Breaking News

Monthly Archives: ಸೆಪ್ಟೆಂಬರ್ 2026

ಸ್ಕೂಟಿಗೆ ಪೆಟ್ರೋಲ್ ಹಾಕಿಸುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು – ಹೃದಯಾಘಾತ ಶಂಕೆ

ದಾವಣಗೆರೆ: ಸ್ಕೂಟಿಗೆ ಪೆಟ್ರೋಲ್ ಹಾಕಿಸುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ದಾವಣಗೆರೆಯ ಎಸ್‌ಪಿಎಸ್ ನಗರದ ಭಾರತ್ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ. ದಾವಣಗೆರೆಯ ಮೆಹೆಬೂಬ್ ನಗರದ ನಿವಾಸಿ ಮುನ್ನಾ ಮೃತ ವ್ಯಕ್ತಿ. ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸುವ ವೇಳೆ ಕುಸಿದು ಬಿದ್ದು ಮುನ್ನಾ ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮುನ್ನಾ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಲಾರಿ ಓಡಿಸಿದ ಪೇಮೆಂಟ್ ಪಡೆದು ಮನೆಗೆ ಹಿಂದಿರುಗುವಾಗ ಘಟನೆ ನಡೆದಿದೆ. ದ್ವಿಚಕ್ರ …

Read More »

ಅನಾರೋಗ್ಯದಿಂದ ಬಳಲುತ್ತಿದ್ದ ಒಂದೂವರೆ ವರ್ಷದ ಮಗು ಚಿಕಿತ್ಸೆ ಫಲಿಸದೇ ಸಾವು

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಒಂದೂವರೆ ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ನಗರೂರಿನಲ್ಲಿ ನಡೆದಿದೆ. ಚಾರ್ವಿಕ @ ದಿಯಾ ಮೃತ ಮಗು. ಚಾರ್ವಿಕ ಚಿತ್ರದುರ್ಗದ ಯಳಗೂಡು ನಿವಾಸಿಗಳಾದ ಸುಪ್ರಿತ ಹಾಗೂ ಪ್ರದೀಪ್ ದಂಪತಿಯ ಪುತ್ರಿಯಾಗಿದ್ದು, ಅಜ್ಜಿ ರೇಖಾ ಹಾಗೂ ತಾತ ಗುರು ಅವರ ಮನೆಯಲ್ಲಿ ಸಾಕಿಕೊಂಡಿದ್ದರು. ಮಗುವನ್ನ ಹಾಲು ಬಿಡಿಸುವ ಉದ್ದೇಶದಿಂದ ಅಜ್ಜಿ ತಾತನ ಮನೆಯಲ್ಲಿ ಬಿಡಲಾಗಿತ್ತು. ಮೂರು ದಿನದ ಹಿಂದೆ ಕಫ …

Read More »

ಚಾಕಲೇಟ್ ಕದ್ದಿದ್ದಕ್ಕೆ ಬಾಲಕನಿಗೆ ಮನಸೋ ಇಚ್ಛೆ ಹಲ್ಲೆ – ಆರೋಪಿ ಅರೆಸ್ಟ್‌

ವಿಜಯಪುರ: ಜಿಲ್ಲೆಯಲ್ಲಿ ಚಾಕಲೇಟ್ ಕದ್ದಿದ್ದಕ್ಕೆ ಬಾಲಕನಿಗೆ ಥಳಿಸಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಮಲಘಾಣ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಚಾಕಲೇಟ್‌ ಕದಿದ್ದಕ್ಕೆ ಅಂಗಡಿಯ ಮಾಲೀಕ ಅಶೋಕ್‌ ಪತ್ತಾರ ಎಂಬಾತ ಬಾಲಕನಿಗೆ ಥಳಿಸಿದ್ದ. ಇದರ ಬೆನ್ನಲ್ಲೇ ಬಾಲಕನ ತಂದೆ ರೆಹಮಾನ್ ವಾಲೀಕಾರ್‌ ಎಂಬುವವರು ದೂರು ನೀಡಿದ್ದರು. ದೂರಿನನ್ವಯ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಪೊಲೀಸರು ಆರೋಪಿ ಅಶೋಕ್‌ನನ್ನು ಬಂಧಿಸಿದ್ದಾರೆ.

