Breaking News

Yearly Archives: 2020

ಚೀನಾದಲ್ಲಿ ಸಾವಿನ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಡೆಡ್ಲಿ ಕೊರೋನಾ..!

ಬೀಜಿಂಗ್,ಏ.13-ಚೀನಾದಲ್ಲಿ ಮತ್ತೆ ಕೊರೊನಾದ 2ನೇ ತರಂಗ ಶುರುವಾಗಿದೆ. ಕಳೆದ 24 ಗಂಟೆಯಲ್ಲಿ ರಾಷ್ಟ್ರದಲ್ಲಿ 108 ಹೊಸ ಪ್ರಕರಣ ಪತ್ತೆ ಮಾಡಲಾಗಿದೆ. ಕಳೆದ ಮಾರ್ಚ್‍ನಿಂದೀಚೆಗೆ ದಿನ ದಿನ ಇಷ್ಟು ದೊಡ್ಡ ಮಟ್ಟದಲ್ಲಿ ಸೋಮಕು ದಾಖಲಾಗಿರುವುದು ಜನರಲ್ಲಿ ಮತ್ತೆ ಆತಂಕಕ್ಕೆ ದೂಡುವಂತಾಗಿದೆ. ದೇಶದ ಹಲವು ನಗರಗಳಲ್ಲಿ ಲಾಕ್‍ಡೌನ್ ಹಿಂಪಡೆದು ವಿಮಾನಯಾನ ಸೇವೆ ಆರಂಭವಾಗಿದೆ. ಹಲವು ವಿದೇಶಿಯರು ಚೀನಾಗೆ ಬರುತ್ತಿದ್ದಾರೆ. ಇದರ ನಡುವೆ ಹೊಸ ಕೊರೊನಾ ಪ್ರಕರಣಗಳು ಬೀಜಿಂಗ್‍ಗೆ ಎಚ್ಚರಿಕೆ ಗಂಟೆಯಾಗಿದೆ. # ಸಿಂಗಪುರ್‍ನಲ್ಲಿ …

Read More »

ಆರ್ಥಿಕ ಪರಿಸ್ಥಿತಿ ನಿಭಾಯಿಸಲು 12 ಸಾವಿರ ನಿವೇಶನಗಳ ಹರಾಜಿಗೆ ಮುಂದಾದ ರಾಜ್ಯ ಸರ್ಕಾರ

ಬೆಂಗಳೂರು : ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಲಾಕ್ ಡೌನ್ ಅನುಷ್ಠಾನ ಮಾಡಿದ ಪರಿಣಾಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ ಬಿಡಿಎ ವ್ಯಾಪ್ತಿಯಲ್ಲಿ 12 ಸಾವಿರ ಕಾರ್ನರ್ ನಿವೇಶನಗಳನ್ನು ಹರಾಜು ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. 12 ಸಾವಿರ ನಿವೇಶನಗಳನ್ನು ಮಾರಾಟ ಮಾಡುವುದರಿಂದ ಸುಮಾರು15 ಸಾವಿರ ಕೋಟಿ‌ ರೂ ಆದಾಯ ನಿರೀಕ್ಷೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುದ್ದಿಗೋಷ್ಡಿಯಲ್ಲಿ ತಿಳಿಸಿದರು.ಅನಧಿಕೃತ ಕಟ್ಟಡಗಳ ಸಂಬಂಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ವಿಲೇವಾರಿಗೆ ಕ್ರಮ …

Read More »

ಇಟಲಿಯಲ್ಲೂ 20,000 ಜನರ ಕೊಂದ ಕಿಲ್ಲರ್ ಕೊರೊನಾ..!

