Breaking News

Yearly Archives: 2020

ರಾಮನಗರದ ತೋಟದ ಮನೆಯಲ್ಲಿ ನಿಖಿಲ್-ರೇವತಿ ಸಿಂಪಲ್ ಮದುವೆ ……

ಬೆಂಗಳೂರು,ಏ.16-ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ವಿವಾಹ ಮಹೋತ್ಸವದ ಅಂಗವಾಗಿ ಇಂದು ಅರಿಶಿಣ ಶಾಸ್ತ್ರ ಅವರವರ ನಿವಾಸದಲ್ಲಿ ನಡೆಯಲಿದೆ. ಮೊದಲು ರಾಮನಗರ ಚನ್ನಪಟ್ಟಣ ಮಧ್ಯೆ ಬೃಹತ್ ವೇದಿಕೆಯಲ್ಲಿ ವಿವಾಹ ನಡೆಸಲು ನಿರ್ಧಾರವಾಗಿತ್ತು. ತದನಂತರ ಕೊರೋನಾ ಹಾವಳಿಯಿಂದ ಸಮಸ್ಯೆ ಎದುರಾಗುತ್ತದೆ ಎಂದು ಅರಮನೆ ಮೈದಾನದ ಒಳಗೆ ನಿಗದಿ ಮಾಡಲಾಯಿತು. ಆದರೂ ಅದೂ ಬೇಡವೆಂದು ವಧುವಿನ ಸ್ವಗೃಹದಲ್ಲಿ ವಿವಾಹ ಎಂದು ನಿಶ್ಚಯವಾಗಿತ್ತು. ಇವೆಲ್ಲವೂ ಒಂದು ಕಡೆಯಾದರೆ ಕೊನೆಗೂ …

Read More »

ಬೆಳಗಾವಿಯಲ್ಲಿ ಒಂದೇ ದಿನ 17 ಜನರಿಗೆ ಕೊರೋನಾ ವೈರಸ್ ದೃಢ

ಬೆಳಗಾವಿ – ಬೆಳಗಾವಿಯಲ್ಲಿ ಒಂದೇ ದಿನ 17 ಜನರಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 36ಕ್ಕೆ ಏರಿದಂತಾಗಿದೆ. ಹಿರೇಬಾಗೇವಾಡಿಯ 8, ರಾಯಬಾಗದ 7 ಜನರಿಗೆ ಸೋಂಕಿರುವುದು ಇಂದು ದೃಢಪಟ್ಟಿದೆ. ಇವರೆಲ್ಲ ನಿಜಾಮುದ್ದೀನ್ ಧರ್ಮಸಭೆಗೆ ಹಾಜರಾಗಿ ಹಿಂದಿರುಗಿದವರ ಜೊತೆ ಸಂಪರ್ಕಕ್ಕೆ ಬಂದಿದ್ದರು ಎಂದು ಗೊತ್ತಾಗಿದೆ. ಹಿರೇಬಾಗೇವಾಡಿಯಲ್ಲಿ 6 ಮಹಿಳೆಯರಿಗೆ ಸೋಂಕು ತಗುಲಿದೆ. ಚಿಕ್ಕೋಡಿಯ ಒಬ್ಬರಿಗೆ, ಬೆಳಗಾವಿಯ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ಒಂದೇ ದಿನ …

Read More »

