Breaking News

ಮಹಾರಾಷ್ಟ್ರದ ನಾಗಪೂರ,ಹಾಗು ವಿಧರ್ಭ ಭಾಗದಲ್ಲಿ ಮಿಡತೆ ದಾಳಿ,ಈ ದಾಳಿ ಕರ್ನಾಟಕದ ಗಡಿ ಜಿಲ್ಲೆಗೆ ನುಗ್ಗುವ ಆತಂಕ

Spread the love

ಬೆಳಗಾವಿ- ಮಹಾರಾಷ್ಟ್ರದ ನಾಗಪೂರ,ಹಾಗು ವಿಧರ್ಭ ಭಾಗದಲ್ಲಿ ಮಿಡತೆ ದಾಳಿ ವಿಪರೀತವಾಗಿದ್ದು,ಈ ದಾಳಿ ಕರ್ನಾಟಕದ ಗಡಿ ಜಿಲ್ಲೆಗೆ ನುಗ್ಗುವ ಆತಂಕ ಶುರುವಾಗಿದೆ.

ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಮಿಡತೆ ದಾಳೆ ಎದುರಾಗುವ ಆತಂಕವಿದ್ದು ಗಡಿ ಜಿಲ್ಲೆಗಳಾದ,ಗುಲ್ಬರ್ಗ, ರಾಯಚೂರ,ವಿಜಯಪೂರ,ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ರಾಶಿ,ರಾಶಿ ಮಿಡತೆಗಳು ಹೊಲಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿವೆ. ಮಹಾರಾಷ್ಟ್ರದ ವಿಧರ್ಭ ಭಾಗದಲ್ಲಿ ಮಿಡತೆ ದಾಳಿಯಿಂದ ರೈತರು ಕಂಗಾಲಾಗಿದ್ದು, ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯಲ್ಲೂ ಮಿಡತೆ ದಾಳಿ ಎದುರಿಸಲು ಕೃಷಿ ಇಲಾಖೆ ಸಜ್ಜಾಗಿದೆ.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ,ಮೊಕಾಶಿ ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿ,ಮಿಡತೆ ದಾಳಿ ಮಾಡುವ ಮುನ್ಸೂಚನೆ ಇರುವ ಹಿನ್ನಲೆಯಲ್ಲಿ ಈ ಕುರಿತು ಇಂದಿನಿಂದ ಗ್ರಾಮ ಮಟ್ಟದಲ್ಲಿ ಡಂಗುರ ಬಾರಿಸಿ ರೈತರಲ್ಲಿ ಜಾಗೃತಿ ಮೂಡಿಸುತ್ತೇವೆ.ಮಿಡತೆ ನಾಶ ಮಾಡುವ ಔಷಧಿಯನ್ನು ಬೆಳಗಾವಿ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಸ್ಟಾಕ್ ಮಾಡಿದ್ದೇವೆ‌. ಎಂದು ತಿಳಿಸಿದ್ದಾರೆ.

ಆ ಕಡೆ ಚೀನಾ ದಾಳಿ,ಒಳಗಡೆ ಕೊರೋನಾ ದಾಳಿ,ಈ ಕಡೆಯಿಂದ ಈಗ ಮಿಡತೆ ದಾಳಿ ಶರುವಾಗಲಿದೆ.ಎಲ್ಲ ರೀತಿಯ ದಾಳಿಗಳನ್ನು ಎದುರಿಸುವ ಸಾಮರ್ಥ್ಯ ಭಾರತೀಯರಿಗೆ ಇದೆ.ಹೀಗಾಗಿ ಈ ಮಿಡತೆ ದಾಳಿಯನ್ನು ಎದುರಿಸಲು ವಿಶೇಷವಾಗಿ ಅನ್ನದಾತರು ಸಜ್ಜಾಗುವದು ಅಗತ್ಯ.


Spread the love

About Laxminews 24x7

Check Also

ಚಿಕ್ಕಮುನವಳ್ಳಿ ಹೊರವಲಯದಲ್ಲಿ ಕಳ್ಳಬಟ್ಟಿ ಅಡ್ಡೆ ಮೇಲೆ ನಂದಗಡ ಪೊಲೀಸರ ದಿಢೀರ್ ದಾಳಿ: ಆರೋಪಿ ವಶಕ್ಕೆ

Spread the loveಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ತಯಾರಿಸಿ ಮಾರಾಟ ಮಾಡಲಾಗುತ್ತಿದ್ದ ಕಳ್ಳಬಟ್ಟಿ ಅಡ್ಡೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