Breaking News

Monthly Archives: ನವೆಂಬರ್ 2020

ನಾಲ್ವರು ನಕಲಿ ಪರೀಕ್ಷಾರ್ಥಿಗಳು ಬಂಧನ..!

ಬೆಳಗಾವಿ ನಗರದಲ್ಲಿ ಇಂದು 39 ಪರೀಕ್ಷಾ ಕೇಂದ್ರಗಳಲ್ಲಿ ಜರುಗಿದ ಎಸ್‌ಆರ್‌ಪಿಸಿ / ಐಆರ್‌ಬಿ / ಕೆಎಸ್‌ಆರ್‌ಪಿ ಪುರುಷ & ಮಹಿಳಾ ಕಾನ್‌ಸ್ಟೇಬಲ್ ಹುದ್ದೆಯ ಸಿ.ಇ.ಟಿ ಲಿಖಿತ ಪರೀಕ್ಷೆಯಲ್ಲಿ ಒಟ್ಟು 1921 ಅಭ್ಯರ್ಥಿಗಳ ಪೈಕಿ 8461 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 1 ) ಜಿಐಟಿ ಕಾಲೇಜ , ಉದ್ಯಮಬಾಗ 2 ) ಲವ್‌ಡೇಲ್ ಸೆಂಟ್ರಲ್ ಸ್ಕೂಲ , ಮಾಳಮಾರುತಿ , 3 ) ಕೆಎಲ್‌ಎಸ್ ಸಂಸ್ಥೆ . ಇಂಗ್ಲೀಷ ಮಿಡಿಯಮ್ …

Read More »

ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ಧೇಶದಿಂದಗೋಕಾಕ ತಾಲೂಕಿನಲ್ಲಿ ಇಲ್ಲಿಯವರೆಗೆ ೧೫ ವಸತಿ ಶಾಲೆಗಳನ್ನು ಪ್ರಾರಂಭ:ಬಾಲಚಂದ್ರ ಜಾರಕಿಹೊಳಿ

ಮೂಡಲಗಿ : ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ಧೇಶದಿಂದ ಅಖಂಡ ಗೋಕಾಕ ತಾಲೂಕಿನಲ್ಲಿ ಇಲ್ಲಿಯವರೆಗೆ ೧೫ ವಸತಿ ಶಾಲೆಗಳನ್ನು ಪ್ರಾರಂಭಿಸಿದ್ದು, ಇದರ ಮೂಲಕ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಸಹಾಯವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲೂಕಿನ ಅರಭಾವಿ ಪಟ್ಟಣದ ನಾಡಕಛೇರಿ ಬಳಿ ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅನುದಾನದಡಿ ಮಂಜೂರಾದ ೨೦.೫೦ ಕೋಟಿ …

Read More »

ಮೂಢನಂಬಿಕೆ ವಿರುದ್ಧ ಎಲ್ಲ ಮಹಾ ನಾಯಕರು ಹೋರಾಟ ಮಾಡಿದ್ದಾರೆ. ಆ ನಿಟ್ಟಿನಲ್ಲಿ ನೀವು, ನಾವೇಲ್ಲ ಮುನ್ನಡೆಯಬೇಕು: ಸತೀಶ್ ಜಾರಕಿಹೊಳಿ

ಗೋಕಾಕ : ‘ ಮೂಢನಂಬಿಕೆ ವಿರುದ್ಧ ಅಂಬೇಡ್ಕರ್, ಬಸವಣ್ಣನವರು ಸೇರಿ ಎಲ್ಲ ಮಹಾ ನಾಯಕರು ಹೋರಾಟ ಮಾಡಿದ್ದಾರೆ. ಆ ನಿಟ್ಟಿನಲ್ಲಿ ನೀವು, ನಾವೇಲ್ಲ ಮುನ್ನಡೆಯಬೇಕು ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮಾಜದ ಸೇವಾ ಸಮಿತಿ ಆಯೋಜಿಸಿದ್ದ ಗೋಕಾಕ್, ಮೂಡಲಗಿ ತಾಲ್ಲೂಕಿನ ಮಾದಿಗ ಸಮಾಜದ ಎಸ್ಸೆಸ್ಸೆಲ್ಸಿ  ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ ದಲಿತ ಸಮುದಾಯದ ಜನರು ಎಲ್ಲ ರಂಗದಿಂದ …

Read More »

ಮೈಸೂರು ಸುತ್ತಮುತ್ತ ರೌಂಡ್ ಹೊಡೆಯುವ ವೇಳೆ ರಸ್ತೆ ಬದಿ ಕುಳಿತು ಟೀ ಕುಡಿದು ಅಭಿಮಾನಿಗಳ ಕುಶಲೋಪರಿ ವಿಚಾರಿಸಿದ ಶಿವರಾಜ್‍ಕುಮಾರ್

ಮೈಸೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಮೈಸೂರಿನ ಫುಟ್‍ಪಾತ್ ಅಂಗಡಿಯಲ್ಲಿ ಸಾಮಾನ್ಯ ಜನರಂತೆ ಕುಳಿತು ಟೀ ಕುಡಿದು ಸರಳತೆ ಮೆರೆದಿದ್ದಾರೆ. ಭಜರಂಗಿ 2 ಸಿನಿಮಾದ ಶೂಟಿಂಗ್‍ಗಾಗಿ ಶಿವರಾಜ್‍ಕುಮಾರ್ ಮೈಸೂರಿಗೆ ತೆರಳಿದ್ದಾರೆ. ವೀಕೆಂಡ್‍ನಲ್ಲಿ ಮೈಸೂರು ಸುತ್ತಮುತ್ತ ರೌಂಡ್ ಹೊಡೆಯುವ ವೇಳೆ ರಸ್ತೆ ಬದಿ ಕುಳಿತು ಟೀ ಕುಡಿದು ಅಭಿಮಾನಿಗಳ ಕುಶಲೋಪರಿ ವಿಚಾರಿಸಿದ್ದಾರೆ. ಮೈಸೂರಿನ ಮಾತೃಮಂಡಳಿ ಸರ್ಕಲ್ ಬಳಿ ಇರುವ ತಮ್ಮ ಅಭಿಮಾನಿ ಮಾದೇಶ್ ಎಂಬುವವರ ಟೀ ಅಂಗಡಿಗೆ ಹೋಗಿದ್ದಾರೆ. ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘದ …

Read More »

ಭಾರತದಲ್ಲಿ ಪಬ್‍ಜಿ ಮೊಬೈಲ್ ಗೇಮ್ ನೋಂದಣಿ ಆರಂಭ

ನವದೆಹಲಿ: ಭಾರತದಲ್ಲಿ ಪಬ್‍ಜಿ ಮೊಬೈಲ್ ಗೇಮ್ ನೋಂದಣಿ ಆರಂಭಗೊಂಡಿದ್ದು, ಕೆಲ ಆಯ್ದ ಬಳಕೆದಾರರಿಗೆ ಲೈವ್ ಗೇಮ್ ಅವಕಾಶ ಸಹ ನೀಡಲಾಗಿದೆ. ಕಂಪನಿ ಭಾರತದ ವೈಬ್‍ಸೈಟ್ ಪಬ್‍ಜಿ ಮೊಬೈಲ್ ಡೌನ್‍ಲೋಡ್ ಲಿಂಕ್ ಸಹ ಪ್ರಕಟಿಸಿದೆ. ಆದ್ರೆ ಸದ್ಯ ಲಿಂಕ್ ಆಕ್ಟಿವ್ ಆಗಿಲ್ಲ. ಗೂಗಲ್ ಪ್ಲೇಸ್ಟೋರ್ ನಲ್ಲಿ ಪಬ್‍ಜಿ ಮೊಬೈಲ್ ಇಂಡಿಯಾ ಮೇಲೆ ಕ್ಲಿಕ್ ಮಾಡಿದಾಗ ಫೇಸ್‍ಬುಕ್ ಪೇಜ್ ರೀಡೈರೆಕ್ಷನ್ ಆಗ್ತಿದೆ. ಆಯ್ದ ಬಳಕೆದಾರರಿಗೆ ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ಪಬ್‍ಜಿ ತನ್ನ …

Read More »

ಹಾಸನ- ಬೆಂಗಳೂರು ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆಖಾಸಗಿ ಬಸ್.

ದಕ್ಷಿಣ ಕನ್ನಡ: ಜಿಲ್ಲೆಯ ವಿಟ್ಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಮಧ್ಯರಾತ್ರಿ   ಹಾಸನ- ಬೆಂಗಳೂರು ಮಾರ್ಗಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾದ ಪರಿಣಾಮ  ಹಲವು ತೀವ್ರ ಗಾಯಗೊಂಡಿದ್ದಾರೆ. ಬಸ್ ನಲ್ಲಿ 29 ಜನರ ಪ್ರಯಾಣಿಕರು ಇದ್ದರು ಎನ್ನಲಾಗುತ್ತಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಲವರಿಗೆ ಈವರೆಗೆ ಪ್ರಜ್ಞೆ ಬಂದಿಲ್ಲ ಎಂದು ತಿಳಿದುಬಂದಿದೆ. ಬಸ್ ಶನಿವಾರ ರಾತ್ರಿ ವಿಟ್ಲದಿಂದ ಬೆಂಗಳೂರಿಗೆ ಹೊರಟಿತ್ತು.  ಈ ವೇ …

Read More »

