Breaking News

Yearly Archives: 2020

ಧಾರವಾಡ:ವಿಡಿಯೋ ಕಾಲ್ ಮೂಲಕ ಮುಸ್ಲಿಂ ಜೋಡಿಯೊಂದು ಮದುವೆಯಾಗಿದ್ದಾರೆ.

ಧಾರವಾಡ: ಲಾಕ್‍ಡೌನ್‍ನಿಂದ ಈಗಾಗಲೇ ಅನೇಕ ಮದುವೆ ಸಮಾರಂಭಗಳು ಕ್ಯಾನ್ಸಲ್ ಆಗಿವೆ. ಕೆಲವರು ಸರಳವಾಗಿ ಲಾಕ್‍ಡೌನ್ ನಿಯಮ ಉಲ್ಲಂಘಿಸದೆ ಮದುವೆಯಾಗಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ವಿಡಿಯೋ ಕಾಲ್ ಮೂಲಕ ಮುಸ್ಲಿಂ ಜೋಡಿಯೊಂದು ಮದುವೆಯಾಗಿದ್ದಾರೆ. ಜಿಲ್ಲೆಯ ಆದರ್ಶ ನಗರದ ವರ ಇಮ್ರಾನ್ ಜೊತೆ ಕೊಪ್ಪಳ ಜಿಲ್ಲೆಯ ವಧು ತಾಜಮಾ ಬೇಗಂ ಮದುವೆ ಆನ್‍ಲೈನ್‍ನಲ್ಲಿ ವಿಡಿಯೋ ಕಾಲ್‍ನಲ್ಲಿ ನಡೆದಿದೆ. ಇವರಿಬ್ಬರ ಮದುವೆಯನ್ನು ಏಪ್ರಿಲ್‍ನಲ್ಲಿ ಮಾಡಬೇಕೆಂದು ನಿಶ್ಚಯ ಮಾಡಲಾಗಿತ್ತು. ಆದರೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‍ಡೌನ್ …

Read More »

ಬೆಂಗಳೂರು:ಲಾಕ್‍ಡೌನ್, ಟಫ್ ರೂಲ್ಸ್ ಮಧ್ಯೆ ಭಾರೀ ಪ್ರಮಾಣದ ವಾಹನಗಳು ರಸ್ತೆಗಿಳಿದಿವೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಲಾಕ್‍ಡೌನ್ ಜಾರಿಯಲ್ಲಿದ್ದರೂ ವಾಹನ ದಟ್ಟಣೆ ಉಂಟಾಗಿದ್ದು, ಅಚ್ಚರಿ ಮೂಡಿಸಿದೆ. ಬೆಳಗ್ಗೆ ಈ ದೃಶ್ಯ ಕಂಡ ಸಿಲಿಕಾನ್ ಸಿಟಿ ಜನತೆಗೆ ಅಚ್ಚರಿ ಉಂಟಾಗಿದ್ದು, ಲಾಕ್‍ಡೌನ್ ಜಾರಿಯಲ್ಲಿದೆಯೋ ಅಥವಾ ಇಲ್ಲವೋ, ಇಷ್ಟು ಬೇಗ ಲಾಕ್‍ಡೌನ್ ಹಿಂಪಡೆದುಬಿಟ್ಟರಾ, ಪ್ರಧಾನಿ ಮೋದಿ ಲಾಕ್‍ಡೌನ್ ಆದೇಶ ಹಿಂಪಡೆದರಾ ಎಂಬ ಅನುಮಾನ ಮೂಡುವಷ್ಟರಮಟ್ಟಿಗೆ ವಾಹನಗಳು ರಸ್ತೆಗಿಳಿದಿವೆ. ಬೆಂಗಳೂರಿನ ಕೆ.ಆರ್.ಮಾರ್ಕೆಟ್‍ನಲ್ಲಿ ಈ ದೃಶ್ಯ ಕಂಡುಬಂದಿದ್ದು, ಲಾಕ್‍ಡೌನ್, ಟಫ್ ರೂಲ್ಸ್ ಮಧ್ಯೆ ಭಾರೀ ಪ್ರಮಾಣದ ವಾಹನಗಳು ರಸ್ತೆಗಿಳಿದಿವೆ. …

Read More »

