Breaking News

Monthly Archives: ಡಿಸೆಂಬರ್ 2020

ಸತೀಶ್ ಜಾರಕಿಹೊಳಿ ಅವರ್ ಜೊತೆ ಹೆಲಿಕಾಫ್ಟರ್ ನಲ್ಲಿ ಸುತ್ತಾಡುವ ಅವಕಾಶ ನಿಮಗೆ ಬೇಕಾ…?

ಬೆಳಗಾವಿ: ‘ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ’ ಅವರ ಜಯಂತೋತ್ಸವ ನಿಮಿತ್ತ ಗೋಕಾಕ್​ ನಗರದಲ್ಲಿ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ವಿಜೇತರಾಗುವ 10 ಯುವಕರಿಗೆ ತಮ್ಮ ಹೆಲಿಕಾಪ್ಟರ್​ನಲ್ಲಿ ಓಡಾಡಲು ಅವಕಾಶ ಕಲ್ಪಿಸುವುದಾಗಿ ಶಾಸಕ ಸತೀಶ್​ ಜಾರಕಿಹೊಳಿ ನೇತೃತ್ವದ ಸಂಘಟನೆ ತಿಳಿಸಿದೆ. ಸತೀಶ್​ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆ ಸಂಘಟನೆ ‘ಸಾವಿತ್ರಿಬಾಯಿ ಫುಲೆ ಅವರ ಹೋರಾಟ’ ಮತ್ತು ‘ಮಹಿಳಾ ಶಿಕ್ಷಣಕ್ಕೆ ಅವರ ಕೊಡುಗೆ’ ಎಂಬ ವಿಷಯದ ಮೇಲೆ ರಾಜ್ಯ ಮಟ್ಟದ ಪ್ರಬಂಧ …

Read More »

ಜಿಲ್ಲೆಗೊಂದು ವಿಶೇಷ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ಸ್ಥಾಪನೆ

ನವದೆಹಲಿ,ಡಿ21-ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗುವಂತೆ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಿಶೇಷ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ಸ್ಥಾಪಿಸಬೇಕು ಎಂದು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸಮ್ಮತಿಸಿದೆ. ದೇಶದಲ್ಲಿ ಆರ್ಥಿಕ ಅಪರಾಧ ಪ್ರಕರಣಗಳು, ತೆರಿಗೆ ವಂಚನೆಯಂತಹ, ಅಕ್ರಮ ಹಣ ವರ್ಗಾವಣೆಯಂತಹ ಭ್ರಷ್ಟಾಚಾರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಒಂದು ವರ್ಷದೊಳಗೆ ಜಿಲ್ಲೆಗೊಂದು ವಿಶೇಷ ನ್ಯಾಯಾಲಯ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಬೇಕಿದೆ ಎಂದು ಬಿಜೆಪಿ ಮುಖಂಡ ಹಾಗೂ …

Read More »

ಭಾರತದಲ್ಲಿ ಪೊಲೀಯೋ ಮಾದರಿಯಲ್ಲಿ ಕೊರೊನಾ ಲಸಿಕಾ ವಿತರಣೆಗೆ ಸಿದ್ಧತೆ

ನವದೆಹಲಿ, ಡಿ.18- ಕೊರೊನಾ ನಿರ್ಮೂಲನೆಗೆ ಪಲ್ಸ್ ಪೊಲೀಯೋ ಮಾದರಿಯಲ್ಲಿ ಲಸಿಕಾ ಆಂದೋಲನ ನಡೆಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಜನವರಿ ವೇಳೆಗೆ ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ದನ್ ಹೇಳಿದ್ದಾರೆ. ಖಾಸಗಿ ಸುದ್ದಿ ಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಲಸಿಕೆ ಆಂದೋಲನದ ಬಗ್ಗೆ ಸಮಗ್ರ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ದೇಶಕ್ಕೆ ಲಸಿಕಾ ಆಂದೋಲನದ ವಿಷಯವಾಗಿ ಸಾಕಷ್ಟು ಅನುಭವ ಇದೆ. 25 ವರ್ಷಗಳ ಹಿಂದೆ ಭಾರತದಲ್ಲಿ ಶೇ.60ರಷ್ಟು …

