಡುವ ಮನಸ್ಥಿತಿಯಲ್ಲಿ ಇಲ್ಲದ ಕಾರಣ ಕೆಲಕಾಲ ಆಡಳಿತ ವ್ಯವಸ್ಥೆಗೆ ತೊಂದರೆಯಾಗಿರುವುದು ಕಂಡು ಬಂತು. ಕೊನೆಗೂ ಡೀಸೆಲ್ ಎಂಜಿನ್ ಸಹಾಯದಿಂದ ಮಾನಸಿಕ ರೋಗಿಯನ್ನು ಕೆಳಗಿಳಿಸುವಲ್ಲಿ ರೈಲ್ವೆ ಆಡಳಿತ ಯಶಸ್ವಿಯಾಗಿದೆ.


Spread the love

About Laxminews 24x7

Check Also

ಯುವ ಮತದಾರರತ್ತ ಬಿಜೆಪಿ ಚಿತ್ತ – ‘Gen Z’ ಸಂಪರ್ಕಕ್ಕೆ ವಿಶೇಷ ತಂಡ

Spread the love ನವದೆಹಲಿ: ಯುವಜನತೆ ಅದರಲ್ಲೂ Gen Z ಮತದಾರರೊಂದಿಗೆ ನೇರ ಸಂಪರ್ಕ ಸಾಧಿಸುವ ಉದ್ದೇಶದಿಂದ ಬಿಜೆಪಿ  ವಿಶೇಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