Read More »

ಧರ್ಮದ ಬಗ್ಗೆ ಪ್ರೀತಿಯಿದ್ದರೆ ಅದನ್ನ ಮನಸ್ಸಿನಲ್ಲಿಟ್ಟುಕೊಳ್ಳಬೇಕು: ಭೋಜೇಗೌಡ

ಬೆಂಗಳೂರು: ಧರ್ಮದ ಬಗ್ಗೆ ಪ್ರೀತಿಯಿದ್ದರೆ ಅದನ್ನು ಮನಸಿನಲ್ಲಿಟ್ಟುಕೊಳ್ಳಬೇಕು ಅಂತ ಸಚಿವ ಬಸವರಾಜ್ ರಾಯರೆಡ್ಡಿ  ಹೇಳಿಕೆಗೆ ಜೆಡಿಎಸ್ MLC ಭೋಜೇಗೌಡ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪ್ರೀತಿ ತೋರಿಸಬೇಕಾದ್ರೆ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು. ಪ್ರೀತಿಯನ್ನು ತೋರ್ಪಡಿಸುವ ಅಗತ್ಯವಿಲ್ಲ. ರಾಜಕೀಯ ಹೇಳಿಕೆ ಕೊಡುವಾಗ ರಾಯರೆಡ್ಡಿ ಬಾಲಿಶ ಹೇಳಿಕೆ ಕೊಡಬಾರದು ಎಂದು ಗುಡುಗಿದ್ದಾರೆ. ಯಾವುದೇ ಧರ್ಮವನ್ನು ಓಲೈಸುವ ಅಗತ್ಯವಿಲ್ಲ. 1985ರಲ್ಲೇ ಮಂತ್ರಿಯಾದ ನಿಮಗೆ ಅಗಾಧ ಅನುಭವವಿದೆ. ನಿಮ್ಮ ಹೇಳಿಕೆಯಿಂದ ಹಿಂದೂಗಳಿಗೆ ಸಹಜವಾಗಿ ನೋವು …

Read More »

Nepal Floods – Two US citizens of Tumakuru origin missing

ತುಮಕೂರು: ನೇಪಾಳದ ಪ್ರವಾಹದಲ್ಲಿ ಯು.ಎಸ್ ಪೌರತ್ವ ಹೊಂದಿರುವ ತುಮಕೂರು ಮೂಲದ ಇಬ್ಬರು ನಾಪತ್ತೆಯಾಗಿದ್ದಾರೆ. ತುಮಕೂರು ನಗರದ ನೃಪತುಂಗನ ಬಡಾವಣೆಯ ರಂಗುಸುಧೀರ್ (53), ಕೀರ್ತಿ ಆಚಾರ್ಯ (50) ನಾಪತ್ತೆಯಾಗಿದ್ದಾರೆ. ಯು.ಎಸ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಇವರು ಆಗಸ್ಟ್ 22ರಂದು ಯು.ಎಸ್‌ನಿಂದ 10 ಜನರ ತಂಡ ನೇಪಾಳಕ್ಕೆ ಹೊರಟಿದ್ದರು. 26ರ ಬೆಳಗ್ಗೆ 8:29ರಂದು ಸಂಬಂಧಿ ಗುರುಪ್ರಸಾದ್ ಎನ್ನುವವರಿಗೆ ಕೊನೆ ಕಾಲ್ ಮಾಡಿದ್ದರು. ಅಲ್ಲಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ. ಪರಿಣಾಮ ಅವರ ತುಮಕೂರಿನ ಮನೆಯ ಸದಸ್ಯರಲ್ಲಿ …

Read More »

ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ಲಿಯೋನೆಲ್ ಮೆಸ್ಸಿ ವಿದಾಯ

ಬ್ಯೂನಸ್ ಐರಿಸ್: ಫುಟ್‌ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ , ಅರ್ಜೆಂಟೀನಾದ ದಿಗ್ಗಜ ಲಿಯೋನೆಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್‌ಬಾಲ್ವೃತ್ತಿಜೀವನಕ್ಕೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ. 2026ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾತಂಡವು ಸ್ಪೇನ್ ವಿರುದ್ಧ ಸೋತ ಕೆಲವು ತಿಂಗಳುಗಳ ಬಳಿಕ, ಮೆಸ್ಸಿ ರಾಷ್ಟ್ರೀಯ ತಂಡಕ್ಕೆ ಗುಡ್‌ಬೈ ಹೇಳುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೈಬರಹದ ಭಾವನಾತ್ಮಕ ಪತ್ರವನ್ನು ಹಂಚಿಕೊಳ್ಳುವ ಮೂಲಕ 39 ವರ್ಷದ ಮೆಸ್ಸಿ ತಮ್ಮ ಎರಡು ದಶಕಗಳ …

Read More »

ಖೋಟಾ ನೋಟ್ ತಯಾರಿಕಾ ಜಾಲ ಪತ್ತೆ- ಏಳು ಮಂದಿ ಅರೆಸ್ಟ್

ರಾಮನಗರ: ಜಿಲ್ಲಾ ಕೇಂದ್ರದಲ್ಲಿ ದೊಡ್ಡ ಮಟ್ಟದ ಖೋಟಾ ನೋಟ್ ತಯಾರಿಕಾ ಜಾಲವನ್ನು ರಾಮನಗರ ಪೊಲೀಸರು ಭೇದಿಸಿದ್ದಾರೆ. ನಿರ್ಮಾಣ ಹಂತದ ಮನೆಯೊಂದರಲ್ಲಿ ನಕಲಿ ನೋಟು ತಯಾರಿಸುತ್ತಿದ್ದ ಖತರ್ನಾಕ್ ತಂಡವನ್ನು ಪೊಲೀಸರು ಬಂಧಿಸಿದ್ದು, ಸ್ಥಳದಲ್ಲಿ ಕೆಮಿಕಲ್ ಸೇರಿದಂತೆ ಹಲವು ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ರಾಮನಗರ ಟೌನ್ ವ್ಯಾಪ್ತಿಯ ಶಾಂತಿಲಾಲ್ ಲೇಔಟ್ ನಲ್ಲಿರುವ ಸಂತೋಷ್ ಎಂಬುವವರಿಗೆ ಸೇರಿದ ನಿರ್ಮಾಣ ಹಂತದ ಮನೆಯಲ್ಲಿ ಈ ಅಕ್ರಮ ಚಟುವಟಿಕೆ ನಡೆಯುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಐಜೂರು ಇನ್ಸ್ಪೆಕ್ಟರ್ ರಮೇಶ್ …

Read More »

ಕೆಪಿಎಸ್‌ಸಿ ಹಗರಣ | 40 ಲಕ್ಷಕ್ಕೆ ಹುದ್ದೆ ಡೀಲ್ – ಸಿಐಡಿ ಮುಂದೆ ಅಭ್ಯರ್ಥಿ ತಪ್ಪೊಪ್ಪಿಗೆ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ  ಪಶುವೈದ್ಯಾಧಿಕಾರಿ ನೇಮಕ ಅಕ್ರಮ ಪ್ರಕರಣಕ್ಕೆ ತನಿಖೆ ತೀವ್ರಗೊಂಡಿದ್ದು, ಸಿಐಡಿ  ಅಧಿಕಾರಿಗಳ ಮುಂದೆ ಅಭ್ಯರ್ಥಿಯೊಬ್ಬ ತನ್ನ ಕೃತ್ಯವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾನೆ. 30 ವರ್ಷದ ಅಭ್ಯರ್ಥಿ ಮಹಮದ್ ಸುಹೇಲ್ ಎಂಬಾತ ಸಿಐಡಿ ವಿಚಾರಣೆ ವೇಳೆ ಮಹತ್ವದ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ನೇಮಕಾತಿ ಹಗರಣದ ಕರಾಳ ಮುಖ ಬಯಲಾಗಿದೆ. ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಹುದ್ದೆ ಪಡೆಯಲು ಬರೋಬ್ಬರಿ 40 ಲಕ್ಷ ರೂ.ಗೆ ಡೀಲ್ ಕುದುರಿಸಲಾಗಿತ್ತು.ಡೀಲ್ ಪ್ರಕಾರ ಅಭ್ಯರ್ಥಿ ಸುಹೇಲ್ ಮುಂಗಡ …