ರೋಮ್/ವಾಷಿಂಗ್ಟನ್, ಏ.13-ಸೂಪರ್ ಪವರ್ ರಾಷ್ಟ್ರ ಅಮೆರಿಕದಲ್ಲಿ 20,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಕಿಲ್ಲರ್ ಕೊರೊನಾ ಇಟಲಿಯಲ್ಲಿಯೂ ಅದೇ ತೀವ್ರತೆಯ ರುದ್ರನರ್ತನ ಮುಂದುವರಿಸಿದೆ. ಇಲ್ಲಿಯೂ ಕೂಡ ಸತ್ತವರ ಸಂಖ್ಯೆ 20,000 ದಾಟಲಿರುವುದು ಆತಂಕದ ಸಂಗತಿಯಾಗಿದೆ. ಇಟಲಿಯಲ್ಲಿ ನಿನ್ನೆ ಒಂದೇ ದಿನ 2000ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 24 ತಾಸುಗಳ ಅವಧಿಯಲ್ಲಿ 620ಕ್ಕೂ ಅಧಿಕ ಸೋಂಕಿತರು ಅಸುನೀಗಿದ್ದಾರೆ.ಇಟಲಿಯಲ್ಲಿ ನಿನ್ನೆ ರಾತ್ರಿವರೆಗೆ ದೊರೆತ ಅಂಕಿ -ಅಂಶಗಳ ಪ್ರಕಾರ 19,468 ಮಂದಿ ಬಲಿಯಾಗಿದ್ದು, …

Read More »

ಕ್ವಾರೆಂಟೈನ್ ಟೈಂನಲ್ಲಿ ‘ಪಕೋಡಾ’ ಹುಡುಕಿದ ಅಗ್ನಿಸಾಕ್ಷಿ ತಂಡ

ಬೆಂಗಳೂರು: ಬಾಲಿವುಡ್ ಬಿಗ್‍ಬಿ ಅಮಿತಾಬ್ ಬಚ್ಚನ್ ನೇತೃತ್ವದಲ್ಲಿ ಬಹುಭಾಷಾ ನಟರ ತಂಡ ಈ ಹಿಂದೆ ಮನೆಯಲ್ಲೇ ಇದ್ದುಕೊಂಡು ಶಾರ್ಟ್ ಫಿಲ್ಮ್ ಮಾಡುವ ಮೂಲಕ ಸಾಮಾಜಿಕ ಅಂತರದ ಮಹತ್ವವನ್ನು ಸಾರಿತ್ತು. ಈ ಚಿತ್ರ ಇತರರಿಗೆ ಪ್ರೇರಣೆಯಾಗಿತ್ತು ಸಹ. ಅದೇ ರೀತಿ ಇದೀಗ ಅಗ್ನಿಸಾಕ್ಷಿ ಧಾರಾವಾಹಿ ತಂಡ ಸಹ ಇಂತಹದ್ದೇ ಪ್ರಯತ್ನವನ್ನು ಮಾಡಿದ್ದು, ಫನ್ನಿಯಾಗಿರುವ ಕಥೆಯನ್ನಿಟ್ಟುಕೊಂಡು ಜನತೆಯನ್ನು ನಗಿಸಿದ್ದಾರೆ. ಬಿಗ್‍ಬಿ ನೇತೃತ್ವದಲ್ಲಿ ಮಾಡಿದ ಶಾರ್ಟ್ ಫಿಲ್ಮ್‍ನಲ್ಲಿ ಕನ್ನಡಕ ಹುಡುಕುವ ಕಾನ್ಸೆಪ್ಟ್ ಇತ್ತು. ಆದರೆ …

Read More »

ದೊಡ್ಡಬಳ್ಳಾಪುರಕ್ಕೂ ಕಾಲಿಟ್ಟ ಕೊರೊನಾ- ರೈಲ್ವೇ ಉದ್ಯೋಗಿಗೆ ಸೋಂಕು

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಇಷ್ಟು ದಿನ ನಿರಾಳವಾಗಿದ್ದ ದೊಡ್ಡಬಳ್ಳಾಪುರ ತಾಲೂಕಿಗೂ ಕೊರೊನಾ ಕಾಲಿಟ್ಟಿದ್ದು, 39 ವರ್ಷದ ವ್ಯಕ್ತಿ (ರೋಗಿ ನಂಬರ್-246) ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕಿತ ರೈಲ್ವೆ ಇಲಾಖೆಯಲ್ಲಿ ಟ್ರಾಕ್ ಮಿಷಿನ್ ಮೈಂಟೈನರ್ ಆಗಿದ್ದು, ಮಾರ್ಚ್ 14 ರಿಂದ 18ರ ನಡುವೆ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ದೆಹಲಿಯ ನಿಜಾಮುದ್ದೀನ್ …