ಹುಬ್ಬಳ್ಳಿ:ಕೊರೊನಾ ಭೀತಿ-ಪೊಲೀಸ್ ಠಾಣೆಯೇ ಶಿಫ್ಟ್

ಹುಬ್ಬಳ್ಳಿ: ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಕಮರಿಪೇಟೆ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸಲಾಗಿದೆ. ನಗರದ ಮುಲ್ಲಾ ಮತ್ತು ಕರಾಡಿ ಓಣಿಯಲ್ಲಿ ಒಟ್ಟು 6 ಜನರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಇದೀಗ ಮುಂಜಾಗ್ರತ ಕ್ರಮವಾಗಿ ಈ ಭಾಗದ ಕಮರಿಪೇಟೆಯ ಪೊಲೀಸ್ ಠಾಣೆಯನ್ನು ಚರ್ಚ್ ವೊಂದರ ಸಭಾಭವನಕ್ಕೆ ಸ್ಥಳಾಂತರಿಸಲಾಗಿದೆ. ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯು ಕಂಟೈನ್‍ಮೆಂಟ್ ಪ್ರದೇಶವಾಗಿದ್ದು, ಸಿಬ್ಬಂದಿ ಹಾಗೂ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಠಾಣೆಯನ್ನ ಶಿಫ್ಟ್ ಮಾಡಲಾಗಿದೆ. ಮುಲ್ಲಾ …

Read More »

ಚಿಕ್ಕೋಡಿ:ಕೊರೊನಾ ಭೀತಿ- ರಸ್ತೆಯಲ್ಲಿ 100ರೂ. ನೋಟು ಬಿದ್ದರೂ ಎತ್ತಿಕೊಳ್ಳುತ್ತಿಲ್ಲ

ಚಿಕ್ಕೋಡಿ: ರಸ್ತೆಯಲ್ಲಿ ಒಂದು ರೂಪಾಯಿ ಬಿದ್ದಿದ್ದರೂ ಎತ್ಕೊಂಡು ಜೇಬಿಗೆ ಹಾಕ್ತಿದ್ರು. ಆದರೆ ಕೊರೊನಾ ಹುಟ್ಟಿಸಿರುವ ಭೀತಿಗೆ ರಸ್ತೆಯಲ್ಲಿ ನೂರು ರೂಪಾಯಿ ಬಿದ್ದಿದ್ದರೂ ಎತ್ತಿಕೊಳ್ಳದೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಕರೆ ಮಾಡಿ ಮಾಡಿ ಕರೆಸಿ ನೂರು ರೂಪಾಯಿಯನ್ನು ಅವರ ವಶಕ್ಕೆ ನೀಡಿದ್ದಾರೆ. ಕೊರೊನಾ ಭೀತಿ ಹುಟ್ಟಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಯಾರೋ ಅಪರಿಚಿತರು ಸಾರ್ವಜನಿಕರಲ್ಲಿ ಭೀತಿ ಮೂಡಿಸಲು 100 ರೂ. ನೋಟನ್ನು ರಸ್ತೆಯಲ್ಲಿ ಎಸೆದಿದ್ದರು. ಇದನ್ನು ಕಂಡ ಸಂಕೇಶ್ವರ …

Read More »

ಖಾಸಗಿ ಚಾನೆಲ್ ವೊಂದರ ವರದಿಗಾರ ಹನುಮಂತು ಅಪಘಾತದಲ್ಲಿ ಇಂದು ಮೃತಪಟ್ಟಿದ್ದಾರೆ.

ಬೆಂಗಳೂರು: ರಾಮನಗರದ ಖಾಸಗಿ ಚಾನೆಲ್ ವೊಂದರ ವರದಿಗಾರ ಹನುಮಂತು ಅಪಘಾತದಲ್ಲಿ ಇಂದು ಮೃತಪಟ್ಟಿದ್ದಾರೆ. ಪಾದರಾಯನಪುರ ಗಲಾಟೆಯ ಆರೋಪಿಗಳನ್ನು ಜೈಲಿಗೆ ಕರೆತರುತ್ತಿದ್ದ ಸುದ್ದಿ ಮಾಡಿ, ವಾಪಾಸ್ ಬರುತ್ತಿರುವ ಸಂದರ್ಭದಲ್ಲಿ ಹಿಂದಿನಿಂದ ಬಂದ್ ಎಟಿಎಂ ವಾಹನ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ   ಸಾವಿಗೀಡಾಗಿದ್ದಾರೆ.  ಮೂರು ವರ್ಷಗಳ ಹಿಂದೆಷ್ಟೇ ವಿವಾಹವಾಗಿದ್ದರು. ಒಂದು ಮಗು ಕೂಡಾ ಇದೆ. ಹನುಮಂತ ಅವರ ನಿಧನಕ್ಕೆ ರಾಮನಗರ ಜಿಲ್ಲಾ ಪತ್ರಕರ್ತರ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.  

Read More »

ಸಂಕೇಶ್ವರ ಪಕ್ಕದ ಹರಗಾಪೂರ ಬಳಿ ಇಂದು ಬೆಳಿಗ್ಗೆ ಕಾಡುಕೋಣ ಗಳು ಕಾಣಿಸಿಕೊಂಡಿದ್ದು, ಜನರು ಭಯದಿಂದ ಓಡಾಡಿದ್ದಾರೆ.