Read More »

ಕಲ್ಮ ಹೇಳಿ ಹಜ್‌ಗೆ ಹೋಗಿ ಅಲ್ಲೇ ಇರಿ: ರಾಯರೆಡ್ಡಿ ವಿರುದ್ಧ ಸಿ.ಟಿ.ರವಿ ಕೆಂಡ

ಚಿಕ್ಕಮಗಳೂರು: ಇಸ್ಲಾಂ ಧರ್ಮ ಶ್ರೇಷ್ಠ ಅನ್ನೋದಾದರೆ ಕಲ್ಮ ಹೇಳಿ ಹಜ್‌ಗೆ ಹೋಗಿ, ವಾಪಸ್ ಬರಬರಬೇಡಿ. ಅಲ್ಲೇ ಇರಿ ಎಂದು ಸಚಿವ ಬಸವರಾಜ್ ರಾಯರೆಡ್ಡಿ ವಿರುದ್ಧ ಬಿಜೆಪಿ ನಾಯಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ರಾಯರೆಡ್ಡಿ ಅವರ ಹೇಳಿಕೆ ದಯೆಯೇ ಧರ್ಮದ ಮೂಲವೆಂದು ಹೇಳಿದ ಬಸವಣ್ಣನವರ ತತ್ವಗಳಿಗೆ ಮಾಡಿದ ಅಪಮಾನ. ಇಂತಹ ಮನಸ್ಥಿತಿಯವರು ಹಿಂದೂ ಅಥವಾ ಬಸವ ತತ್ವಗಳ ಯಾವುದೇ ವಿಚಾರದಲ್ಲಿ ಇರಲು ಯೋಗ್ಯರಲ್ಲ ಎಂದು ಕಿಡಿಕಾರಿದ್ದಾರೆ. ಇಸ್ಲಾಂ ಧರ್ಮ …

Read More »

ಶಿಕ್ಷಕರ ದಿನದ ಅಂಗವಾಗಿ ರಕ್ತದಾನ ಅಭಿಯಾನ

ಬೆಳಗಾವಿ: ಈ ಬಾರಿ ಶಿಕ್ಷಕರ ದಿನವನ್ನು ವಿಶಿಷ್ಟ ವಾಗಿ ಆಚರಿಸಲು ಮುಂದಾಗಿರುವ ಜಿಪಂ ಶಿಕ್ಷಕರಿಗೆ ಹೂವು, ಶುಭಾಶಯ ಬದಲು, ಜೀವ ಉಳಿಸುವ ರಕ್ತದಾನ ಮಾಡುವ ಮೂಲಕ ಗೌರವ ಸಲ್ಲಿಸುವ ವಿನೂತನ ಕಾರ್ಯಕ್ರಮವನ್ನು ಸೆ.3ರಂದು 14 ತಾಲೂಕುಗಳಲ್ಲಿ ಹಮ್ಮಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿಬಿರದ ಪೋಸ್ಟರ್ ಹಾಗೂ ಪ್ರಚಾರ ಸಾಮಗ್ರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕು ಕೇಂದ್ರಗಳಲ್ಲಿ ಸ್ವಯಂಪ್ರೇರಿತ ರಕ್ತದಾನ …

Read More »