ಗೋಕಾಕ: ಜನತೆ ಸ್ವಪ್ರೇರಣೆಯಿಂದ ಕೋವಿಡ್ ಲಸಿಕೆ ಪಡೆದು ಮಹಾಮಾರಿ ಕೋರೋನಾದಿಂದ ರಕ್ಷಣೆ ಪಡೆಯುವಂತೆ ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು. ಬುಧವಾರದಂದು ನಗರದ ಮುಪ್ಪಯ್ಯನಮಠದಲ್ಲಿ ವಾರ್ಡ ನಂ 29ರಲ್ಲಿಯ ಜನತೆಗೆ ಆರೋಗ್ಯ ಇಲಾಖೆಯಿಂದ ಕೋವಿಡ್ ಲಸಿಕೆ ಚುಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಕೋವಿಡ್ ಮಹಾಮಾರಿ ಹೆಚ್ಚಾಗುತ್ತಿದೆ. ಜನತೆ ಜಾಗೃತರಾಗಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೋರೋನಾ …
Read More »Daily Archives: ಏಪ್ರಿಲ್ 21, 2021
ಉಡುಪಿ; ಶಿರೂರು ಮಠಕ್ಕೆ ಉತ್ತರಾಧಿಕಾರಿ ಘೋಷಣೆ
ಉಡುಪಿ, ಏಪ್ರಿಲ್ 21; ಹಲವಾರು ವರ್ಷಗಳಷ್ಟು ಇತಿಹಾಸ ಹೊಂದಿರುವ ಉಡುಪಿಯ ಶಿರೂರು ಮಠಕ್ಕೆ ಉತ್ತರಾಧಿಕಾರಿ ಘೋಷಣೆ ಮಾಡಲಾಗಿದೆ. ಮೇ 11 ರಿಂದ 14ರ ವರೆಗೆ ಪಟ್ಟಾಭಿಷೇಕ ಪ್ರಕ್ರಿಯೆ ನಡೆಯಲಿದೆ. ಬುಧವಾರ ಸೋದೆ ವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಶಿರೂರು ಮಠಕ್ಕೆ ನೂತನ ಪೀಠಾಧಿಕಾರಿ ಘೋಷಣೆಯಾಗಿದೆ. 16 ವರ್ಷದ ವಟು ಅನಿರುದ್ಧ್ ಸರಳತ್ತಾಯ ಮಠಕ್ಕೆ ಉತ್ತರಾಧಿಕಾರಿಯಾಗಿದ್ದಾರೆ. ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ವಟು ಅನಿರುದ್ಧ ಸರಳತ್ತಾಯ ಎಸ್‌ಎಸ್‌ಎಲ್‌ಸಿ ಯನ್ನು ಉಡುಪಿಯ ವಿದ್ಯೋದಯ …
Read More »ರೈತರಿಗೆ ಸಿಹಿ ಸುದ್ದಿ; ಬೀದರ್ ಸಕ್ಕರೆ ಕಾರ್ಖಾನೆಗೆ ನೂತನ ಅಧ್ಯಕ್ಷರ ನೇಮಕ
ಬೀದರ್, ಏಪ್ರಿಲ್ 21; ಕಳೆದ ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ಹುಮನಾಬಾದ್ ತಾಲೂಕಿನ ಹಳ್ಳಿಖೇಡ್ (ಬಿ) ಸಮೀಪ ಇರುವ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ನೂತನ ಅಧ್ಯಕ್ಷರಾಗಿ ಸುಭಾಷ್ ಕಲ್ಲೂರ್ ಅವಿರೋಧ ಆಯ್ಕೆಯಾಗಿದ್ದಾರೆ. ಬುಧವಾರ ಕಾರ್ಖಾನೆ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಯಿತು. ಸುಭಾಷ್ ಕಲ್ಲೂರ್ ಅಧ್ಯಕ್ಷರಾಗಿ, ಶೈಲೇಂದ್ರ ಬೆಲ್ದಾಳೆ ಉಪಾಧ್ಯಕ್ಷರಾಗಿ ಆಯ್ಕೆಯಾದರು. 300 ಕೋಟಿ ರೂ.ಗೂ ಅಧಿಕ ನಷ್ಟದಲ್ಲಿರುವ ಕಾರ್ಖಾನೆ ಆಡಳಿತ ಮಂಡಳಿಗೆ ಇತ್ತೀಚೆಗೆ …
Read More »ಒಂದೇ ದಿನ 301 ಸೊಂಕಿತರು ಪತ್ತೆಯಾಗಿದ್ದು ಖಾನಾಪೂರ ತಾಲ್ಲೂಕಿನಲ್ಲಿ 144 ಜನರಿಗೆ ಸೊಂಕು
ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಒಂದೇ ದಿನ 301 ಸೊಂಕಿತರು ಪತ್ತೆಯಾಗಿದ್ದು ಖಾನಾಪೂರ ತಾಲ್ಲೂಕಿನಲ್ಲಿ 144 ಜನರಿಗೆ ಸೊಂಕು ತಗಲಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು ಬೆಳಗಾವಿ ಜಿಲ್ಲೆಯ ಪಾಲಿಗೆ ಇವತ್ತು ಭೀತಿ ಹುಟ್ಟಿಸುವ ಶಾಕಿಂಗ್ ನ್ಯುಸ್ ಹೊರಬಿದ್ದಿದೆ.
