Breaking News

Daily Archives: ಡಿಸೆಂಬರ್ 18, 2020

13 ಕಡೆ ಎಸಿಬಿ ದಾಳಿ, ಅಧಿಕಾರಿಗಳಿಗೆ ಶಾಕ್..!

ಬೆಂಗಳೂರು, ಡಿ.18- ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಬಗ್ಗೆ ಮಾಹಿತಿ ಆಧರಿಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ತಂಡ ಇಂದು ಮೈಸೂರು, ಹಾಸನ ಮತ್ತು ಬೆಳಗಾವಿ ಜಿಲ್ಲೆಯಾದ್ಯಂತ 13 ಸ್ಥಳಗಳಲ್ಲಿ ದಾಳಿ ನಡೆಸಿದೆ. ಬಲೆಗೆ ಬಿದ್ದಿರುವ ಅಧಿಕಾರಿಗಳನ್ನು ಮೈಸೂರಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರಸ್ವಾಮಿ, ಹಾಸನದ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಎಂಜಿನಿಯರ್ ವಿ.ಎಸ್. ಅಶ್ವಿನಿ ಹಾಗೂ ಬೆಳಗಾವಿಯ ಲೋಕೋಪ ಯೋಗಿ ಬಂದರು ಮತ್ತು ಒಳನಾಡು …

Read More »

ಕರ್ನಾಟಕ ರಾಜ್ಯ ವೀರಶೈವ -ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪರಮಶಿವಯ್ಯ ಅವರನ್ನು ಹುಕ್ಕೇರಿ ಹಿರೇಮಠದಿಂದ ಬೆಂಗಳೂರು ಮಹಾನಗರದಲ್ಲಿ ಸತ್ಕರಿಸಲಾಯಿತು.

ಬೆಂಗಳೂರು – ಕರ್ನಾಟಕ ರಾಜ್ಯ ವೀರಶೈವ -ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪರಮಶಿವಯ್ಯ ಅವರನ್ನು ಹುಕ್ಕೇರಿ ಹಿರೇಮಠದಿಂದ ಬೆಂಗಳೂರು ಮಹಾನಗರದಲ್ಲಿ ಸತ್ಕರಿಸಲಾಯಿತು.   ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಪರಮಶಿವಯ್ಯ ಇವರನ್ನು ಬೆಂಗಳೂರು ಮಹಾನಗರದಲ್ಲಿ ಹುಕ್ಕೇರಿ ಹಿರೇಮಠದ ವತಿಯಿಂದ ಶ್ರೀ ಷ ಬ್ರ ಡಾಕ್ಟರ್ ಮಲಯ ಶಾಂತಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಶಿವಗಂಗಾ ಕ್ಷೇತ್ರ ಇವರ ದಿವ್ಯಸಾನಿಧ್ಯದಲ್ಲಿ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಹುಕ್ಕೇರಿ …

Read More »

ಬಂಡೀಪುರದಲ್ಲಿ ಮೋಜು ಮಸ್ತಿಗೆ ಬ್ರೇಕ್

ಮೈಸೂರು, ಡಿ. 18- ಬಂಡೀಪುರ, ಬಿಆರ್ ಹಿಲ್ಸ್‍ನಲ್ಲಿ ಹೊಸ ವರ್ಷದ ಮೋಜು ಮಸ್ತಿಗೆ ಬ್ರೇಕ್ ಹಾಕಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಮೋಜು, ಮಸ್ತಿಗೆ ಕಡಿವಾಣ ಹಾಕಿರುವ ಅರಣ್ಯ ಇಲಾಖೆ ಎರಡು ದಿನಗಳ ಕಾಲ ಪ್ರವಾಸಿಗರ ವಾಸ್ತವ್ಯಕ್ಕೆ ಸಂಪೂರ್ಣ ನಿಷೇಧ ಹೇರಿದೆ. ಡಿ.31 ಹಾಗೂ ಜ.1ರಂದು ಪ್ರವಾಸಿಗರ ವಾಸ್ತವ್ಯ ನಿಷೇಧಿಸಲಾಗಿದೆ. ಪ್ರವಾಸಿಗರು ಪ್ರತಿ ವರ್ಷ ಬಂಡೀಪುರ ಹಾಗೂ ಬಿಳಿಗಿರಿ ರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯದಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ, ಈ …

