Breaking News

Monthly Archives: ಫೆಬ್ರವರಿ 2021

ಪರಿಷತ್‍ನ ಸಭಾಪತಿ ಚುನಾವಣೆಗೆ ಹೊರಟ್ಟಿ- ನಜೀರ್ ಅಹಮ್ಮದ್ ನಾಮಪತ್ರ ಸಲ್ಲಿಕೆ

ಬೆಂಗಳೂರು,ಫೆ.8- ನಾಳೆ ನಡೆಯಲಿರುವ ವಿಧಾನಪರಿಷತ್‍ನ ಸಭಾಪತಿ ಚುನಾವಣೆಗೆ ಮಾಜಿ ಸಚಿವರಾದ ಬಸವರಾಜ್ ಹೊರಟ್ಟಿ ಹಾಗೂ ನಜೀರ್ ಅಹಮ್ಮದ್ ಸ್ಪರ್ಧೆಗಿಳಿದಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಹಾಗೂ ಕಾಂಗ್ರೆಸ್‍ನಿಂದ ನಜೀರ್ ಅಹಮ್ಮದ್ ನಾಮಪತ್ರ ಸಲ್ಲಿಸಿದ್ದು, ಚುನಾವಣೆ ನಾಳೆ ನಡೆಯಲಿದೆ. ಪರಿಷತ್‍ನ ಸಭಾಪತಿಯಾಗಿದ್ದ ಪ್ರತಾಪ್‍ಚಂದ್ರ ಶೆಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಾಳೆ ಚುನಾವಣೆ ನಡೆಯಲಿದೆ.ಈಗಿನ ಪರಿಷತ್ ಬಲಾಬಲದ ಪ್ರಕಾರ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿ …

Read More »

“ದೇವೇಗೌಡರಿಗೆ ನಾನು ಅಭಾರಿಯಾಗಿದ್ದೇನೆ” : ರಾಜ್ಯಸಭೆಯಲ್ಲಿ ಮೋದಿ ಭಾಷಣದ ಹೈಲೈಟ್ಸ್

ನವದೆಹಲಿ, ಫೆ.8 (ರಾಜ್ಯಸಭೆ)- ಕೃಷಿ ಕಾಯ್ದೆಯ ಬಗ್ಗೆ ಕೆಲವರು ರಾಜಕೀಯ ಮಾಡಿ ದೇಶದ ಜನರ ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಕೃಷಿ ಬದಲಾವಣೆ ಅಗತ್ಯವಾಗಿದ್ದು , ಅನ್ನದಾತರಿಗೆ ಎಲ್ಲಾ ರೀತಿಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಅಭಯ ನೀಡಿದ್ದಾರೆ. ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳು ಮಾಡಿದ ವಂದನಾರ್ಪಣೆ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿಪಕ್ಷಗಳ ವಿರುದ್ಧ ಟೀಕಾ ಪ್ರಹಾರ …

Read More »

ಬಿಜೆಪಿ ಮುಖಂಡನ ಮುಖಕ್ಕೆ ಮಸಿ ಬಳಿದವರಿಗೆ 1 ಲಕ್ಷ:

ಮಂಗಳೂರು: ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿದವರಿಗೆ 1 ಲಕ್ಷ ರೂ ನೀಡುವುದಾಗಿ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್, ಬಿಲ್ಲವ ಸಮುದಾಯದ ನಾಯಕಿ ಪ್ರತಿಭಾ ಕುಳಾಯಿ ಹೇಳಿದ್ದಾರೆ. ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ, ಕೋಟಿ ಚೆನ್ನೈಯ್ಯರ ವಿರುದ್ಧ ಕೀಳಾಗಿ ಮಾತನಾಡಿದ್ದರು. ನಾಲ್ಕು ದಿನಗಳ ಒಳಗಾಗಿ ಜಗದೀಶ್ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ ಬಳಿಯುತ್ತೇವೆ. ಹೀಗೆ ಮಸಿ ಬಳಿಯುವ ಬಿಲ್ಲವ ಯುವಕರಿಗೆ 1 ಲಕ್ಷ …

Read More »

ಒಂದು ಟ್ವೀಟ್ ಮತ್ತು ಟೂಲ್​ಕಿಟ್​ನಿಂದ ಹಲವು ಸಂಗತಿಗಳು ಬಯಲಾಗಲಿವೆ: ವಿದೇಶಾಂಗ ಸಚಿವ

ದೆಹಲಿ: ದೇಶದಲ್ಲಿ ನಡೆಯುತ್ತಿರುವ ರೈತ ಹೋರಾಟದ ಬಗ್ಗೆ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಮಾಡಿದ್ದ ಟ್ವೀಟ್​ಗೆ, ಭಾರತೀಯ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದು ಸರಿ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಮರ್ಥನೆ ಮಾಡಿಕೊಂಡಿದ್ದಾರೆ. ಸ್ವೀಡನ್​ನ ಯುವ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್​ಬರ್ಗ್ ಡಿಲೀಟ್ ಮಾಡಿರುವ ಟ್ವೀಟ್​ನಲ್ಲಿ ಟೂಲ್​ಕಿಟ್ ಡಾಕ್ಯುಮೆಂಟ್ ಹಂಚಿಕೊಂಡಿದ್ದಳು. ಅದಾದ ಬಳಿಕ ದೆಹಲಿ ಪೊಲೀಸರು, ಟೂಲ್​ಕಿಟ್​ಗೆ ಖಲಿಸ್ತಾನಿ ಸಂಬಂಧ ಇರುವುದನ್ನು ಪತ್ತೆಮಾಡಿದ್ದರು. ಈ ಘಟನೆಗಳು ನಡೆದು ಎರಡು ದಿನಗಳ ಬಳಿಕ (ಫೆ.6) …