Read More »ಮದುವೆ ಮಾಡು.. ಕೋವಿಡ್ ನೋಡು..
ಧಾರವಾಡ: ತುಂಬಿ ತುಳುಕುತ್ತಿರುವ ಬಟ್ಟೆ ಅಂಗಡಿ, ಕೊಂಡ ಸಾಮಗ್ರಿಗಳನ್ನು ಕಟ್ಟಿಡಲುಆಗದ ಭಾಂಡೆ ಅಂಗಡಿ, ಒಂಟಿ ಕಾಲಿನಲ್ಲಿ ನಿಂತುಬಂಗಾರ ಕೊಳ್ಳುತ್ತಿರುವವರಿಗೆ ಕುಳಿತುಕೊಳ್ಳಿಎಂದು ಹೇಳಲಾರದ ಸ್ಥಿತಿಯಲ್ಲಿರುವಅಕ್ಕಸಾಲಿಗರು, ಇನ್ನು ಹೋಟೆಲ್‌ಗಳಲ್ಲಿ ಸರತಿ ಸಾಲು. ಕೋವಿಡ್ ಮಹಾಮಾರಿಗೆ ಹೆದರಿ ಎಲ್ಲರೂ ಬಿಲ ಸೇರುತ್ತಾರೆ ಎಂದುಕೊಂಡರೆ ಜಿಲ್ಲೆಯಲ್ಲಿ ಮಾತ್ರ ಕೋವಿಡ್ ಜನರು ಕ್ಯಾರೇ ಎನ್ನದೆ ಎಲ್ಲರೂ ಮದುವೆ ಸಂಭ್ರಮದಲ್ಲಿ ಮುಳುಗಿಹೋಗಿದ್ದು, ಜವಳಿ ಸಾಲಿನಲ್ಲಿ ಝಳ ಝಳಝಳಪಿಸುವ ಬಟ್ಟೆ ಹಾಕಿಕೊಂಡು ಆರಾಮಾಗಿ ಓಡಾಡುತ್ತಿದ್ದಾರೆ. ಹೌದು…, ಕಳೆದ ವರ್ಷವೂ ಮಕ್ಕಳು, …
Read More »ಧೋನಿ ತಂದೆ-ತಾಯಿಗೆ ಕರೊನಾ ಸೋಂಕು! ಆಸ್ಪತ್ರೆಗೆ ದೌಡಾಯಿಸಿದ ದಂಪತಿ
ರಾಂಚಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ತಂದೆ ತಾಯಿಗೆ ಕರೊನಾ ಸೋಂಕು ದೃಢವಾಗಿದೆ. ವರದಿ ಬಂದ ತಕ್ಷಣ ದಂಪತಿ ರಾಂಚಿಯ ಪ್ಲಸ್ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆದಿರುವುದಾಗಿ ತಿಳಿಸಲಾಗಿದೆ. ಧೋನಿಯವರ ತಂದೆ ಪಾನ್ ಸಿಂಗ್ ಹಾಗೂ ತಾಯಿ ದೇವಕಿ ದೇವಿ ಅವರ ಆರೋಗ್ಯ ಸ್ಥಿರವಾಗಿದೆ. ಕರೊನಾ ದೃಢವಾಗಿದೆ ಹಾಗೂ ಅವರಲ್ಲಿ ಯಾವುದೇ ಗಂಭೀರ ಸಮಸ್ಯೆ ಕಾಣಿಸಿಕೊಂಡಿಲ್ಲ. ಆಕ್ಸಿಜನ್ ಲೆವೆಲ್ ಉತ್ತಮವಾಗಿದೆ ಮತ್ತು ಶ್ವಾಸಕೋಶಗಳು …
Read More »ಕೋವಿಡ್ ಆರ್ಭಟ : ತಮ್ಮ ಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದ ಸಿದ್ದರಾಮಯ್ಯ!