Read More »

ಶಿವಸೇನೆ ಮತ್ತು ಬಿಜೆಪಿ ನಡುವಿನ ತಿಕ್ಕಾಟಕ್ಕೆ ಕಾರಣವಾದ ರಾಮಮಂದಿರ

ಮುಂಬೈ,ಡಿ.21-ಕೇಂದ್ರ ಸರ್ಕಾರ 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಮಮಂದಿರ ನಿರ್ಮಾಣಕ್ಕೆ ಸಾರ್ವಜನಿಕರಿಂದ ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದೆ ಎಂದು ಶಿವಸೇನೆ ಗಂಭೀರ ಆರೋಪ ಮಾಡಿದೆ. ಬಿಜೆಪಿ ಮುಖಂಡರು 2024ರ ಲೋಕಸಭಾ ಚುನಾವಣೆ ಪ್ರಚಾರದ ಅಂಗವಾಗಿ ಶ್ರೀ ರಾಮನ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಿಧಿ ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ ಎಂದು ಸೇನೆ ಮುಖವಾಣಿ ಸಾಮ್ನಾದಲ್ಲಿ ಆರೋಪಿಸಲಾಗಿದೆ. ಆದರೆ, ಶಿವಸೇನೆ ಆರೋಪವನ್ನು ಸಾರ ಸಗಟಾಗಿ ನಿರಾಕರಿಸಿರುವ ಬಿಜೆಪಿ ಮುಖಂಡರು …

Read More »

ಬೆಳಗಾವಿ : ಪಾರ್ಟಿ ಮುಗಿಸಿ ಮನೆಗೆ ಹೊಗುತ್ತಿದ್ದ ವ್ಯಕ್ತಿಯನ್ನು ಕಳ್ಳನೆಂದು ಭಾವಿಸಿ ಕೊಲೆ ಮಾಡಿರುವ ಘಟನೆ ತಡರಾತ್ರಿ ನಡೆದಿದೆ.

ಬೆಳಗಾವಿ : ಪಾರ್ಟಿ ಮುಗಿಸಿ ಮನೆಗೆ ಹೊಗುತ್ತಿದ್ದ ವ್ಯಕ್ತಿಯನ್ನು ಕಳ್ಳನೆಂದು ಭಾವಿಸಿ ಕೊಲೆ ಮಾಡಿರುವ  ಘಟನೆ  ತಡರಾತ್ರಿ ನಡೆದಿದೆ. ಮುಚ್ಚಂಡಿ ಗ್ರಾಮದ ಆನಂದ ಮಾರುತಿ ಕೋಲಕಾರ( 58) ಕೊಲೆಯಾದ ವ್ಯಕ್ತಿ. ಈತ ನಿನ್ನೆ ರಾತ್ರಿ ಡಾಬಾದಲ್ಲಿ ಪಾರ್ಟಿ ಮುಗಿಸಿಕೊಂಡು ಗ್ರಾಮಕ್ಕೆ ತೆರಳುವ ವೇಳೆಯಲ್ಲಿ ಖನಗಾಂವ ಗ್ರಾಮದ ಸಮೀಪ ಕಳ್ಳನೆಂದು ಭಾವಿಸಿ,  ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ …

Read More »

ಸಿದ್ದರಾಮಯ್ಯ ಅವರ ಹೇಳಿಕೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯ: ಶಾಸಕ ಸತೀಶ್ ಜಾರಕಿಹೊಳಿ