ಪಿಜ್ಜಾ ಡೆಲಿವರಿ ಮಾಡುವ ಡೆಲಿವರಿ ಬಾಯ್‍ಗೆ ಕೊರೊನಾ ಸೋಂಕು ದೃಢ……

ನವದೆಹಲಿ: ದಕ್ಷಿಣ ದೆಹಲಿಯಲ್ಲಿ ಹೆಸರಾಂತ ಪಿಜ್ಜಾ ಡೆಲಿವರಿ ಮಾಡುವ ರೆಸ್ಟೋರೆಂಟ್‍ನಲ್ಲಿ ಕೆಲಸ ಮಾಡುತ್ತಿದ್ದ ಡೆಲಿವರಿ ಬಾಯ್‍ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಯುವಕನ ಸಂಪರ್ಕದಲ್ಲಿದ್ದ ಸಹೋದ್ಯೊಗಿಗಳು ಹಾಗೂ ಪಿಜ್ಜಾ ಡೆಲಿವರಿ ಪಡೆದಿದ್ದ 72 ಕುಟುಂಬಗಳನ್ನು ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ. ಬುಧವಾರ ದಕ್ಷಿಣ ದೆಹಲಿಯ ಡಿಸಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಾಲ್ವಿಯಾ ನಗರದಲ್ಲಿ ಇರುವ ಪಿಜ್ಜಾ ಡೆಲಿವರಿ ಮಾಡುವ ರೆಸ್ಟೋರೆಂಟ್‍ನಲ್ಲಿ ಡೆಲಿವರಿ ಬಾಯ್ ಕರ್ತವ್ಯ ನಿರ್ವಹಿಸುತ್ತಿದ್ದನು. ಈತನಿಗೆ ಕೊರೊನಾ ಸೋಂಕು ತಗುಲಿರುವುದು …

Read More »

ಒಂದೇ ದಿನ ರಾಜ್ಯದಲ್ಲಿ ಅತಿ ಹೆಚ್ಚು 34 ಮಂದಿಗೆ ಕೊರೊನಾ……….

ಕರ್ನಾಟಕದಲ್ಲಿ ಸೊಂಕಿತರ ಸಂಖ್ಯೆ 313ಕ್ಕೆ ಏರಿಕೆ – ಬೆಳಗಾವಿಯಲ್ಲಿ ಒಟ್ಟು 36, ಮೈಸೂರಿನಲ್ಲಿ 61ಕ್ಕೆ ಏರಿಕೆ ಒಂದೇ ದಿನ ರಾಜ್ಯದಲ್ಲಿ ಅತಿ ಹೆಚ್ಚು 34 ಮಂದಿಗೆ ಕೊರೊನಾ ಬೆಂಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ ಅತಿ ಹೆಚ್ಚು 34 ಪ್ರಕರಣಗಳು ಬೆಳಕಿಗೆ ಬಂದಿದ್ದು, ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ 313ಕ್ಕೆ ಏರಿಕೆಯಾಗಿದೆ. ಬೆಳಗಾವಿಯಲ್ಲಿ 12, ವಿಜಯಪುರದಲ್ಲಿ 7, ಬೆಂಗಳೂರು 5, ಮೈಸೂರು 3, ಕಲಬುರಗಿ, ಗದಗ್ ಜಿಲ್ಲೆಯಲ್ಲಿ ಒಂದೊಂದು ಪ್ರಕರಣ …

Read More »

ರಸ್ತೆ ಮಧ್ಯೆಯೇ ಆಟೋ ತಡೆದ ಪೊಲೀಸ್ರು- ತಂದೆಯನ್ನು ಎತ್ತಿಕೊಂಡೇ ನಡೆದ ಮಗ

ತಿರುವನಂತಪುರಂ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಮಾಡಲಾಗಿದ್ದ ಲಾಕ್ ಡೌನ್ ಅನ್ನು ಮೇ.3ರವರೆಗೆ ವಿಸ್ತರಿಸಲಾಗಿದೆ. ಈ ಮಧ್ಯೆ ಕೆಲವೊಂದು ಮನಕಲಕುವ ಘಟನೆಗಳು ನಡೆದಿವೆ. ಇದಕ್ಕೆ ಕೇರಳದಲ್ಲಿ ನಡೆದ ಒಂದು ಘಟನೆಯೇ ಸಾಕ್ಷಿ. ಹೌದು. ಆಸ್ಪತ್ರೆಯಿಂಂದ ಡಿಸ್ಚಾರ್ಜ್ ಆದ ವ್ಯಕ್ತಿ ಮನೆಗೆ ವಾಪಸ್ ಹೋಗುತ್ತಿದ್ದಾಗ ಪೊಲೀಸರು ಆಟೋ ತಡೆದಿದ್ದಾರೆ. ಇದರಿಂದಾಗಿ ತಂದೆಯನ್ನು ಮಗನೇ ಎತ್ತಿಕೊಂಡು ಹೋಗಿ ಮನೆ ತಲುಪಿದ ಘಟನೆಯೊಂದು ಬೆಳಕಿಗೆ ಬಂದಿದೆ. ಕೊಲ್ಲಂ ಸಮೀಪದ 65 ವರ್ಷದ ವೃದ್ಧ ಅನಾರೋಗ್ಯದಿಂದಾಗಿ …