Read More »

ಚಹಾ, ಯೋಗದ ಮೇಲೂ ಸಂಚು: ನರೇಂದ್ರ ಮೋದಿ ಟೀಕೆ

ಸೋನಿತ್‌ಪುರ : ಭಾರತದ ಹೆಸರಿಗೆ ಮಸಿ ಬಳಿಯುವುದಕ್ಕಾಗಿ ಹೊಂಚು ಹಾಕುತ್ತಿರುವ ಜಾಗತಿಕ ಸಂಚುಕೋರರು ನಮ್ಮ ಚಹಾ, ಯೋಗವನ್ನೂ ಬಿಟ್ಟಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟೀಕಿಸಿದ್ದಾರೆ. ಈ ಮೂಲಕ ಸ್ವೀಡಿಶ್‌ ಹೋರಾಟಗಾರ್ತಿ ಗ್ರೆಟಾ ಥನ್ಬರ್ಗ್‌ ಟ್ವೀಟ್‌ ಮಾಡಿದ್ದ ವಿವಾದಿತ ಟೂಲ್‌ಕಿಟ್‌ ಬಗ್ಗೆ ಪ್ರಧಾನಿ ಇದೇ ಮೊದಲ ಬಾರಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸ್ಸಾಂನ ಸೋನಿತ್‌ಪುರದಲ್ಲಿ ಮಾತನಾಡಿ, ವಿವಾದಿತ ಟೂಲ್‌ಕಿಟ್‌ನಲ್ಲಿ ನಮ್ಮ ಚಹಾ, ಯೋಗಾ ವಿರುದ್ಧವೂ ಅಪಪ್ರಚಾರ ಮಾಡುವ ಸಂಚಿತ್ತು ಎನ್ನುವುದನ್ನು …

Read More »

ಚಿನ್ನಮ್ಮನ ಬೆಂಗಳೂರು ವಾಸ ಅಂತ್ಯ: ತಮಿಳುನಾಡಿನತ್ತ ಹೊರಟ ವಿ.ಕೆ. ಶಶಿಕಲಾ

ಬೆಂಗಳೂರು: ಜೈಲು ವಾಸ ಮುಗಿಸಿರುವ ತಮಿಳರ ಚಿನ್ನಮ್ಮ, ಎಐಎಡಿಎಂಕೆಯ ಉಚ್ಛಾಟಿತ ನಾಯಕಿ ವಿ.ಕೆ. ಶಶಿಕಲಾ ಇಂದು ತಮಿಳುನಾಡಿಗೆ ಹೊರಟಿದ್ದಾರೆ. ಇದರೊಂದಿಗೆ ಚಿನ್ನಮ್ಮನ ಕೆಲವು ವರ್ಷಗಳ ಬೆಂಗಳೂರು ವಾಸ ಇಂದಿಗೆ ಅಂತ್ಯವಾಗಿದೆ. ಕಳೆದೊಂದು ವಾರದಿಂದ ನಗರದ ಪ್ರೆಸ್ಟಿಜ್ ಗಾಲ್ಫ್ ಶೈರ್ ಕ್ಲಬ್ ನಲ್ಲಿ ಕಾಲ ಕಳೆದಿದ್ದ ಶಶಿಕಲಾ ಇಂದು ಬೆಳಗ್ಗೆ ತಮಿಳುನಾಡಿನತ್ತ ಹೊರಟಿದ್ದಾರೆ. ಅತ್ತಿಬೆಲೆ, ಹೊಸೂರು ಮಾರ್ಗವಾಗಿ ಶಶಿಕಲಾ ತಮಿಳುನಾಡಿಗೆ ಹೋಗಲಿದ್ದಾರೆ. ಮಾರ್ಗಮಧ್ಯೆ ಸಾವಿರಾರು ಮಂದಿ ಬೆಂಬಲಿಗರು ಸೇರಿದ್ದು, ಶಶಿಕಲಾ ಅವರನ್ನು …

Read More »