Read More »

ಜಮಾತ್ ನಂಜಿಗೆ ಬೆಚ್ಚಿಬಿದ್ದ ಕುಡಚಿ – ಒಂದೇ ಊರಲ್ಲಿ 10ಕ್ಕೆ ಏರಿದ ಸೋಂಕಿತರ ಸಂಖ್ಯೆ

ಬೆಳಗಾವಿ(ಚಿಕ್ಕೋಡಿ): ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಕರ್ನಾಟಕದಲ್ಲಿಯು ತನ್ನ ಅಟ್ಟಹಾಸ ಮುಂದುವರೆಸಿದೆ. ಹೆಚ್ವು ಸೋಂಕಿತರು ಇರುವ ಪಟ್ಟಿಗೆ ಈಗ ಬೆಳಗಾವಿ ಜಿಲ್ಲೆಯು ಸೇರ್ಪಡೆಯಾಗಿದೆ. ಜಿಲ್ಲೆಯಲ್ಲಿ ಭಾನುವಾರ 14 ಇದ್ದ ಸೊಂಕಿತರ ಸಂಖ್ಯೆ ಸೋಮವಾರಕ್ಕೆ 17ಕ್ಕೆ ಏರಿಕೆಯಾಗಿದೆ. ಬೆಳಗಾವಿ ಜಿಲ್ಲೆಯ ಕುಡಚಿ ಪಟ್ಟಣದಲ್ಲಿ ಮತ್ತೆ ಮೂವರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದ್ದು, ಈ ಮೂಲಕ ಬೆಳಗಾವಿ ಜಿಲ್ಲೆ ಡೋಂಜರ್ ಝೋನ್‍ನತ್ತ ಹೆಜ್ಜೆ ಇಟ್ಟಿದೆ. ಸೋಮವಾರ ಮಧ್ಯಾಹ್ನ ಹೆಲ್ತ್ ಬುಲಿಟಿನ್ ಬಿಡುಗಡೆಯಾಗಿದ್ದು, ಅದರಲ್ಲಿ ಬೆಳಗಾವಿ …

Read More »

ಹಾವೇರಿ:ಎಂಎಸ್‍ಐಎಲ್ ತೆರೆಯಲು ಸಿದ್ಧತೆ………..

ಹಾವೇರಿ: ಲಾಕ್‍ಡೌನ್ ಮದ್ಯ ಮಾರಾಟಕ್ಕೆ ಪೂರ್ಣ ವಿರಾಮ ಬಿದ್ದಿದೆ. ಮಂಗಳವಾರ ಮೊದಲ ಹಂತ ಲಾಕ್‍ಡೌನ್ ಅಂತ್ಯವಾಗಲಿದ್ದು, ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗುತ್ತೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಒಂದು ವೇಳೆ ಮದ್ಯ ಮಾರಾಟಕ್ಕೆ ವಿನಾಯ್ತಿ ಸಿಕ್ಕರೆ ಅಂಗಡಿಗಳ ಮುಂದೆ ಉಂಟಾಗುವ ನೂಕುನುಗ್ಗಲು ತಡೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾವೇರಿ ಜಿಲ್ಲೆ ರಟ್ಟೀಹಳ್ಳಿ ಪಟ್ಟಣ ಸೇರಿದಂತೆ ಜಿಲ್ಲೆಯ ಕೆಲವೆಡೆ ಎಂಎಸ್‍ಐಎಲ್ ಮದ್ಯದ ಅಂಗಡಿಗಳ ಮುಂದೆ ನೂಕು ನುಗ್ಗಲು ತಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಾಕ್‍ಡೌನ್ ನಂತರ …

Read More »

ಏಪ್ರಿಲ್​​​​​ 14ನೇ ತಾರೀಕು ಬೆಳಿಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಲಿದ್ದಾರೆ.