Read More »

ಕೊಲೆ ಮಾಡಿದ್ದ 6 ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸುವಲ್ಲಿ ಶಹಾಪುರ ಠಾಣೆ ಪೊಲೀಸರು ಯಶಸ್ವಿ

ಬೆಳಗಾವಿ – ನಿನ್ನೆ ಬೆಳಗಾವಿಯ ಅಂಬೇಡ್ಕರ್ ಗಲ್ಲಿಯಲ್ಲಿ ಯುವಕನೋರ್ವನನ್ನು ಕೊಚ್ಚಿ ಕೊಲೆ ಮಾಡಿದ್ದ 6 ಆರೋಪಿಗಳನ್ನು 24 ಗಂಟೆಯಲ್ಲಿ ಬಂಧಿಸುವಲ್ಲಿ ಶಹಾಪುರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಎಲ್ಲ 6 ಜನರೂ ಅಂಬೇಡ್ಕರ್ ಗಲ್ಲಿಯವರೇ ಆಗಿದ್ದಾರೆ. ಜ್ಯೋತಿರಾಜ ಸಿದ್ರಾಯಿ ದೊಡ್ಮನಿ(24), ಅಕ್ಷಯ ಕೃಷ್ಣ ಕೋಲ್ಕಾರ್ (24), ಪ್ರಶಾಂತ ಯಲ್ಲಪ್ಪ ಕಳ್ಳಿಮನಿ (30), ಪ್ರಶಾಂತ ಬಸವಂತ ಗರಾಣಿ (28), ರೋಹಿತ್ ರಾಜೇಂದ್ರ ದೊಡ್ಮನಿ (23), ಶಿವರಾಜ ಸೋನ್ಯಾ ತಂದೆ ನಾಗೇಶ ದೊಡ್ಮನಿ (21) ಆರೋಪಿಗಳು. …

Read More »

ಬೆಳಗಾವಿ ಲೋಕಸಭೆಗೆ ಇಬ್ಬರ ಹೆಸರು:ಡಿ.ಕೆ.ಶಿವಕುಮಾರ

ಶುಕ್ರವಾರ ಬೆಳಗ್ಗೆ ಹಾವೇರಿ ಜಿಲ್ಲೆಯ ಮೈಲಾರಕ್ಕೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮೈಲಾರ ಲಿಂಗೇಶ್ವರನಲ್ಲಿ ಕ್ಷಮೆ ಯಾಚಿಸಿದ್ದಾರೆ. ಜೊತೆಗೆ ಮೈಲಾರಲಿಂಗೇಶ್ವರನಿಗೆ ಬೆಳ್ಳಿಯ ಹೆಲಿಕಾಪ್ಟರ್ ಒಪ್ಪಿಸಿದ್ದಾರೆ. ಮೈಲಾರದಿಂದ ನೇರವಾಗಿ ಬೆಳಗಾವಿಗೆ ಆಗಮಿಸಿದ್ದ ಶಿವಕುಮಾರ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದರು. ಈ ಹಿಂದೆ ಮೈಲಾರಕ್ಕೆ ಹೆಲಿಕಾಪ್ಟರ್ ನಲ್ಲಿ ತೆರಳಿದ್ದೆ. ಆದರೆ ಅಲ್ಲಿಗೆ ಹೆಲಿಕಾಪ್ಟರ್ ನಲ್ಲಿ ಹೋಗುವುದು ತಪ್ಪು ಎಂದು ಕಾರ್ಯಕರ್ತರು ತಿಳಿಸಿದರು. ಜೊತೆಗೆ ಅವರು ಅದಕ್ಕಾಗಿ ಹರಕೆಯನ್ನೂ ಹೊತ್ತಿದ್ದರು. ಹಾಗಾಗಿ ನಾನು …

