ಬೆಳಗಾವಿ: ನಗರದಲ್ಲಿ ನಡೆಯುತ್ತಿರುವ ಶ್ರೀ ಗಣೇಶೋತ್ಸವ ಮೆರವಣಿಗೆ ವೇಳೆ ಗಣಪತಿ ವಿಸರ್ಜನೆ ಮಾಡಲು ಗಣೇಶ ಮಂಡಳಿಯವರು ವಿಳಂಬ ಮಾಡಿದ್ದಕ್ಕೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ ಘಟನೆ ರವಿವಾರ ರಾತ್ರಿ ಕಪಿಲೇಶ್ವರ ಬ್ರಿಡ್ಜ್ ಬಳಿ ನಡೆದಿದೆ. ರಾತ್ರಿ 9 ಗಂಟೆ ನಂತರ ಕರ್ಫ್ಯೂ ಆದೇಶಿಸಿದ್ದರೂ ಸಾರ್ವಜನಿಕ ಗಣೇಶ ಮಂಡಳಿಯವರು ಮೆರವಣಿಗೆ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಗುಂಪು ಚದುರಿಸಲು ಲಾಠಿ ಚಾರ್ಜ್ ನಡೆಸಿದರು. ರಾತ್ರಿ 12 ಗಂಟೆವರೆಗೂ ಕಪಿಲೇಶ್ವರ್ …
Read More »Monthly Archives: ಸೆಪ್ಟೆಂಬರ್ 2021
ಹೂಡಿಕೆ ಆಕರ್ಷಣೆ, ಉದ್ಯೋಗ ಸೃಷ್ಟಿಗೆ ಸಂಪರ್ಕ, ಮೂಲಸೌಕರ್ಯ ಸುಧಾರಣೆಯತ್ತ ಗಮನ: ನಿರಾಣಿ
ರಾಜ್ಯ ಸರ್ಕಾರ ಹೂಡಿಕೆಯನ್ನು ಆಕರ್ಷಿಸುವುದು ಹಾಗೂ ಉದ್ಯೋಗ ಸೃಷ್ಟಿಸುವುದಕ್ಕೆ ಸಂಪರ್ಕ ಮತ್ತು ಮೂಲಸೌಕರ್ಯ ಸುಧಾರಣೆಯತ್ತ ಗಮನ ಹರಿಸುತ್ತಿದೆ. ಈ ನಿಟ್ಟಿನಲ್ಲಿ ಬೃಹತ್, ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಕೈಗಾರಿಕಾ ನಾಯಕರಿಂದ ಸಲಹೆಗಳನ್ನು ಪಡೆದಿದ್ದಾರೆ. ಅವರೊಂದಿಗೆ ಕುಳಿತು ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತೇನೆ. ಹಲವು ವಿಷಯಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ಹಾಗೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕೆ ಇದು ಸಹಕಾರಿಯಾಗಿರಲಿದೆ ಎಂದು ಮುರುಗೇಶ್ ನಿರಾಣಿ ಟಿಎನ್ ಎಸ್‌ಇ ಗೆ ಹೇಳಿದ್ದಾರೆ. ಆಯ್ದ ಭಾಗ …
Read More »ಪಂಜಾಬ್ ಸಿಎಂ ಆಗಿ ಆಯ್ಕೆಯಾದ ಚನ್ನಿಗೆ ರಾಹುಲ್ ಅಭಿನಂದನೆ
ನವದೆಹಲಿ : ಚರಣ್ಜಿತ್ ಸಿಂಗ್ ಚನ್ನಿಯನ್ನು ಮುಂದಿನ ಪಂಜಾಬ್ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಅಭಿನಂದಿಸಿದರು ಮತ್ತು ಪಕ್ಷವು ರಾಜ್ಯದ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದನ್ನು ಮುಂದುವರಿಸಬೇಕು ಎಂದು ಹೇಳಿದರು. ಭಾನುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಚನ್ನಿ, ಸೋಮವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ, ಅಮರೀಂದರ್ ಸಿಂಗ್ ಉತ್ತರಾಧಿಕಾರಿಯಾಗಿದ್ದು, ಪಕ್ಷದಿಂದ ಅವಮಾನ ಮಾಡಲಾಗಿದೆ ಎಂದು ಶನಿವಾರ ರಾಜೀನಾಮೆ ನೀಡಿದರು. “ಹೊಸ ಜವಾಬ್ದಾರಿಗಾಗಿ ಶ್ರೀ …
Read More »ಖಾಸಗಿ ರೆಸಾರ್ಟ್‌ನಲ್ಲಿ ರೇವ್ ಪಾರ್ಟಿ: 11ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದ ಖಾಕಿ
ಬೆಂಗಳೂರು: ಡ್ರಗ್ ಪಾರ್ಟಿ ನಡೆಯುತ್ತಿದ್ದ ಆನೇಕಲ್‌ನ ರೆಸಾರ್ಟ್‌ನಲ್ಲಿ ದಾಳಿ ನಡೆಸಿದ ಪೊಲೀಸರು 4 ಮಲಯಾಳಿ ಮಹಿಳೆಯರು ಸೇರಿದಂತೆ 28 ಜನರನ್ನು ಬಂಧಿಸಿದ್ದಾರೆ.ನಿಷೇಧಿತ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಆನೇಕಲ್ ನ ಗ್ರೀನ್ ವ್ಯಾಲಿ ರೆಸಾರ್ಟ್ ನಲ್ಲಿ ನಡೆದ ಡ್ರಗ್ ಪಾರ್ಟಿಯಲ್ಲಿ ಬೆಂಗಳೂರಿನ ಹಲವು ಐಟಿ ಕಂಪನಿ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಮಲಯಾಳಿ ಸೇರಿದಂತೆ ಮೂವರನ್ನು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.