ಬೆಂಗಳೂರು : ಕೋವಿಡ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಮನೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನ ತಮ್ಮ ನಿವಾಸದ ಬಾಗಿಲಿಗೆ ಬೋರ್ಡ್ ಒಂದನ್ನು ಹಾಕಿದ್ದಾರೆ. ಕೋವಿಡ್ ಮೊದಲ ಅಲೆಯಲ್ಲಿ ಸಿದ್ದರಾಮಯ್ಯನವರಿಗೆ ಸೋಂಕು ತಗುಲಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಅವರು ಸದ್ಯ ಎಲ್ಲಿಗೆ ಹೋದರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ. ಅಲ್ಲದೆ ಕೋವಿಡ್ ಸೋಂಕಿನ ಬಗ್ಗೆ ತುಂಬಾ ಜಾಗೃತರಾಗಿದ್ದಾರೆ. ರಾಜ್ಯದಲ್ಲಿ ನಿನ್ನೆ 21,794 …
Read More »ಹೈಕೋರ್ಟ್ ಆದೇಶದ ಹಿನ್ನೆಲೆ: ʼಸಾರಿಗೆ ನೌಕರʼರ ಮುಷ್ಕರಕ್ಕೆ ತಾತ್ಕಾಲಿಕ ಬ್ರೇಕ್..!
ಬೆಂಗಳೂರು: 6ನೇ ವೇತನ ಆಯೋಗದ ಜಾರಿಗಾಗಿ ಪಟ್ಟು ಹಿಡಿದ ಕುಳಿತಿದ್ದ ಸಾರಿಗೆ ನೌಕಕರ ಮುಷ್ಕರಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದು, ಸೇವೆ ಹಾಜರಾಗುವುದಾಗಿ ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ‘ಸಾರಿಗೆ ನೌಕರರ ಮುಷ್ಕರವನ್ನ ತಾತ್ಕಾಲಿಕವಾಗಿ ಹಿಂಪಡೆಯುತ್ತೇವೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸೇವೆಗೆ ಹಾಜರಾಗ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ‘ನ್ಯಾಯಮೂರ್ತಿಗಳ ಹೇಳಿಕೆವನ್ನ ನಾವು ಗೌರವಿಸುತ್ತೇವೆ. ಈ ಪರಿಸ್ಥಿತಿಯಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ. …
Read More »ಬೆಡ್ ಸಿಗದೆ ಆಸ್ಪತ್ರೆಗಳ ಮುಂದೆ ಅಂಬುಲೆನ್ಸ್ ಕ್ಯೂ..!
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಜೋರಾಗಿದೆ. ಎಲ್ಲಿ ನೋಡಿದರು ಕೂಡ ಕೊರೊನಾ ರೋಗಿಗಳ ನರಳಾಟ ಕಂಡುಬರುತ್ತಿದೆ. ಈ ನಡುವೆ ಜನ ಆಸ್ಪತ್ರೆ, ಚಿತಾಗಾರ, ಪಿಎಚ್‍ಸಿ ಸೆಂಟರ್ ಗಳಲ್ಲಿ ಕ್ಯೂ ನಿಂತು ಪರದಾಡುವಂತ ಪರಿಸ್ಥಿತಿ ಬಂದಿದೆ. ಕೊರೊನಾ ಸೋಂಕಿತರನ್ನು ಹೊತ್ತು ತರುವ ಅಂಬುಲೆನ್ಸ್ ಬೆಡ್ ಸಿಗದೆ ಆಸ್ಪತ್ರೆಗಳ ಮುಂದೆ ಕ್ಯೂ ನಿಂತರೆ, ಅಂತ್ಯಕ್ರಿಯೆಗಾಗಿ ಮೃತದೇಹಗಳನ್ನ ಹೊತ್ತು ಚಿತಾಗಾರಗಳ ಬಳಿ ಅಂಬುಲೆನ್ಸ್ ಸರದಿಯಲ್ಲಿ ನಿಲ್ಲುವಂತಹ ಪರಿಸ್ಥಿತಿ ಬಂದೊದಗಿದೆ. ಅಂಬುಲೆನ್ಸ್ ಕಥೆ ಈ ರೀತಿಯಾದರೆ …
Read More »ತರಕಾರಿ ಮಾರುಕಟ್ಟೆಯನ್ನು ಲಾಕ್ ಡೌನ್ ಹಿನ್ನಲೆಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಬಂದ್ ಮಾಡಲಾಗುವುದು
ಬೆಳಗಾವಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಗಂಣದಲ್ಲಿರುವ ತರಕಾರಿ ಮಾರುಕಟ್ಟೆಯನ್ನು ಲಾಕ್ ಡೌನ್ ಹಿನ್ನಲೆಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಬಂದ್ ಮಾಡಲಾಗುವುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಕರೋನಾ ಎರಡನೇ ಅಲೆ ಹೆಚ್ಚಾಗಿರುವುದರಿಂದ ಏ.20 ರಂದು ಸರ್ಕಾರ ಹೊರಡಿಸಿದ ಆದೇಶ ಸಂ. ಆರ್ ಡಿ 158 ಟಿಎನ್ ಆರ್ 2020 ಅನ್ವಯ ಹಾಗೂ ಕೋವಿಡ್-19ರ ರಾಜ್ಯ ಮಾರ್ಗಸೂಚಿ ನಿಯಮಗಳ ಪ್ರಕಾರ …
Read More »