Breaking News

Monthly Archives: ಫೆಬ್ರವರಿ 2021

‘ನೀವೇ ಸಿಎಂ ಆದಾಗ ಇಂತಹ ತುಘಲಕ್ ದರ್ಬಾರ್ ನಡೆಸಿ’ : ಸಚಿವ ಕತ್ತಿ ವಿರುದ್ಧ ಸಿದ್ದು ವಾಗ್ದಾಳಿ

ಬೆಂಗಳೂರು : ವಿಲಾಸಿ ವಸ್ತು ಹೊಂದಿರುವವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಾಗಿ ಹೇಳಿದ್ದ ಆಹಾರ ಸಚಿವ ಉಮೇಶ್ ಕತ್ತಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಇಂದು ಸಂಜೆ ( ಫೆ.15 ಸೋಮವಾರ) ಟ್ವಿಟರ್ ನಲ್ಲಿ ಉಮೇಶ್ ಕತ್ತಿ ವಿರುದ್ಧ ವಾಗ್ದಾಳಿ ನಡೆಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಉಮೇಶ್ ಕತ್ತಿಯವರೇ, ನಿಮ್ಮದೇ ಒಂದು ರಾಜ್ಯ ಕಟ್ಟಿ ನೀವೇ ಮುಖ್ಯಮಂತ್ರಿಗಳಾದಾಗ ಇಂತಹ ತುಘಲಕ್ ದರ್ಬಾರ್ ನಡೆಸಿ. ಈಗ ಕಷ್ಟಪಟ್ಟು …

Read More »

ಪಕ್ಷ ಬಿಟ್ಟು ಹೊದಂತಾ ಹಿರಿಯ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ : ಸತೀಶ್ ಜಾರಕಿಹೊಳಿ

ಬೆಳಗಾವಿ : ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ಪಕ್ಷ ಬಿಟ್ಟು ಹೊದಂತಾ ಹಿರಿಯ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ಮಾಡಲಾಗುತ್ತಿದೆ. ಕಾಂಗ್ರೆಸ್ ಗೆ ಆಹ್ವಾನ ಮಾಡುವುದು ಪಕ್ಷ ಕಟ್ಟುವ ಒಂದು ಭಾಗವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಇಂದಿನಿಂದ ಹಿರಿಯ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನ ನೀಡಲಾಗುತ್ತಿದ್ದು, ಗೋಕಾಕದಿಂದಲೇ ಆರಂಭಿಸಲಾಗಿದೆ. ಅಶೋಕ …

Read More »

ಉಮೇಶ್ ಕತ್ತಿಗೆ ಐಎಎಸ್ ಲಾಬಿಯೇ ಗೊತ್ತಿಲ್ಲ : ಕತ್ತಿಯನ್ನು ತಿವಿದ ಹೊನ್ನಾಳ್ಳಿ ಓರಿ

ಬೆಂಗಳೂರು : ನಮ್ಮದು ಬಡವರ, ಶೋಷಿತರ ಪರವಾದ ಸರ್ಕಾರ. ಈ ರೀತಿ ಧ್ವಂದ್ವ ಹೇಳಿಕೆಗಳನ್ನು ನೀಡಬಾರದು. ಉಮೇಶ್ ಕತ್ತಿಗೆ ಐಎಎಸ್ ಲಾಬಿಯೇ ಗೊತ್ತಿಲ್ಲ ಎಂಬುದಾಗಿ CM ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ಪಡಿತರ ಕಾರ್ಡ್ ವಿಚಾರವಾಗಿ ಸಚಿವ ಉಮೇಶ್ ಕತ್ತಿ ಗೊಂದಲದ ಹೇಳಿಕೆ ಕುರಿತಂತೆ ಮಾತನಾಡಿದಂತ ಅವರು, ಉಮೇಶ ಕತ್ತಿ, IAS ಲಾಬಿಯೇ ಗೊತ್ತಿಲ್ಲ. ನಮ್ಮದು ಬಡವರ, ಶೋಷಿತರ ಪರವಾದ ಸರ್ಕಾರ. ಈ ರೀತಿಯ ದ್ವಂದ್ವ ಹೇಳಿಕೆಗಳನ್ನು ನೀಡಬಾರದು. …