ಹೊಸದಿಲ್ಲಿ: ಕೊರೋನಾ ವೈರಸ್​​ ವಿರುದ್ಧ ಹೋರಾಡುವ ಕುರಿತಂತೆ ಏಪ್ರಿಲ್​​​​​ 14ನೇ ತಾರೀಕು ಬೆಳಿಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಲಿದ್ದಾರೆ. ಭಾರದಲ್ಲಿ ಲಾಕ್​​​ಡೌನ್​​​ ಅವಧಿಯನ್ನು ವಿಸ್ತರಿಸುವ ಮತ್ತು ಕೇಂದ್ರ ಸರ್ಕಾರ ಕೋವಿಡ್​​-19 ತಡೆಗೆ ತೆಗೆದುಕೊಳ್ಳಲಿರುವ ಮುಂದಿನ ಕ್ರಮಗಳ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ. ಇತ್ತೀಚಿಗೆ ಕೊರೋನಾ ವಿರುದ್ಧ ಹೋರಾಡಲು ಜಾರಿ ಮಾಡಲಾಗಿದ್ದ 21 ದಿನಗಳ ಲಾಕ್​​ಡೌನ್​ ಮುಂದುವರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಪ್ರಧಾನಿ ನರೇಂದ್ರ …

Read More »

ವೈದ್ಯಕೀಯ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡ್ಬೇಕು: ಡಿಕೆಶಿ

ನೆಲಮಂಗಲ: ವೈದ್ಯಕೀಯ ಸಚಿವ ಕೆ. ಸುಧಾಕರ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಜಕ್ಕಸಂದ್ರ ಗ್ರಾಮದಲ್ಲಿ ನೆಲಮಂಗಲ ಕಾಂಗ್ರೆಸ್ ಕಾರ್ಯಕರ್ತರಿಂದ ಕಾರ್ಯಕ್ರಮ ಆಯೋಜನೆ ಮಾಡಿ ದಿನಸಿ ವಿತರಣೆ ಮಾಡಿದರು. ಲಾಕ್ ಡೌನ್ ಸಂದರ್ಭದಲ್ಲಿ ಸಚಿವ ಸುಧಾಕರ್ ಈಜು ಕೊಳದಲ್ಲಿ ಸ್ವಿಮ್ಮಿಂಗ್ ವಿಚಾರ ಮಾತನಾಡಿದ ಡಿಕೆಶಿ, ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು …

Read More »

ಯಡಿಯೂರಪ್ಪ ಪರೋಕ್ಷವಾಗಿ ಏಪ್ರಿಲ್ ‌ 15ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಬಗ್ಗೆ ಸುಳಿವು

ಬೆಂಗಳೂರು: ಲಾಕ್​ಡೌನ್​ನಿಂದಾಗಿ 22 ದಿನಗಳಿಂದ ರಾಜ್ಯದೆಲ್ಲೆಡೆ ಮಾಲ್, ಬಾರ್, ಪಬ್​ಗಳನ್ನು ಮುಚ್ಚಲಾಗಿತ್ತು. ಆದರೆ ಇದೀಗ ಮದ್ಯಪ್ರಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ಕೊಡುವ ಸಾಧ್ಯತೆಯಿದೆ. ಲಾಕ್​ಡೌನ್​ ಅನ್ನು ಏ. 30ರವರೆಗೆ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ ನಂತರ ಇನ್ನೂ 18 ದಿನ ಸಾರಾಯಿ ಸಿಗುವುದಿಲ್ಲ ಎಂಬ ನಿರಾಸೆ ಮದ್ಯಪ್ರಿಯರನ್ನು ಕಾಡಿತ್ತು. ಆದರೆ, ಈ ಬಗ್ಗೆ ಸದ್ಯದಲ್ಲೇ ಘೋಷಿಸಲಿರುವ ರಾಜ್ಯ ಸರ್ಕಾರ ಬುಧವಾರದಿಂದಲೇ ಸಾರಾಯಿ ಮಾರಾಟಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಹೆಚ್ಚಾಗಿದೆ.ರಾಜ್ಯದಲ್ಲಿ …

Read More »