Breaking News

ಎರಡು ತಿಂಗಳು ಕಳೆದರೂ ಹರಿಯಾಣದಿಂದ ಮುಂಬೈಗೆ ತಲುಪದ ರೈಲ್ವೆ ಎಂಜಿನ್

Spread the love

ಮುಂಬೈ (ಮಹಾರಾಷ್ಟ್ರ): ಹಣ ಪಾವತಿ ವಿವಾದದಿಂದಾಗಿ ಹರಿಯಾಣದಿಂದ ಮುಂಬೈಗೆ 5 ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಎಂಜಿನ್​ ಅನ್ನು ತಲುಪಿಸಲು ಟ್ರಾನ್ಸ್‌ಪೋರ್ಟ್​ ಸಂಸ್ಥೆ ವಿಫಲವಾದ ಕಾರಣ ಮುಂಬೈ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು, ತನಿಖೆಯನ್ನು ಆರಂಭಿಸಿದ್ದಾರೆ.

ಎರಡು ತಿಂಗಳ ಹಿಂದೆ ಹರಿಯಾಣದ ಕಲ್ಕಾದಲ್ಲಿ ಟ್ರೇಲರ್‌ ಟ್ರಕ್‌ಗೆ ರೈಲ್ವೆ ಎಂಜಿನ್ ಲೋಡ್ ಮಾಡಲಾಗಿತ್ತು.

ಆದರೆ, ಇದುವರೆಗೂ ಮುಂಬೈಗೆ ಎಂಜಿನ್​ ತಲುಪಿಲ್ಲ. ಈ ಬಗ್ಗೆ ಭಾರತೀಯ ರೈಲ್ವೆಯ ಅಧಿಕೃತ ಟ್ರಾನ್ಸ್‌ಪೋರ್ಟರ್ ಅನಿಲ್ ಕುಮಾರ್ ಗುಪ್ತಾ ಅವರು ನೀಡಿದ ದೂರಿನ ಮೇರೆಗೆ ಎಫ್​ಐಆರ್ ದಾಖಲಿಸಿಕೊಳ್ಳಲಾಗಿದೆ ​ಎಂದು ವಡಾಲಾ ಟಿಟಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಈ ದೂರಿನ ಪ್ರಕಾರ, ಟ್ರಾನ್ಸ್‌ಪೋರ್ಟರ್ ಅನಿಲ್ ಕುಮಾರ್ ಗುಪ್ತಾ ಅವರು ಮುಂಬೈಗೆ ರೈಲ್ವೆ ಎಂಜಿನ್ ತಲುಪಿಸುವ ನಿಟ್ಟಿನಲ್ಲಿ ಪವನ್ ಶರ್ಮಾ ಎಂಬ ಇನ್ನೊಬ್ಬ ಟ್ರಾನ್ಸ್‌ಪೋರ್ಟರ್​ರನ್ನು ನೇಮಿಸಿಕೊಂಡಿದ್ದರು. ಕಲ್ಕಾಗೆ ರೈಲ್ವೆ ಎಂಜಿನ್ ತಲುಪಿಸಲು ಮತ್ತು ಅಲ್ಲಿಂದ ಮುಂಬೈಗೆ ಮತ್ತೊಂದು ಎಂಜಿನ್​ಅನ್ನು ಸಾಗಿಸಲು ಪವನ್ ಶರ್ಮಾ ಅವರಿಗೆ ಜವಾಬ್ದಾರಿ ವಹಿಸಲಾಗಿತ್ತು. ಅಲ್ಲದೇ, ಈ ಸಂಬಂಧ ಪವನ್​​ ಶರ್ಮಾ ಕಂಪನಿ ಜೊತೆಗೆ 4.25 ಲಕ್ಷ ರೂಪಾಯಿಗಳ ಪಾವತಿಸುವ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಲ್ಲಿ 4 ಲಕ್ಷ ರೂ. ಹಣವನ್ನೂ ಪವನ್​​ ಶರ್ಮಾ ಕಂಪನಿಗೆ ಅನಿಲ್ ಕುಮಾರ್ ಗುಪ್ತಾ ಪಾವತಿಸಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