Read More »

ಕೊರೊನಾ ಮಧ್ಯೆ ಏಕವಚನದಲ್ಲೇ ಸಚಿವರ ಕಿತ್ತಾಟ………

ಬೆಂಗಳೂರು: ಸಚಿವರ ಸಭೆಯಲ್ಲಿ ಏರು ಧ್ವನಿಯಲ್ಲಿ, ಏಕವಚನದಲ್ಲೇ ಸಚಿವ ಎಸ್.ಟಿ ಸೋಮಶೇಖರ್ ಹಾಗೂ ನಾರಾಯಣಗೌಡ ಕಿತ್ತಾಡಿಕೊಂಡಿದ್ದಾರೆ. ವಿಕಾಸಸೌಧದಲ್ಲಿ ನಡೆದ ಸಚಿವರ ಸಭೆಯಲ್ಲಿ ಈ ಇಬ್ಬರು ಸಚಿವರು ಕಿತ್ತಾಡಿಕೊಂಡಿದ್ದಾರೆ. ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸೋಮಶೇಖರ್ ಹಾಗೂ ನಾರಾಯಣಗೌಡ ಒಬ್ಬರ ಮೇಲೊಬ್ಬರು ವಾಗ್ದಾಳಿ ನಡೆಸಿದ್ದಾರೆ. ಲಾಕ್‍ಡೌನ್ ವಿಚಾರದಲ್ಲಿ ಕೃಷಿ, ತೋಟಗಾರಿಕೆ ಉತ್ಪನ್ನಗಳ ಸುಗಮ ಸಾಗಾಟ ಸಂಬಂಧ ನಡೆಯುತ್ತಿರುವ ಸಭೆಯಲ್ಲಿ ಹೋಗೋ, ಬಾರೋ ಎಂದು ಏಕವಚದಲ್ಲಿ ಸಚಿವರು ಜಗಳವಾಡಿದ್ದಾರೆ. ಇತ್ತ …

Read More »

ದೇಶದಲ್ಲಿ 1,118 ಕ್ಕೂ ಹೆಚ್ಚು ಹೊಸ ಕೊರೋನಾ ಪ್ರಕರಣ ದಾಖಲಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12,000ದ ಗಡಿ ಸಮೀಪಿಸಿದೆ

ಬೆಂಗಳೂರು : ದೇಶಾದ್ಯಂತ ಎರಡನೇ ಅವಧಿ ಲಾಕ್ ಡೌನ್ ಜಾರಿಗೆ ಬಂದಿದ್ದರೂ ಕೂಡ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಈ ವರೆಗೆ ದೇಶದಲ್ಲಿ 1,118 ಕ್ಕೂ ಹೆಚ್ಚು ಹೊಸ ಕೊರೋನಾ ಪ್ರಕರಣ ದಾಖಲಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 12,000ದ ಗಡಿ ಸಮೀಪಿಸಿದೆ. ಭಾರತದಲ್ಲಿ ಈವರೆಗೆ 11,933 ಪ್ರಕರಣ ದಾಖಲಾಗಿದೆ. ಈ ಪೈಕಿ 10,197 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 1,343 ಜನರು ಗುಣಮುಖರಾಗಿದ್ದಾರೆ. 24 ಗಂಟೆಯಲ್ಲಿ ಒಟ್ಟು 40 …

Read More »

ಇಂದು ಬೆಂಗಳೂರಿನಲ್ಲಿ ಡೆಡ್ಲಿ ಕೊರೊನಾ ಮತ್ತೊಂದು ಬಲಿ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದೆ. ಇಂದು ಬೆಂಗಳೂರಿನಲ್ಲಿ ಡೆಡ್ಲಿ ಕೊರೊನಾ ಮತ್ತೊಂದು ಬಲಿ ಪಡೆದುಕೊಂಡಿದೆ. ಈ ಮೂಲಕ ಕರ್ನಾಟಕದಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆತಿಹೆಚ್ಚು ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು, ಬೆಂಗಳೂರು ಕೊರೊನಾ ಹಾಟ್ ಸ್ಪಾಟ್ ಎಂದು ಈಗಾಗಲೇ ಘೋಷಿಸಲಗಿದೆ. ಎಷ್ಟೇ ಮುಂಜಾಗೃತ ಕ್ರಮಗಳನ್ನು ಕೈಗೊಂಡರೂ ಕೂಡ ಕೊರೊನ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಇಂದು ಬೆಂಗಳೂರಿನಲ್ಲಿ 66 ವರ್ಷದ ವ್ಯಕ್ತಿಯೊಬ್ಬರು …