ಮತ್ತೆ ಕುಸಿತ ಕಂಡ ಬಂಗಾರದ ಬೆಲೆ

ನವದೆಹಲಿ : ಚಿನ್ನ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದೀರಾ? ಹಾಗಾದರೆ ನಿಮಗೊಂದು ಶುಭ ಸುದ್ದಿ. ಇಲ್ಲಿಯವರೆಗೆ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆ ಈಗ ಕ್ರಮೇಣವಾಗಿ ಕುಸಿಯುತ್ತಿದೆ. ಇದರಿಂದಾಗಿ ಬಂಗಾರ ಕೊಳ್ಳಬೇಕೆಂದುಕೊಂಡಿದ್ದ ಆಭರಣ ಪ್ರಿಯರಿಗೆ ಇದೊಂದು ಸಮಾಧಾನಕರ ಸಂಗತಿ. ಈ ಹಿಂದೆ ಗರಿಷ್ಠ 56,000 ರೂಗಳನ್ನು ತಲುಪಿದ್ದು, ಪ್ರಸ್ತುತ 10 ಗ್ರಾಂ ಬೆಲೆ ಈಗ 48,000 ರೂ.ಗೆ ಕುಸಿದಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 48,000 ರೂ. 22 ಕ್ಯಾರೆಟ್ …

Read More »

ಮೇಘಾಲಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಿದೆ.

ಶಿಲ್ಲಾಂಗ್: ದೇಶದಲ್ಲಿ ತೈಲೋತ್ಪನ್ನಗಳ ದರಗಳು ಏರಿಕೆಯಾಗಿದ್ದು, ದೇಶಾದ್ಯಂತ ಜನರು ಈ ಬಗ್ಗೆ ಕಿಡಿ ಕಾರುತ್ತಿದ್ದಾರೆ. ಈ ನಡುವೆ ಮೇಘಾಲಯ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಿದೆ. ಹೌದು ಈ ಬಗ್ಗೆ ಮೇಘಾಲಯ ಮುಖ್ಯಮಂತ್ರಿ ಕನ್ರಾಡ್ ಸಂಗ್ಮಾ ಮಾಹಿತಿ ನೀಡಿದ್ದು, ರಾಜ್ಯದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಸೋಮವಾರ ಮಧ್ಯರಾತ್ರಿಯಿಂದ 2 ರೂ.ಗೆ ಇಳಿಸಲು ಮೇಘಾಲಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ. ‘ಮೇಘಾಲಯದಲ್ಲಿ ಇತ್ತೀಚೆಗೆ ಪೆಟ್ರೋಲ್ ಮತ್ತು ಡೀಸೆಲ್ …

Read More »

ಖಾತೆ ಬಗ್ಗೆ ಅಸಮಾಧಾನ ಹೊರಹಾಕಿದ ಅರವಿಂದ ಲಿಂಬಾವಳಿ

ಚಾಮರಾಜನಗರ (ಫೆ.07)  ಸಚಿವ ಸಂಪುಟ ವಿಸ್ತರಣೆ ನಂತರ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಎಲ್ಲವು ಸರಿಯಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗಗೊಂಡಿದೆ. ಅರಣ್ಯ ಖಾತೆ ನೀಡಿರುವುದಕ್ಕೆ ಸಚಿವ ಅರವಿಂದ ಲಿಂಬಾವಳಿ ಪರೋಕ್ಷವಾಗಿ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ.  ಚಾಮರಾಜನಗರದಲ್ಲಿ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ನನಗೆ ಎರಡು ಖಾತೆ ಕೊಟ್ಟಿದ್ದಾರೆ. ರಾತ್ರಿ ಹೊತ್ತು ಕಾಡಿನಲ್ಲಿ ಇರಬೇಕು, ಹಗಲು ವೇಳೆ ನಾಡಿಗೆ ಬರಬೇಕು, ಕಾಡು ನಾಡು ಎರಡನ್ನೂ …

Read More »

ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಕಂಬಳ

ಕೋವಿಡ್ ನಿಯಮಗಳ ನಡುವೆ ಕರಾವಳಿಯಲ್ಲಿ ಕಂಬಳ ಕ್ರೀಡೆ ಅದ್ಧೂರಿಯಾಗಿ ನಡೆಯುತ್ತಿದೆ. ಮಂಗಳೂರು ನಗರ ಹೊರವಲಯದ ಐಕಳದಲ್ಲಿ ಎರಡನೇ ಕಂಬಳ ಕ್ರೀಡೆ ಭಾರೀ ವಿಜೃಂಭಣೆಯಿಂದ ಜರುಗಿದೆ. ಈ ಕಂಬಳ ಕೂಟ ಐತಿಹಾಸಿಕ ದಾಖಲೆಯ ಜೊತೆ ಭಾವನಾತ್ಮಕ ಸನ್ನಿವೇಶಕ್ಕೂ ಸಾಕ್ಷಿಯಾಗಿದೆ. ಹೌದು..ಮಂಗಳೂರು ಹೊರವಲಯದ ಐಕಳ ಎಂಬಲ್ಲಿ ನಡೆದ ಕಂಬಳ ಎರಡು ಘಟನೆಗಳಿಗೆ ಸಾಕ್ಷಿಯಾಯಿತು. ಒಂದು 100 ಮೀ ದೂರವನ್ನು 9.15 ಸೆಕೆಂಡಲ್ಲಿ ಬೈಂದೂರಿನ ವಿಶ್ವನಾಥ್ ಕೋಣಗಳನ್ನು ಓಡಿಸಿ ನೂತನ ದಾಖಲೆ ಮಾಡಿದ್ರೆ, ಇನ್ನೊಂದು …

Read More »