Read More »

ಹೆಣ್ಣುನಾಯಿಯೊಂದನ್ನು ಹಿಡಿದು ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕ

ಮೈಸೂರು (ಫೆ. 16): ಬೀದಿ ನಾಯಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮೈಸೂರಿನಲ್ಲಿ ಯುವಕನನ್ನು ಬಂಧಿಸಲಾಗಿದೆ. ಮೈಸೂರಿನ ವಿವಿ ಪುರಂ ಪೋಲೀಸರಿಂದ ಯುವಕನನ್ನು ಬಂಧಿಸಲಾಗಿದ್ದು, ಆ ಯುವಕನ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಪೀಪಲ್ ಫಾರ್ ಅನಿಮಲ್ ಸಂಸ್ಥೆಯ ಸದಸ್ಯರು ನೀಡಿದ ದೂರಿನ ಅನ್ವಯ ಹಾಗೂ ವಿಡಿಯೋ ಆಧಾರದ ಮೇಲೆ ಆ ಯುವಕನನ್ನು ಬಂಧಿಸಲಾಗಿದೆ. ಫೆ. 11ರ ರಾತ್ರಿ 11 ಗಂಟೆ ವೇಳೆ ಈ ಘಟನೆ ನಡೆದಿದೆ. ಮೈಸೂರಿನ ಗೋಕುಲಂನ …

Read More »

India vs Eng – ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್​ನಲ್ಲಿ ಭಾರತ ಜಯಭೇರಿ

ಚೆನ್ನೈ(ಫೆ. 16): ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆದ ಭಾರೀ ಸೋಲಿನ ಅವಮಾನಕ್ಕೆ ಅಷ್ಟೇ ಭರ್ಜರಿಯಾಗಿ ಭಾರತ ಸೇಡು ತೀರಿಸಿಕೊಂಡಿದೆ. ಚೆನ್ನೈನಲ್ಲೇ ನಡೆದ ಎರಡನೇ ಪಂದ್ಯದಲ್ಲಿ ಭಾರತ 317 ರನ್​ಗಳಿಂದ ಭರ್ಜರಿಯಾಗಿ ಗೆಲುವು ಸಾಧಿಸಿದೆ. ಗೆಲ್ಲಲು 482 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡದ ಎರಡನೇ ಇನ್ನಿಂಗ್ಸ್ 164 ರನ್​ಗೆ ಅಂತ್ಯಗೊಂಡಿತು. ಭಾರತೀಯ ಸ್ಪಿನ್ನರ್​ಗಳ ಕೈಚಳಕಕ್ಕೆ ಆಂಗ್ಲರು ಬೇಸ್ತುಬಿದ್ದು ಸೋಲೊಪ್ಪಿದರು. ಈ ಗೆಲುವಿನ ಮೂಲಕ ಭಾರತ ಈ ನಾಲ್ಕು …

Read More »