Read More »

ಅನಧಿಕೃತವಾಗಿ ಸಂಗ್ರಹಿಸಿ ಲಾರಿ ಮೂಲಕ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ರಬಕವಿಯಲ್ಲಿ ವಶಪಡಿಸಿಕೊಂಡಿದ್ದಾರೆ

ರಬಕವಿ -ಪಡಿತರ ದಾಸ್ತಾನನ್ನು ಅನಧಿಕೃತವಾಗಿ ಸಂಗ್ರಹಿಸಿ ಲಾರಿ ಮೂಲಕ ಸಾಗಾಣಿಕೆ ಮಾಡುತ್ತಿದ್ದ ವಾಹನವನ್ನು ಬಾಗಲಕೋಟ ರಬಕವಿ-ಬನಹಟ್ಟಿ ತಾಲ್ಲೂಕಿನ ರಬಕವಿಯಲ್ಲಿ ವಶಪಡಿಸಿಕೊಂಡಿದ್ದಾರೆ.ರಬಕವಿ ಬನಹಟ್ಟಿ ತಹಶೀಲ್ದಾರ ಪ್ರಶಾಂತ ಚನಗೋಂಡ ನೇತೃತ್ವದಲ್ಲಿ ದಾಳಿ ನಡೆಸಿ ಲಾರಿ ವಶಕ್ಕೆ ಪಡೆಯಲಾಗಿದೆ. ಹೌದು ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದು ಜನ್ರು ಪಡಿತರ ಧಾನ್ಯ ಸಿಗದೆ ಪರದಾಡುವಂತಾಗಿದೆ .ಆದ್ರೆ.ರಬಕವಿ ಬನಹಟ್ಟಿಯಲ್ಲಿ ಅಕ್ರಮವಾಗಿ ಪಡಿತರ ಧಾನ್ಯ ಸಂಗ್ರಹಿಸಿ ರಬಕವಿಯಿಂದ ಮಹಾರಾಷ್ಟ್ರ ಕ್ಕೆ ಸಾಗಾಟ ಮಾಡುವ ವೇಳೆ ದಾಳಿ ಮಾಡಿ ಲಾರಿ …

Read More »

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಪೌರಕಾರ್ಮಿಕರು, ಆಶಾಕಾರ್ಯಕರ್ತೆಯರಿಗೆ ದಿನ ಬಳಕೆ ವಸ್ತುಗಳ ವಿತರಣೆ

ಮೂಡಲಗಿ: ವಿಶ್ವವ್ಯಾಪಿ ಜನ ಜೀವನ ಹದಗೆಟ್ಟಿರುವಾಗ ಪೌರ ಕಾರ್ಮಿಕರು, ಆಶಾಕಾರ್ಯಕರ್ತೆಯರ ಸೇವಾಕಾರ್ಯ ಮೆಚ್ಚುವಂತಹದು. ಇಂತಹ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸಾಮಾಜಿಕ ಅಂತರ ಕಾಯ್ದುಕೊಂಡು ಸೇವೆಯು ಶ್ಲಾಘನೀಯವಾಗಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಪೌರ ಕಾರ್ಮಿಕರು, ಆಶಾಕಾರ್ಯಕರ್ತೆಯರಿಗೆ ದಿನ ಬಳಕೆ ವಸ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರೋನಾ ಎಂಬ ಮಹಾಮಾರಿ ವೈರಸ್ ವಿಶ್ವವನ್ನೆ ನಡುಗಿಸಿದೆ. ಸಾಮಾಜಿಕವಾಗಿ ನಗರದಲ್ಲಿ ಯಾವುದೇ ರೋಗಗಳು, …

Read More »