Read More »

ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ಸಹಿಸಲು ಅಸಾಧ್ಯ. : ಸಿದ್ದರಾಮಯ್ಯ

ಮೈಸೂರು (ಡಿ.18): ನನಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ ಹಾಗೂ ಹೆಚ್ಚು ವೇದನೆ ನೀಡಿದ ಕ್ಷೇತ್ರ ಚಾಮುಂಡೇಶ್ವರಿ. ಚಾಮುಂಡೇಶ್ವರಿ ಕ್ಷೇತ್ರದ ಸೋಲನ್ನು ಸಹಿಸಲು ಅಸಾಧ್ಯ.  ನಾನು ಚಾಮುಂಡೇಶ್ವರಿಯಲ್ಲಿ ಇಷ್ಟು ಕೆಟ್ಟದಾಗಿ ಸೋಲುತ್ತೇನೆ ಎಂದು ಕೊಂಡಿರಲಿಲ್ಲ. ನಾನು ಬಾದಾಮಿಯಲ್ಲಿ ಗೆಲ್ಲದಿದ್ದರೆ ನನ್ನ ರಾಜಕೀಯ ಭವಿಷ್ಯವೇ ಮಂಕಾಗಿ ಹೋಗುತ್ತಿತ್ತು. ನೀವು ಸೋಲಿಸಿದಂತೆ ಅವರು ನನ್ನನ್ನು ಸೋಲಿಸಿದ್ದರೆ, ಈ ರಾಜ್ಯದ ಭವಿಷ್ಯ ಏನಾಗುತ್ತಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭಾವಾನಾತ್ಮಕವಾಗಿ ಮಾತನಾಡಿದ್ದಾರೆ. ಕಳೆದ ವಿಧಾನಸಭಾ …

Read More »

ಪರಿಷತ್​ನಲ್ಲಿ ನಡೆದ ಗದ್ದಲದಲ್ಲಿ ಮೂರು ಪಕ್ಷದವರು ತಪ್ಪಿಸ್ಥರೇ, : ಮಾಜಿ ಸಭಾಪತಿ ಬಿ.ಎಲ್.ಶಂಕರ್

ಚಿಕ್ಕಮಗಳೂರು: ಮೊನ್ನೆ ವಿಧಾನಪರಿಷತ್ ನಲ್ಲಿ ನಡೆದ ಗದ್ದಲದಲ್ಲಿ ಮೂರು ಪಕ್ಷದವರ ತಪ್ಪು ಎದ್ದು ಕಾಣಿಸುತ್ತಿದ್ದು, ಎಲ್ಲರೂ ತಪ್ಪಿಸ್ಥರೇ. ಸಭಾಪತಿ, ಉಪಸಭಾಪತಿ, ಆಡಳಿತ, ವಿರೋಧ ಪಕ್ಷದವರು ಇದರ ಹೊಣೆ ಹೊರಬೇಕು ಎಂದು ಮಾಜಿ ಸಭಾಪತಿ ಬಿ.ಎಲ್.ಶಂಕರ್ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ನಲ್ಲಿ ನಡೆದ ಗದ್ದಲದಲ್ಲಿ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ದೊಡ್ಡ ತಪ್ಪು ಮಾಡಿದ್ದಾರೆ. ಅವರ ನೈತಿಕತೆಗೆ ಇದು ದೊಡ್ಡ ಸವಾಲಾಗಿದೆ. ಅವರಿಗೆ ರಾಜಕೀಯದಲ್ಲಿ ಸಾಕಷ್ಟು ಅನುಭವವಿದೆ. ಆದರೂ ಸಭಾಪತಿ …

Read More »