ಯಮಕನಮರಡಿ: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಲು ಒಳ ಒಪ್ಪಂದ ಕಾರಣ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ರಾಜ್ಯಕ್ಕೆ ಸಂಬಂಧಪಟ್ಟ ವಿಷಯವಲ್ಲ. ಅದನ್ನು ಇಷ್ಟು ದೊಡ್ಡದು ಮಾಡುವ ಅವಶ್ಯಕತೆಯೂ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದು ಕೇವಲ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯ. ಸ್ಥಳೀಯ ಸಮಸ್ಯೆ ಬಗ್ಗೆ ಹೇಳಿದ್ದಾರೆ. ಎಲ್ಲರೂ ಈ ಹೇಳಿಕೆಗೆ ಅಭಿಪ್ರಾಯ ನೀಡುವುದು ಸೂಕ್ತವಲ್ಲ ಎಂದು ಹೇಳಿದರು.‌ ಕಳೆದ ಆರು …

Read More »

ಬೆಳಗಾವಿಯ ಕುಟುಂಬವೊಂದು ಮನೆಯಲ್ಲಿ ಸಾಕಿದ ಹುಂಜಗಳ ಹುಟ್ಟುಹಬ್ಬ ಆಚರಿಸಿದೆ.

                            ಬೆಳಗಾವಿ: ಸಾಕು ನಾಯಿ, ಬೆಕ್ಕುಗಳ ಹುಟ್ಟುಹಬ್ಬ ಆಚರಿಸೋದನ್ನ ನೋಡಿರುತ್ತೇವೆ. ಇತ್ತೀಚೆಗೆ ಹಾವೇರಿಯಲ್ಲಿ ರೈತನೋರ್ವ ತನ್ನ ಎತ್ತಿಗೆ 25 ಕೆಜಿ ಕೇಕ್ ಕತ್ತರಿಸಿ ಅದ್ಧೂರಿಯಾಗಿ ಬರ್ತ್ ಡೇ ಆಚರಿಸಿದ್ದ. ಬೆಳಗಾವಿಯ ಕುಟುಂಬವೊಂದು ಮನೆಯಲ್ಲಿ ಸಾಕಿದ ಹುಂಜಗಳ ಹುಟ್ಟುಹಬ್ಬ ಆಚರಿಸಿದೆ. ಮೇಘನಾ ಲಂಗರಖಂಡೆ ಹುಂಜಗಳ ಬರ್ತ್ ಡೇ ಆಚರಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು …

Read More »

ಬೆಳಗಾವಿಯ ಮೂಲದ ಯುವಕ ಮಹಾರಾಷ್ಟ್ರದ ವ್ಯಾಪ್ತಿಯೊಳಗೆ ಬರುವ ಕಿತವಾಡ ಫಾಲ್ಸ್  ನಿಂದನಾಪತ್ತೆ ಯಾಗಿದ್ದಾನೆ .

ಬೆಳಗಾವಿಯ ಮೂಲದ ಯುವಕ ಮಹಾರಾಷ್ಟ್ರದ ವ್ಯಾಪ್ತಿಯೊಳಗೆ ಬರುವ ಕಿತವಾಡ ಫಾಲ್ಸ್  ನಿಂದನಾಪತ್ತೆ ಯಾಗಿದ್ದಾನೆ . ಬೆಳಗಾವಿ ಮಾಳ ಮಾರುತಿ ಬಡಾವಣೆ ನಿವಾಸಿ ಅಭಿಷೇಕ ಸಜ್ಜನ 24 ನಾಪತ್ತೆಯಾಗಿದ್ದು ಯುವಕ ಮೋಜು ಮಸ್ತಿ ಮಾಡಲು ಕುಟುಂಬಸ್ಥ ರೊಂದಿಗೆ ತೆರಳಿದ್ದು ಮದ್ಯಾಹ್ನ ಸುಮಾರು 2-30 ರ ಹೊತ್ತಿಗೆ ನಾಪತ್ತೆ ಯಾಗಿದ್ದಾನೆ .. ಜಲಪಾತದ ಕಡೆ ಹೋಗಿದ್ದ ಎಂದು ಹೇಳಲಾಗುತ್ತಿದೆ .ಸ್ಥಳಕ್ಕೆ ಬಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ

Read More »

ಇಂದಿನಿಂದ ರುಪ್ಸಾ ಆನ್​ಲೈನ್​ ಕ್ಲಾಸ್ ಬಂದ್: ಡಿ.31ರವರೆಗೆ ಸರ್ಕಾರಕ್ಕೆ ಡೆಡ್​​ಲೈನ್​

ಬೆಂಗಳೂರು(ಡಿ.21): ಶಿಕ್ಷಣ ಇಲಾಖೆ ವಿರುದ್ಧ ಹೋರಾಟಕ್ಕೆ ಮುಂದಾಗಿರುವ ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ, ಇಂದಿನಿಂದ ರುಪ್ಸಾ ಅಡಿಯಲ್ಲಿ ಬರುವ ಎಲ್ಲಾ ಶಾಲೆಗಳ ಆನ್​ಲೈನ್ ಮತ್ತು ಆಫ್​ಲೈನ್​​ ತರಗತಿಗಳನ್ನು ಸ್ಥಗಿತಗೊಳಿಸಿದೆ. ಜೊತೆಗೆ ಸಂಪೂರ್ಣ ಶೈಕ್ಷಣಿಕ ವರ್ಷವನ್ನು ಸ್ಥಗಿತ ಮಾಡಲು ರುಪ್ಸಾ ಖಾಸಗಿ ಶಾಲೆಗಳ ಒಕ್ಕೂಟ ನಿರ್ಧರಿಸಿದೆ. ಸರ್ಕಾರ ಶಾಲೆಗಳನ್ನು ಪುನರಾರಂಭಿಸುವ ಸಮಯದಲ್ಲಿ ಶಾಲೆಗಳನ್ನು ಮುಚ್ಚಲು ಖಾಸಗಿ ಶಿಕ್ಷಣ ಮಂಡಳಿ ಮುಂದಾಗಿದೆ. ಇಂದಿನಿಂದ ರುಪ್ಸಾ ಅಡಿಯ ಖಾಸಗಿ ಶಾಲೆಗಳ ಆನ್ ಲೈನ್ ಕ್ಲಾಸ್ ಬಂದ್ …

Read More »

ಕೊರೊನಾದಿಂದ ಕಳಸ ಪಟ್ಟಣದ ಬ್ಯಾಂಕ್‍ವೊಂದು ಸೀಲ್‍ಡೌನ್

ಚಿಕ್ಕಮಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖ ಆಗ್ತಿದೆ. ಇನ್ನೇನು ನಾಳೆ-ನಾಡಿದ್ದು ಅನ್ನುವಷ್ಟರಲ್ಲಿ ಲಸಿಕೆಯೂ ಸಿಗುತ್ತೆ, ಅಬ್ಬಾ… ಈ ಹೆಮ್ಮಾರಿ ತೊಲಗಿತು ಎಂದು ಜನಸಾಮಾನ್ಯರು ನಿಟ್ಟುಸಿರು ಬಿಡುವ ಹೊತ್ತಿಗೆ ಮತ್ತೆ ಕೊರೊನಾದಿಂದ ಕಳಸ ಪಟ್ಟಣದ ಬ್ಯಾಂಕ್‍ವೊಂದು ಸೀಲ್‍ಡೌನ್ ಶುಕ್ರವಾರ, ಶನಿವಾರ ಹಾಗೂ ಇಂದು ಭಾನುವಾರವಾದ್ದರಿಂದ ಜನರಿಗೆ ಬ್ಯಾಂಕ್ ಇಲ್ಲದೆ ತೀವ್ರ ಸಮಸ್ಯೆ ಎದುರಾಗಿತ್ತು. ಕಳಸ ಪಟ್ಟಣ ಸುತ್ತಮುತ್ತ ಅಡಿಕೆ, ಕಾಫಿ ತೋಟವೇ ಹೆಚ್ಚಿದ್ದು, ಈ ಭಾಗದಲ್ಲಿ ಕೂಲಿ …

Read More »