5 ವರ್ಷಗಳ ಹಿಂದೆ ಧಾರವಾಡದಿಂದ ನಾಪತ್ತೆಯಾಗಿದ್ದ ವ್ಯಕ್ತಿ ಉತ್ತರಾಖಂಡ್​ನಲ್ಲಿ ಪತ್ತೆ

ಗದಗ: ದೂರದ ಉತ್ತರಾಖಂಡ್ ರಾಜ್ಯದಲ್ಲಿ ಸಿಲುಕಿ ನಿತ್ಯ ನರಕಯಾತನೆ ಅನುಭವಿಸುತ್ತಿದ್ದ ಕನ್ನಡಿಗ ಕೆಂಚಪ್ಪ ಮತ್ತೆ ತಾಯಿ ನಾಡಿಗೆ ಮರಳುವ ಕನಸು ಕೂಡಾ ಕಾಣದಂತಹ ಪರಿಸ್ಥಿತಿಯಲ್ಲಿದ್ದರು. ಆದ್ರೆ, ಕನ್ನಡಿಗ ಯೋಧರು ಆತನನ್ನು ಕಾಪಾಡಿ, ಮರಳಿ ತಾಯಿನಾಡಿಗೆ ಕರೆದುಕೊಂಡು ಬಂದಿದ್ದಾರೆ. ಯೋಧರ ಸಮಾಜಮುಖಿ ಕೆಲಸದಿಂದ ಅವರು ತಮ್ಮವರನ್ನು ಸೇರಿಕೊಂಡಿದ್ದಾರೆ. ಕೆಂಚಪ್ಪನಿಗೆ ತಾಯಿನಾಡಿಗೆ ಬಂದ ಸಂತಸವಾದರೆ, ಇನ್ನೊಂದೆಡೆ ವೀರ ಯೋಧರಿಗೆ ಮುಪ್ಪಿನ ವಯಸ್ಸಿನ ಹಿರಿಯ ಜೀವನ್ನು ಸಂಬಂಧಿಕರ ಹತ್ತಿರ ಸೇರಿಸಿರುವ ಸಂತೃಪ್ತಿ ಸಿಕ್ಕಿದೆ. ಗದಗ …

Read More »

ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವು

ಮುಂಬೈ, ಫೆ.16 (ಪಿಟಿಐ)- ಪೂನಾ-ಮುಂಬೈ ಎಕ್ಸ್‍ಪ್ರೆಸ್‍ವೇನಲ್ಲಿ ಮುಂಜಾನೆ ಲಾರಿಯೊಂದು ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಲ್ಲದೆ, ಖಾಪೊಲಿ ನಗರದ ಸಮೀಪ ಮತ್ತೊಂದು ವಾಹನಕ್ಕೂ ಗುದ್ದಿದ ಕಾರಣ ಸ್ಥಳದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟು ಹಲವರಿಗೆ ಗಾಯಗಳಾಗಿರುವ ಘಟನೆ ಸಂಭವಿಸಿದೆ.ನವಿ ಮುಂಬೈ ಮುನಿಸಿಪಲ್ ಕಾಪೆರ್ರೇಷನ್ (ಎನ್‍ಎಂಎಂಸಿ)ಯ ಪಶುವೈದ್ಯರು ಸೇರಿದಂತೆ ಅವರ ಕುಟುಂಬದ ಮೂವರು ಒಂದು ಕಾರಿನಲ್ಲಿ ತೆರಳುತ್ತಿದ್ದರು. ಖಾಲಾಪುರ ಟೋಲ್ ಪ್ಲಾಜಾ ಕ್ಯೂನಲ್ಲಿ ನಿಂತಿದ್ದ ಎರಡು ಕಾರುಗಳಿಗೆ ಹಿಂದಿನಿಂದ ವೇಗವಾಗಿ ಬಂದ ಲಾರಿ …

Read More »

ಫಾಸ್ಟ್‍ಟ್ಯಾಗ್ ಕಡ್ಡಾಯದ ಹಿನ್ನೆಲೆಟೋಲ್ ಸಿಬ್ಬಂದಿ ಹಾಗೂ ವಾಹನ ಚಾಲಕರ ನಡುವೆ ಮಾತಿನ ಚಕಮಕಿ

ತುಮಕೂರು, ಫೆ.16- ಫಾಸ್ಟ್‍ಟ್ಯಾಗ್ ಕಡ್ಡಾಯದ ಹಿನ್ನೆಲೆಯಲ್ಲಿ ಟೋಲ್ ಸಿಬ್ಬಂದಿ ಹಾಗೂ ವಾಹನ ಚಾಲಕರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿರುವ ಘಟನೆಗಳು ವರದಿಯಾಗಿವೆ. ಇಂದಿನಿಂದ ಟೋಲ್‍ಗಳಲ್ಲಿ ಫಾಸ್ಟ್‍ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಟ್ಯಾಗ್ ಇಲ್ಲದ ವಾಹನಗಳಿಂದ ಟೋಲ್ ಸಿಬ್ಬಂದಿ ದುಪ್ಪಟ್ಟು ಹಣ ಪಡೆಯಲು ಮುಂದಾದಾಗ ಚಾಲಕರು ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ತುಮಕೂರಿನ ಕ್ಯಾತ್ಸಂದ್ರ ಜಾಸ್ ಟೋಲ್ ಸಮೀಪ ಸಿಬ್ಬಂದಿಗಳು ಹಾಗೂ ವಾಹನ ಚಾಲಕರು ಕೈ ಕೈ ಮಿಲಾಯಿಸಿದ್ದಾರೆ. …

Read More »

ಅತಿ ದೊಡ್ಡ ಮೇಕ್ ಇನ್ ಇಂಡಿಯಾ ಲಾಂಚನ ಸಿಎಂ ನಿವಾಸದ ಎದುರು

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸ ಕಾವೇರಿ ಮುಂಭಾಗ ದೇಶದ ಅತಿ ದೊಡ್ಡ ಮೇಕ್ ಇನ್ ಇಂಡಿಯಾ ಲಾಂಚನ ನಿರ್ಮಾಣ ಮಾಡಲು ಬಿಬಿಎಂಪಿ ಸಿದ್ಧತೆ ನಡೆಸಿದೆ. ಸುಮಾರು 50 ಲಕ್ಷ ವೆಚ್ಚದಲ್ಲಿ ಈ ಲಾಂಛನ ನಿರ್ಮಾಣವಾಗಲಿದ್ದು, ಲಾಂಛನ ಇಡಲು ಲ್ಯಾಂಡ್ ಸ್ಕೇಪ್ ಕೂಡ ಸಿದ್ಧವಾಗಲಿದೆ. ಘಾಜಿಯಾಬಾದ್ ನಲ್ಲಿ ತಯಾರಾಗುವ ಈ ಲಾಂಛನ ಬೆಂಗಳೂರಿಗೆ ಆಗಮಿಸಲಿದೆ. 1460 ಕೆ.ಜಿ ತೂಕದ ಬೃಹತ್ ಲಾಂಛನ ಇದಾಗಿದ್ದು, 23 ಅಡಿ ಉದ್ದ, 10 ಅಡಿ ಎತ್ತರ, …

Read More »

ಗೋವಾದಿಂದ ಕಾರವಾರಕ್ಕೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 9.13 ಲಕ್ಷ ಮೌಲ್ಯದ 505 ಲೀಟರ್ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರವಾರ: ಗೋವಾದಿಂದ ಕಾರವಾರಕ್ಕೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದ 9.13 ಲಕ್ಷ ಮೌಲ್ಯದ 505 ಲೀಟರ್ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂದು ಮುಂಜಾನೆ 2.30 ರ ಸಮಯದಲ್ಲಿ ಮಾಜಾಳಿ ಠಾಣಾ ವ್ಯಾಪ್ತಿಯಲ್ಲಿ ಗೋವಾದಿಂದ ಬರುತ್ತಿದ್ದ ವಾಹನ ಸಂಖ್ಯೆ AP 37TD-9855 ಲಾರಿಯನ್ನು ತಪಾಸಣೆ ಮಾಡಲಾಗಿದ್ದು, ಮೀನು ತುಂಬುವ 300 ಖಾಲಿ ಕ್ರೇಟ್ ಗಳ ಮದ್ಯೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಲಾರಿ ಚಾಲಕನನ್ನು ಬಂಧಿಸಿ 505ಲೀ ಗೋವಾ ಮದ್ಯ ವಶಕ್ಕೆ …

Read More »