ಉಳ್ಳಾಲ(ದಕ್ಷಿಣ ಕನ್ನಡ): ದೇರಳಕಟ್ಟೆಯಲ್ಲಿರುವ ಮುತ್ತೂಟ್ ಫೈನಾನ್ಸ್ನಲ್ಲಿ ದರೋಡೆಗೆ ಯತ್ನಿಸಿದ ಮೂವರು ಆರೋಪಿಗಳ ಪೈಕಿ ಕೇರಳ ಮೂಲದ ಇಬ್ಬರನ್ನು ಕೊಣಾಜೆ ಪೊಲೀಸರು ಹಾಗೂ ಸ್ಥಳೀಯರು ಸೇರಿ ಹಿಡಿದಿದ್ದಾರೆ. ಕೇರಳ ನಿವಾಸಿಗಳಾದ ಮುರಳಿ ಮತ್ತು ಇರ್ಷಾದ್ ಬಂಧಿತರು. ಶನಿವಾರ ಸಂಜೆ ರೈಲಿನಲ್ಲಿ ಬಂದಿದ್ದ ಈ ಮೂವರು ದೇರಳಕಟ್ಟೆ ಸಮೀಪ ರಾತ್ರಿವರೆಗೂ ಕಾದು ಕುಳಿತು ಕೃತ್ಯ ಎಸಗಲು ಮುಂದಾಗಿದ್ದರು. ತಡರಾತ್ರಿ 3 ಗಂಟೆ ವೇಳೆಗೆ ಡ್ರಿಲ್ ಮಷಿನ್ ಮೂಲಕ ಬಾಗಿಲು ಮುರಿಯಲು ಯತ್ನಿಸಿದ ಸಂದರ್ಭದಲ್ಲಿ ಸೈರನ್ …
Read More »Daily Archives: ಮಾರ್ಚ್ 30, 2025
ಇಟಗಿಯ ಮಹಾದೇವನಿಗೆ ಸೂರ್ಯ ಕಿರಣ ಸ್ಪರ್ಶ
ಕೊಪ್ಪಳ : ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಹಿಂದುಗಳಿಗೆ ಹೊಸವರ್ಷ. ಹೊಸವರ್ಷವನ್ನು ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸುತ್ತಾರೆ. ಇದೇ ವೇಳೆ ಜಗತ್ತಿಗೆ ಬೆಳಕು ನೀಡುವ ಸೂರ್ಯ ದೇವನು ಸಹ ತನ್ನ ಮೊದಲು ಕಿರಣವನ್ನು ದೇವರಿಗೆ ಸ್ಪರ್ಶ ಮಾಡುತ್ತಾನೆ. ವಿಸ್ಮಯವಾಗಿರುವ ಈ ಕೌತುಕ ನೋಡಲು ಜನ ಬೆಳಗ್ಗೆ ಕಾದು ಕುಳಿತಿರುತ್ತಾರೆ. ಹೌದು, ಪುರಾತನ ದೇವಾಲಯಗಳನ್ನು ನಿರ್ಮಿಸುವಾಗ ದೇವರ ಮೂರ್ತಿಗೆ ಯುಗಾದಿಯ ದಿನದಂದು ಸೂರ್ಯನ ಕಿರಣಗಳು ಸ್ಪರ್ಶಿಸುವಂತೆ ನಿರ್ಮಿಸಿರುವುದು ಕೌತುಕ ಮತ್ತು ವಿಶೇಷವಾಗಿದೆ. ಇಂಥ ಕೌತುಕ …
Read More »ರಾಯಚೂರು: ಬೀದಿ ನಾಯಿಗಳ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಸಾವು
ರಾಯಚೂರು: ಬಹಿರ್ದೆಸೆಗೆ ತೆರಳಿದ್ದ ವೇಳೆ ಬೀದಿ ನಾಯಿ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಕಸಬಾ ಲಿಂಗಸೂಗೂರು ಗ್ರಾಮದ ಬಾಲಕ ಚಿಕಿತ್ಸೆ ಫಲಕಾರಿಯಾಗಿದೆ ಇಂದು ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ರಾಯಚೂರು ಜಿಲ್ಲೆಯ ಕಸಬಾ ಲಿಂಗಸೂಗೂರು ಗ್ರಾಮದ ಸಿದ್ದಪ್ಪ ಬೀರಪ್ಪ(6) ಮೃತ ಬಾಲಕ. ಶನಿವಾರ ಸಂಜೆ ಸಮಯದಲ್ಲಿ ಬಾಲಕ ಸಿದ್ದಪ್ಪ ಬಹಿರ್ದೆಸೆಗೆಂದು ತೆರಳಿದ್ದ. ಈ ವೇಳೆ ಐದಾರು ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ್ದರಿಂದ ಬಾಲಕ ಗಂಭೀರ ಗಾಯಗೊಂಡಿದ್ದ. ಸ್ಥಳೀಯರು ನಾಯಿಗಳನ್ನು ಓಡಿಸಿ ಬಾಲಕನನ್ನು …
Read More »ಹೊಸ ಪಕ್ಷ ಕಟ್ಟಲು ಜನಾಭಿಪ್ರಾಯ ಬಂದರೆ ವಿಜಯದಶಮಿ ದಿನ ಉದ್ಘಾಟನೆ: ಶಾಸಕ ಯತ್ನಾಳ್
ವಿಜಯಪುರ: “ಯಡಿಯೂರಪ್ಪ ತನ್ನ ಮಗನ ಸ್ವಾರ್ಥಕ್ಕಾಗಿ ಹಿಂದುತ್ವದ ವ್ಯಕ್ತಿಗಳನ್ನು ತುಳಿದುಕೊಂಡು ಬಂದಿದ್ದಾರೆ. ಇವತ್ತು ನನ್ನನ್ನು ಸಹ ಯಡಿಯೂರಪ್ಪ ಹಾಗೂ ವಿಜಯೇಂದ್ರ ರಾಜಕೀಯವಾಗಿ ವಂಶ ಪರಂಪರೆ ಮುಂದುವರೆಯಬೇಕು ಎಂಬ ಕಾರಣಕ್ಕೆ ನನ್ನನ್ನು ತುಳಿಯುವ ಕೆಲಸ ಮಾಡಿದ್ದಾರೆ” ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಹೈಕಮಾಂಡ್ಗೆ ವಿನಂತಿ ಮಾಡುವೆ. ಈ ತರಹ ವಂಶಪರಂಪರೆ, ಭ್ರಷ್ಟಾಚಾರಿಗಳನ್ನು ತೆಗೆದುಹಾಕದಿದ್ದರೆ ಜನರ ವಿಶ್ವಾಸ ಹೋಗುತ್ತದೆ. ವಿಜಯೇಂದ್ರನೇ ಮುಂದಿನ ಮುಖ್ಯಮಂತ್ರಿ ಎಂದು …
Read More »ಇಡೀ ಪಂಚಮಸಾಲಿ ಸಮುದಾಯವನ್ನು ಯತ್ನಾಳ್ಗೆ ಬರೆದುಕೊಟ್ಟಿಲ್ಲ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು
ಬೆಳಗಾವಿ : ಇಡೀ ಪಂಚಮಸಾಲಿ ಸಮುದಾಯವನ್ನು ಯತ್ನಾಳ್ ಅವರಿಗೆ ಬರೆದುಕೊಟ್ಟಿಲ್ಲ. ಏ.13ರಂದು ಬೆಳಗಾವಿಯಲ್ಲಿ ಯತ್ನಾಳ್ ಪರವಾಗಿ ಹಮ್ಮಿಕೊಂಡಿರುವ ಪ್ರತಿಭಟನೆ ಅದು ವೈಯಕ್ತಿಕ ಎನ್ನುವ ಮೂಲಕ ಕೂಡಲಸಂಗಮ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಮಾತಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಶೇ.80ರಷ್ಟು ಪಂಚಮಸಾಲಿಗರು ಬಿಜೆಪಿಯಲ್ಲಿದ್ದಾರೆ ಅಂತಾ ಹೇಳಿದ್ದು ನನ್ನ ಮನಸ್ಸಿಗೆ ಬಹಳಷ್ಟು ನೋವಾಗಿದೆ. ಶ್ರೀಗಳು ಆ ರೀತಿ ಮಾತನಾಡಬಾರದಿತ್ತು. ಪಂಚಮಸಾಲಿ ಹೋರಾಟದಲ್ಲಿ …
Read More »ಕಲ್ಯಾಣ ಕರ್ನಾಟಕದ ರೈತರಿಗೆ ಯುಗಾದಿ ಕೊಡುಗೆ
ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗದ ರೈತಾಪಿ ಜನರಿಗೆ ಯುಗಾದಿ ಕೊಡುಗೆಯಾಗಿ ಭದ್ರಾ ಜಲಾಶಯದಿಂದ ತುಂಗಾಭದ್ರಾ ಕಾಲುವೆಗೆ ಎರಡು ಟಿಎಂಸಿ ನೀರು ಹರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಏಪ್ರಿಲ್ 1 ರಿಂದ 5ರ ಅವಧಿಯಲ್ಲಿ ಕಾಲುವೆಗೆ ನೀರು ಹರಿಸಲು ನಿರ್ಧರಿಸಲಾಗಿದ್ದು, ಇದು ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬೆಳೆದು ನಿಂತಿರುವ ಬೆಳೆಗಳಿಗೆ ಮತ್ತು ಇಲ್ಲಿನ ಜನರಿಗೆ ಕುಡಿಯುವ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಲಿದೆ. ಮಾರ್ಚ್ 30ರ ವರೆಗೆ ಭದ್ರಾ ಜಲಾಶಯದಲ್ಲಿ 28 …
Read More »ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕರು ನೀರುಪಾಲು
ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕರು ನೀರುಪಾಲು ಬಾಗಲಕೋಟೆ : ಇಲ್ಲಿನ ಕೃಷ್ಣಾ ನದಿಯಲ್ಲಿ ಯುಗಾದಿ ಪಾಡ್ಯದ ನಿಮಿತ್ತ ಸ್ನಾನಕ್ಕೆ ತೆರಳಿದ್ದ ಮೂವರು ಬಾಲಕರು ನೀರು ಪಾಲಾಗಿದ್ದಾರೆ. ಸೋಮಶೇಖರ ಬೊಮ್ಮಣ್ಣ ದೇವರಮನಿ (15), ಮಲ್ಲಪ್ಪ ಬಸಪ್ಪ ಬಗಲಿ (15) ಹಾಗೂ ಪರನಗೌಡ ಮಲ್ಲಪ್ಪ ಬೀಳಗಿ (17) ನೀರು ಪಾಲಾದವರು ಎಂದು ತಿಳಿದುಬಂದಿದೆ. ಮೂವರು ಬಾಗಲಕೋಟೆ ತಾಲೂಕಿನ ಇಲ್ಯಾಳ ಗ್ರಾಮದವರು. ಘಟನೆ ನಡೆದ ತಕ್ಷಣ ಮೀನುಗಾರರು ಕಾಣೆಯಾದವರಿಗಾಗಿ ಹುಡುಕಾಟ ನಡೆಸಿ ಸೋಮಶೇಖರ ಬೊಮ್ಮಣ್ಣ ದೇವರಮನಿಯ …
Read More »ಒಂದೇ ತಿಂಗಳಲ್ಲಿ ಪೊಲೀಸ್ ಕಮಿಷನರ್ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ಎರಡು ಬಾರಿ ರೌಡಿಗಳ ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿ: ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವವರನ್ನು ಪೊಲೀಸರು ರೌಡಿಶೀಟರ್ ಪಟ್ಟಿಗೆ ಸೇರಿಸಿರುತ್ತಾರೆ. ಅದಾದ ಬಳಿಕವೂ ಯಾವುದಾದ್ರೂ ಪ್ರಕರಣಗಳಲ್ಲಿ ಅವರ ಪಾತ್ರ ಕಂಡು ಬಂದರೆ ರೌಡಿಶೀಟರ್ ಹಣೆ ಪಟ್ಟಿಯಲ್ಲೇ ಮುಂದುವರಿಯುತ್ತಾರೆ. ಇನ್ನು 10 ವರ್ಷಗಳಲ್ಲಿ ಯಾವುದೇ ಕೃತ್ಯದಲ್ಲಿ ಭಾಗಿಯಾಗದಿದ್ದರೆ ಅಂತಹವರನ್ನು ಆ ಪಟ್ಟಿಯಿಂದ ತೆಗೆಯಲಾಗುತ್ತದೆ. ಹಾಗಾದರೆ ಬೆಳಗಾವಿ ನಗರದಲ್ಲಿ ಎಷ್ಟು ಜನರ ಮೇಲೆ ರೌಡಿಶೀಟರ್ ಕೇಸ್ ದಾಖಲಾಗಿದೆ? ರೌಡಿಗಳಿಗೆ ಪೊಲೀಸ್ ಕಮಿಷನರ್ ಹೇಳೋದೇನು? ಇಲ್ಲಿದೆ ಈಟಿವಿ ಭಾರತ ವಿಶೇಷ ವರದಿ. ಹೌದು, ಬೆಳಗಾವಿ ಅತ್ಯಂತ ಸೂಕ್ಷ್ಮ ನಗರ. …
Read More »ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರಿಗೆ ಮುಖ್ಯಮಂತ್ರಿ ಪದಕ
ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರಿಗೆ ಮುಖ್ಯಮಂತ್ರಿ ಪದಕ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ಅವರಿಗೆ ಮುಖ್ಯಮಂತ್ರಿ ಪದಕ ರಾಜ್ಯದ ಮತ್ತು ನೆರೆ ರಾಜ್ಯದ ನಕ್ಸಲರ ಶರಣಾಗತಿಯಲ್ಲಿ ಪ್ರಮುಖ ಪಾತ್ರ ನಿಂಬಾಳ್ಕರ್ ಕಾರ್ಯಕ್ಕೆ ಪ್ರಶಂಸೆ ಸರ್ಕಾರದಿಂದ ಗೌರವ ವಿತರಣೆ ರಾಜ್ಯದ ಮತ್ತು ನೆರೆ ರಾಜ್ಯದ ನಕ್ಸಲರ ಶರಣಾಗತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಜ್ಯದ ಗುಪ್ತಚರ ಇಲಾಖೆಯ ಮಹಾನಿರ್ದೇಶಕರಾದ ಹೇಮಂತ್ ನಿಂಬಾಳ್ಕರ್ ಅವರು 2024ನೇ ಸಾಲಿನ ಮುಖ್ಯಮಂತ್ರಿಯವರ ಪದಕದ ಭಾಜನರಾಗಿದ್ದಾರೆ. ರಾಜ್ಯದ ಮತ್ತು ನೆರೆ ರಾಜ್ಯದ …
Read More »ಬರುವ ಜೂನ 30 ರಿಂದ ಜುಲೈ 8 ರವರೆಗೆ ಗೋಕಾಕ ಗ್ರಾಮದೇವತೆಯರ ಜಾತ್ರೆ : ಶಾಸಕ ರಮೇಶ ಘೋಷಣೆ
ಗೋಕಾಕ:ಬರುವ ಜೂನ 30 ರಿಂದ ಜುಲೈ 8 ರವರೆಗೆ ಗೋಕಾಕ ಗ್ರಾಮದೇವತೆಯರ ಜಾತ್ರೆ : ಶಾಸಕ ರಮೇಶ ಘೋಷಣೆ ಬರುವ ಜೂನ 30 ರಿಂದ ಜುಲೈ 8 ರವರೆಗೆ ಗೋಕಾಕ ಗ್ರಾಮದೇವತೆಯರ ಜಾತ್ರೆ : ಶಾಸಕ ರಮೇಶ ಘೋಷಣೆ ಗೋಕಾಕ ಮಾ 30 : ಬರುವ ಜೂನ 30 ರಿಂದ ಜುಲೈ 8 ರವರೆಗೆ ಗೋಕಾಕ ಗ್ರಾಮದೇವತೆಯರ ಜಾತ್ರೆ ಅತ್ಯಂತ ವಿಜಂಭ್ರನೆಯಿಂದ ಜರುಗಲಿದೆ ಎಂದು ಶಾಸಕ ಹಾಗೂ ಜಾತ್ರಾ ಕಮಿಟಿಯ …
Read More »