Read More »ಮಾಜಿ ಕೇಂದ್ರ ಸಚಿವರಿಗೆ ‘ವಿಡಿಯೋ’ ಸಂಕಷ್ಟ : ಪೊಲೀಸ್ ಆಯುಕ್ತರಿಗೆ ದೂರು ನೀಡಿದ ‘ಡಿ.ವಿ ಸದಾನಂದಗೌಡ’
ಬೆಂಗಳೂರು : ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದಗೌಡರ ವಿರುದ್ಧ ವಿಡಿಯೋವೊಂದನ್ನು ಕಿಡಿಗೇಡಿಗಳು ಹರಿಬಿಟ್ಟಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಡಿ ವಿ ಸದಾನಂದಗೌಡರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಪ್ ಪಂತ್ ಗೆ ದೂರು ನೀಡಿದ ಸದಾನಂದಗೌಡರು ‘ನನ್ನ ವಿರುದ್ಧ ಫ್ಯಾಬ್ರಿಕೇಟಡ್, ಫೇಕ್, ಮಿಶ್ರಿತ ವಿಡಿಯೋ ಒಂದನ್ನು ಮಾಡಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ, …
Read More »ಎಣ್ಣೆ ಮತ್ತಲ್ಲಿ ಅಡ್ಡಾದಿಡ್ಡಿ ಚಾಲನೆ; ಲಾರಿ ಡ್ರೈವರ್ನ ತಡೆದು ನಿಲ್ಲಿಸಿದ್ದೇ ದೊಡ್ಡ ಚಾಲೆಂಜ್
ಉಡುಪಿ: ಕುಡಿದ ಮತ್ತಲ್ಲಿ ಚಾಲಕನೋರ್ವ ಬೃಹತ್ ಕಂಟೈನರ್ ವಾಹನವನ್ನು ಅಡ್ಡಾದಿಡ್ಡಿ ಚಲಾಯಿಸಿ ಆತಂಕ ಉಂಟು ಮಾಡಿದ ಘಟನೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ನಡೆದಿದೆ. ಏಣ್ಣೆ ಏಟಲ್ಲಿ ಗಾಡಿ ಹತ್ತಿದ ಚಾಲಕ ಯದ್ವಾತದ್ವ ಗಾಡಿ ಚಲಾಯಸಿದ್ದಾನೆ. ಅಷ್ಟೇ ಅಲ್ಲದೆ ಹೆದ್ದಾರಿಯಲ್ಲಿ ವೇಗ ತಡೆಗಾಗಿ ಅಳವಡಿಸಿದ ಬ್ಯಾರಿಕೇಡ್ ಎಳೆದೊಯ್ದ ಬಹು ದೂರ ಸಾಗಿದ್ದಾನೆ. ವಾಹನವನ್ನು ತಡೆಯಲು ಮುಳ್ಳಿಕಟ್ಟೆ ರಿಕ್ಷಾ ಚಾಲಕರು ಹರಸಾಹಸ ಪಟ್ಟಿದ್ದು, ಕೊನೆಗೆ ಹೆಮ್ಮಾಡಿ ಬಳಿ ಕಂಟೈನರ್ …
Read More »ಡಾ.ರಾಜ್ ಕುಮಾರ್ ವೃತ್ತಿ ಜೀವನ ಆರಂಭಿಸಿದ ದೇವಸ್ಥಾನ ಇದೆ ನೋಡಿ
ಈಶ್ವರ ದೇವಸ್ಥಾನ ವಾಣಿಜ್ಯ ನಗರಿ ಹುಬ್ಬಳ್ಳಿಯ ಸ್ಟೇಷನ್ ರಸ್ತೆಯಲ್ಲಿದೆ. ಸ್ಟೇಷನ್ ರೋಡ್ನಲ್ಲಿರುವ ಈಶ್ವರ ದೇವಸ್ಥಾನಕ್ಕೆ ಒಂದು ವಿಶೇಷವಾದ ಶಕ್ತಿ ಇದೆ. ಹುಬ್ಬಳ್ಳಿ: ಜಿಲ್ಲೆಯಲ್ಲಿರುವ ಈಶ್ವರ ದೇವಸ್ಥಾನ (Ishwara Temple) ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿದೆ. ಪ್ರಸಿದ್ಧ ಆರೂಢ ಸಂಪ್ರದಾಯದ ಸಿದ್ದರೋಡ ಮಹಾಸ್ವಾಮಿಗಳು ತಪ್ಪಸ್ಸು ಮಾಡಿರುವ ದೇವಸ್ಥಾನ. ಚಾಲುಕ್ಯರ ಕಾಲದಲ್ಲಿ ಸ್ಥಾಪಿತವಾದ ದೇವಸ್ಥಾನ ಬಹಳ ಪ್ರಸಿದ್ಧಿಯನ್ನ ಪಡೆದಿದ್ದು, ಈ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆದು …
Read More »ವಿರೋಧ ಪಕ್ಷ ಕಾಂಗ್ರೆಸ್‌ಗೆ ಲಸಿಕೆ ಜ್ವರ: ಪ್ರಹ್ಲಾದ ಜೋಶಿ
ದಾವಣಗೆರೆ: ಸ್ಪೆಷಲ್ ಡ್ರೈವ್‌ಗೂ ಮುನ್ನ ದೇಶದಲ್ಲಿ 60 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದನ್ನು ಸೋನಿಯಾ ಗಾಂಧಿ ನೀಡಿದ್ದಾರಾ. ವಿರೋಧ ಪಕ್ಷ ಕಾಂಗ್ರೆಸ್‌ಗೆ ಲಸಿಕೆ ಜ್ವರ ಬಂದಿದೆ ಎಂದು ಕೊರೊನಾ ವಿಚಾರವಾಗಿ ವಿರೋಧ ಪಕ್ಷಗಳ ವಾದಕ್ಕೆ ಸಂಬಂಧಪಟ್ಟಂತೆ ದಾವಣಗೆರೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಬಳಿಕ ಪಂಜಾಬ್ ಮುಖ್ಯಮಂತ್ರಿ ವಿಚಾರವಾಗಿ ಮಾತನಾಡಿದ ಅವರು, ಇದ್ದ ಒಬ್ಬ ಮುಖ್ಯಮಂತ್ರಿಯನ್ನೂ ಕಾಂಗ್ರೆಸ್ ತೆಗೆದುಹಾಕಿದೆ. ಪಂಜಾಬ್ ಸಿಎಂ ರನ್ನು ತೆಗೆದುಹಾಕಿ ಕಾಂಗ್ರೆಸ್ ಗೊಂದಲದಲ್ಲಿದೆ. …
Read More »ಪ್ರಧಾನಿ ಮೋದಿ ಹೆಸರಲ್ಲಿ ಗೆಲವು ಕಷ್ಟ :ಮಾಜಿ ಸಿಎಂ ಬಿಎಸ್‌ವೈ
ದಾವಣಗೆರೆ: ಪ್ರತಿಪಕ್ಷಗಳನ್ನು ಹಗುರವಾಗಿ ಪರಿಗಣಿಸಬಾರದು. ಮುಂದಿನ ವಿಧಾನಸಭಾ ಚುನಾವಣಾ ದೃಷ್ಟಿಯಿಂದ ನಿರಂತರ ಪ್ರವಾಸದಿಂದ ಪಕ್ಷವನ್ನು ಸಂಘಟಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರು. ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಬಿಎಸ್‌ವೈ, ಜನರ ಸಂಕಷ್ಟಕ್ಕೆ ಸ್ಪಂದಿಸಿದ ಕಾರಣಕ್ಕೆ ನಾವು ಅಧಿಕಾರದಲ್ಲಿದ್ದೇವೆ. ಕೇಂದ್ರದಲ್ಲಿ ಮೋದಿಯವರ ನಾಯಕತ್ವ ದೊರೆತಿರುವುದೇ ನಮ್ಮೆಲ್ಲರ ಸೌಭಾಗ್ಯ ಎಂದರು. ಬಿಜೆಪಿ ಮುಖಂಡರನ್ನು ಕಾಂಗ್ರೆಸ್ ಮುಖಂಡರು ಸಂಪರ್ಕಿಸುತ್ತಿದ್ದಾರೆ. ಈ ಬಗ್ಗೆ ಎಲ್ಲರೂ …
Read More »ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್
ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ದಾವಣಗೆರೆಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಭಾಗಿಯಾಗಿದ್ದ ಯಡಿಯೂರಪ್ಪ, ನಮ್ಮ ಪಕ್ಷದ ಶಾಸಕರನ್ನು ಡಿ.ಕೆ. ಶಿವಕುಮಾರ್ ಸಂಪರ್ಕ ಮಾಡಿದ್ದಾರೆ. ಒಂದಿಬ್ಬರು ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಯಾರೂ ಕೂಡ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ. ಕಾಂಗ್ರೆಸ್ …
Read More »