ಅಗಾಧ ನೆನಪಿನ ಶಕ್ತಿಯ ಭಂಡಾರ ಈ ಪುಟಾಣಿ

ಮಂಡ್ಯ (ಡಿ. 17): ಆ ಬಾಲಕಿಗಿನ್ನು ಬರೀ 2 ವರ್ಷ 8 ತಿಂಗಳು. ಮುದ್ದು ಮುದ್ದಾಗಿ ತೊದಲು‌ ಮಾತನಾಡುವ ವಯಸ್ಸಿನ ಈ ಪೋರಿಯ ಸಾಧನೆ ಮಾತ್ರ ಅಗಾಧ.  ಈ ಪೋರಿಯ  ಅಸಾಧಾರಣ ನೆನಪಿನ ಶಕ್ತಿ ಎಲ್ಲರನ್ನು ಬೆರಗು ಮೂಡಿಸುತ್ತದೆ.  ಇದರಿಂದಾಗಿಯೇ ಈಗ ಈಕೆ  ಇಂಡಿಯನ್ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಹೆಸರು ದಾಖಲಿಸಿಕೊಂಡಿದ್ದಾಳೆ. ಅಲ್ಲದೇ ತನ್ನ ಅಸಾಧಾರಣ ಪ್ರತಿಭೆಯಿಂದ ಇದೀಗ ಗಿನ್ನಿಸ್ ದಾಖಲೆ ಬರೆಯಲು ಹೊರಟಿದ್ದಾಳೆ. ಈ ಬಾಲಕಿ …

Read More »

ಚಾಲಾಕಿ ಹೆಂಡತಿ ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ……….

ಬಾಗಲಕೋಟೆ (ಡಿಸೆಂಬರ್ 18): ನಾಪತ್ತೆಯಾದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಕೇಸ್ ಇದೀಗ ಟ್ವಿಸ್ಟ್ ಪಡೆದುಕೊಂಡಿದ್ದು, ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರ ಬಾವನೊಂದಿಗೆ ಸೇರಿ ಹೆಂಡತಿ, ಗಂಡನನ್ನೇ ಕೊಲೆಗೈದಿರುವ ಘಟನೆ ಬಾಗಲಕೋಟೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಯಮನಪ್ಪ ಕರೆಣ್ಣವರ ಎಂಬಾತ ಹೆಂಡತಿ ರುಕ್ಮವ್ವ ಹಾಗೂ ತನ್ನ ದೊಡ್ಡಪ್ಪನ ಮಗ ಮುದಕಪ್ಪ(ಹಿರಿಗೆಪ್ಪ) ಮಧ್ಯೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಜಗಳವಾಡುತ್ತಿದ್ದಂತೆ. ಡಿಸೆಂಬರ್ …

Read More »

ಈಗಾಗಲೇ ಅಧಿಕಾರ ಕಳೆದುಕೊಂಡು, ದೇಶಕ್ಕೆ ಬೆಂಕಿ ಇಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೇಸ್”: ಕಟೀಲ್

ಗದಗ: ಈಗಾಗಲೇ ಅಧಿಕಾರ ಕಳೆದುಕೊಂಡು, ದೇಶಕ್ಕೆ ಬೆಂಕಿ ಇಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಸಿಎನ್​ಎ ಕಾನೂನು ತಂದಾಗ ದೇಶಕ್ಕೆ ಬೆಂಕಿ ಇಡುವ ಕೆಲಸ ಮಾಡಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಗದಗ ಜಿಲ್ಲಾ ಬಿಜೆಪಿ ಕಾರ್ಯಾಲಯ ಭವನ ಶಿಲಾನ್ಯಾಸದಲ್ಲಿ ಭಾಗಿಯಾಗಿ ಮಾತನಾಡಿದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳೀನ ಕುಮಾರ್ ಕಟೀಲ್ ಅವರು ಕಾಂಗ್ರೇಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಬೆಂಗಳೂರಿನ ಡಿಜೆ ಹಳ್ಳಿ- ಕೆಜಿ ಹಳ್ಳಿ ಗಲಭೆ …

Read More »