ಬೆಳಗಾವಿ: ಸಂಕೇಶ್ವರ ಪಕ್ಕದ ಹರಗಾಪೂರ ಬಳಿ ಇಂದು ಬೆಳಿಗ್ಗೆ ಮೂರು ಕಾಡುಕೋಣ ಗಳು ಕಾಣಿಸಿಕೊಂಡಿದ್ದು, ಜನರು ಭಯದಿಂದ ಓಡಾಡಿದ್ದಾರೆ. ಸಂಕೇಶ್ವರ ಪಟ್ಟಣದ ಸಮೀಪದ ಹೊಲಗಳಲ್ಲಿ 3 ಕಾಡುಕೋಣ ಕಾಡಿಸಿಕೊಂಡಿವೆ. ಜಮೀನಿನಲ್ಲಿ ಕೆಲಸ ಮಾಡುವ ರೈತರ ಅವುಗಳನ್ನು ಕಂಡು ಭಯ ಬೀತರಾಗಿ ಬೆದರಿಸುವ ಕಾರ್ಯಕ್ಕೂ ಮುಂದಾಗಿದ್ದಾರೆ. ಜತೆ ನೀರಾವರಿ ಜಮೀನಿನಲ್ಲಿ ರೈತರ ಬೆಲೆ ಬಾಳುವ ಪೈಪ್ ಗಳನ್ನು ತುಳಿದು ಓಡಿವೆ. ಇದರಿಂದ ನೀರಾವರಿ ಜಮೀನಿನಲ್ಲಿ ನಾಶವಾಗಿರುವುದನ್ನು ಕಂಡು ಮರುಗಿದ್ದಾರೆ. ಹೊಲದಲ್ಲಿ ಇದ್ದಂತ …

Read More »

ತೈಲ ಬೆಲೆ ಬ್ಯಾರೆಲ್‌ಗೆ 12 ಡಾಲರ್‌ಗಿಂತಲೂ ಕಡಿಮೆಯಾಗಿದೆ. ಇದು ಕಳೆದ 21 ವರ್ಷಗಳಲ್ಲಿ ಅತ್ಯಂತ ಕಡಿಮೆ

ನವದೆಹಲಿ : ವಿಶ್ವದಾದ್ಯಂತ ಕೊರೊನಾದಿಂದ ಆಗಿರುವ ಲಾಕ್‌ಡೌನ್ ಹಿನ್ನೆಲೆಯಲ್ಲಿ ತೈಲ ಬೆಲೆಯು ಮತ್ತಷ್ಟು ನೆಲಕಚ್ಚಿ ಹೋಗಿದೆ. ಪೆಟ್ರೋಲ್, ಡೀಸೆಲ್ ಬೇಡಿಕೆ ಗಣನೀಯ ಕುಸಿತ ಕಾಣುತ್ತಿದ್ದು, ಅಮೆರಿಕಾದಲ್ಲಿ ಕಚ್ಚಾ ತೈಲ ಬೆಲೆ ಎರಡು ದಶಕಗಳ ಹಿಂದಕ್ಕೆ ಹೋಗಿ ತಲುಪಿದೆ. ಅಮೆರಿಕಾದ ವೆಸ್ಟ್ ಟೆಕ್ಸಾಸ್ ಮಧ್ಯಂತರ(ಡಬ್ಲ್ಯುಟಿಐ) ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 12 ಡಾಲರ್‌ಗಿಂತಲೂ ಕಡಿಮೆಯಾಗಿದೆ. ಇದು ಕಳೆದ 21 ವರ್ಷಗಳಲ್ಲಿ ಅತ್ಯಂತ ಕಡಿಮೆ ಮಟ್ಟವಾಗಿದೆ. ಕೊರೊನಾವೈರಸ್ ಬಿಕ್ಕಟ್ಟಿನ ಮಧ್ಯೆ ದುರ್ಬಲ ಬೇಡಿಕೆಯ …

Read More »

ಲಾಕ್ ಡೌನ್‍ನಲ್ಲಿ ಸಾಧಕರ ಸಾಧನೆಗಳ ತಿಳಿಯುವ ಸಮಯ………..

ಕೊವಿಡ್-19. ಭಾರತ ದೇಶದಲ್ಲಿ 2020 ಮಾರ್ರ್ಚ್‍ನಿಂದ ಬಹು ದೊಡ್ಡ ಆಘಾತ, ಗಂಡಾಂತರ ತಂದೊಡ್ಡಿದೆ. ಈ ಸಮಯದಲ್ಲಿ ಕೇಂದ್ರ ಸರ್ಕಾರ ದೇಶದ ಜನರ ಸುರಕ್ಷತೆಗಾಗಿ ದೇಶಕ್ಕೆ ದೇಶವನ್ನೆ ಲಾಕ್‍ಡೌನ್ ಮಾಡಿದೆ. ಇದು ಸಮಯೋಚಿತವಾದ ಮತ್ತು ಅತ್ಯಂತ ಸೂಕ್ತವಾದ ತಿರ್ಮಾನವಾಗಿದೆ. ಚೀನಾದ ವುಹಾನ್ ಪ್ರಾಂತ್ಯದಲ್ಲಿ ಮೊಟ್ಟ ಮೊದಲು ಹುಟ್ಟಿಕೊಂಡ ಈ ವೈರಸ್ ಜಗತ್ತಿನ ಎಲ್ಲಾ ದೇಶಗಳಿಗೆ ಬಹು ಬೇಗನೆ ಪಸರಿಸಿ ಮಾನವರ ಪ್ರಾಣ ಹಾನಿಮಾಡಲು ಪ್ರಾರಂಭಿಸಿದೆ. ಮುಂದುವರೆದ ದೇಶಗಳೆಂಬ ಹಣೆಪಟ್ಟಿ ಕಟ್ಟಿಕೊಂಡ ದೇಶಗಳು …

Read More »

ಪಾದರಾಯನಪುರದಲ್ಲಿ ಹೊಸ ನಿಯಮಗಳು……..

ಬೆಂಗಳೂರು: ನಗರದ ಪಾದರಾಯನಪುರದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಕಠಿಣ ನಿಯಮಗಳು ಇಂದಿನಿಂದ ಅನ್ವಯವಾಗಲಿದ್ದು, ಜನರು ಮನೆಯಿಂದ ಹೊರ ಬರುವಂತಿಲ್ಲ. ಸೀಲ್‍ಡೌನ್ ಆಗಿದ್ರೂ ಯಾವುದೇ ರೀತಿಯ ಭಯವಿಲ್ಲದೇ ಜನ ಆರಾಮವಾಗಿ ಮನೆಯಿಂದ ಹೊರಬಂದು ಕಾಲಹರಣ ಮಾಡುತ್ತಿದ್ದರು. ಭಾನುವಾರ ರಾತ್ರಿ ನಡೆದ ಗಲಭೆಯಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಪುಂಡರನ್ನ ಬಂಧಿಸಿದ್ದಾರೆ. ಇಡೀ ಪಾದರಾಯನಪುರ ಪೊಲೀಸ್ ಸರ್ಪಗಾವಲಿನಲ್ಲಿದೆ. ದಿನ ಬೆಳ್ಳಂ ಬೆಳಗ್ಗೆ ಹಾಲು, ತರಕಾರಿ ನೆಪ ಹೇಳಿಕೊಂಡು ಹೊರಬರುತ್ತಿದ್ದ ಜನ ಈಗ ಮನೆಯಿಂದ …

Read More »

ನಿರಾಶ್ರಿತ ಕೇಂದ್ರಗಳಲ್ಲಿ ಓಪನ್ ಥಿಯೇಟರ್ ವ್ಯವಸ್ಥೆ ಕಲ್ಪಿಸಿದ ಪೊಲೀಸರು

ಖಿನ್ನತೆಗೊಳಗಾಗದಂತೆ ಕ್ರಮ – ಪೊಲೀಸರ ಕಾರ್ಯಕ್ಕೆ ಭಾರೀ ಮೆಚ್ಚುಗೆ ನಿರಾಶ್ರಿತ ಕೇಂದ್ರಗಳಲ್ಲಿ ಓಪನ್ ಥಿಯೇಟರ್ ವ್ಯವಸ್ಥೆ ಕಲ್ಪಿಸಿದ ಪೊಲೀಸರು – ಮುಂಬೈ: ಕೊರೊನಾ ವೈರಸ್ ನಿಂದಾಗಿ ಲಾಕ್‍ಡೌನ್ ಮಾಡಲಾಗಿದೆ. ಅಲ್ಲದೆ ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದರ ಮಧ್ಯೆ ನಾಗ್ಪುರ ಪೊಲೀಸರು ನಿರಾಶ್ರಿತ ಕೇಂದ್ರಗಳಲ್ಲಿ ಮನರಂಜನೆಗಾಗಿ ಉತ್ತಮ ವ್ಯವಸ್ಥೆ ಕಲ್ಪಿಸಿದ್ದಾರೆ. ನಿರಾಶ್ರಿತರು ಒಂದೇ ಸ್ಥಳದಲ್ಲಿದ್ದು ಆತಂಕಕ್ಕೊಳಗಾಗಿದ್ದು, ಅವರ ಆತಂಕವನ್ನು ಕಡಿಮೆ ಮಾಡಿ ಮನರಂಜನೆ …

Read More »