ರಾಜ್ಯೋತ್ಸವದೊಂದು ಕರಾಳ ದಿನಾಚರಣೆ ಮಾಡುವ ಮರಾಠಿಗರಿಗೆ ಮರಾಠ ಅಭಿವೃದ್ಧಿ ಪ್ರಾಕಾರ ಅದಕ್ಕೆ 50 ಕೋಟಿ ಅನುದಾನಯಾವ ನ್ಯಾಯ..:ವಾಟಾಳ್

ಬೆಂಗಳೂರು, ನ.22- ಮರಾಠ ಅಭಿವೃದ್ಧಿ ನಿಗಮದ ವಿರುದ್ಧ ರಾಜ್ಯ ಬಂದ್‍ಗೆ ಕರೆ ಕೊಟ್ಟಿರುವ ಹಿನ್ನಲೆಯಲ್ಲಿ ಕನ್ನಡಪರ ಸಂಘಟನೆಗಳಿಗೆ ರಾಜ್ಯೋತ್ಸವ ಆಚರಣೆಗೆ ನೀಡುತ್ತಿದ್ದ ಅನುದಾನವನ್ನು ತಡೆಹಿಡಿಯುವ ಮೂಲಕ ಬಂದ್ ವಿಫಲಗೊಳಿಸುವ ಷಡ್ಯಂತ್ರವನ್ನು ರಾಜ್ಯಸರ್ಕಾರ ಮಾಡುತ್ತಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ಹಾಗೂ ಕನ್ನಡ ಒಕ್ಕೂಟದ ಮುಖಂಡ ವಾಟಾಳ್ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ. ರಾಜ್ಯೋತ್ಸವದೊಂದು ಕರಾಳ ದಿನಾಚರಣೆ ಮಾಡುವ ಮರಾಠಿಗರಿಗೆ ಮರಾಠ ಅಭಿವೃದ್ಧಿ ಪ್ರಾಕಾರ ಅದಕ್ಕೆ 50 ಕೋಟಿ …

Read More »

ಸಚಿವಾಕಾಂಕ್ಷಿಗಳಿಗೆ ನಿದ್ದೆ ಕೆಡಿಸಿದ ಸಿಎಂ ಪುತ್ರ :ದೆಹಲಿ ಪ್ರವಾಸ

ಬೆಂಗಳೂರು, ನ.22- ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ತೂಗುಯ್ಯಾಲೆಯಾಗಿರುವಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ದಿಢೀರನೆ ನವದೆಹಲಿಗೆ ತೆರಳಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ರಾತ್ರಿ ಏಕಾಏಕಿ ನವದೆಹಲಿಗೆ ತೆರಳಿರುವ ವಿಜಯೇಂದ್ರ ಇಂದು ಪಕ್ಷದ ಕೆಲವು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಭೇಟಿ ಮಾಡಿ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ …

Read More »

ಯತ್ನಾಳ ಅವರ ಪ್ರತಿಕೃತಿ ತಯಾರು ಮಾಡಿ,ಧರಿಸಿದ ಸೀರೆ ಎಳೆದು ಪ್ರತಿಕೃತಿಯನ್ನು ಹೊತ್ಕೊಂಡು ಹೋದ್ರು

ಬೆಳಗಾವಿಯ ಚೆನ್ನಮ್ಮನ ಸರ್ಕಲ್ ನಲ್ಲಿ ನಡೆಯಬಾರದ ಘಟನೆ ನಡೆಯಿತು ,ಕನ್ನಡ ಸಂಘಟನೆಯ ಕಾರ್ಯಕರ್ತರು ಬಸನಗೌಡ ಯತ್ನಾಳರ ಪ್ರತಿಕೃತಿಗೆ ಸೀರೆ ಉಡಿಸಿ,ಚಟ್ಟ ಕಟ್ಟಿ ಬಾಯಿ ಬಡಿದುಕೊಂಡು ಅಯ್ಯಯ್ಯೋ ಅನ್ಯಾಯ ಎಂದು ಅವಾಜ್ ಹಾಕಿದ್ರು ಜನ ಸೇರಿದ್ರು,ಕನ್ನಡದ ಕಾರ್ಯಕರ್ತರು ಲಬೋ..ಲಬೋ ಅಂತಾ ಹೊಯ್ಕೊಂಡ್ರು ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಕಾರ್ಯಕರ್ತರು ,ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಅವರ ಪ್ರತಿಕೃತಿ ತಯಾರು ಮಾಡಿ,ಅದಕ್ಕೆ ಸೀರೆ ಉಡಿಸಿ,ಶವಯಾತ್ರೆ ಹೊರಡಿಸುವ ತಯಾರಿ ನಡೆಸಿದ್ದರು,ಕಾರ್ಯಕರ್ತರ …

Read More »

ಬಸನಗೌಡ ಪಾಟೀಲ ಯತ್ನಾಳರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯೆಕ್ತಪಡಿಸಿದಕರವೇ ಕಾರ್ಯಕರ್ತರು

ಬೆಳಗಾವಿ- ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ,ಕನ್ನಡಪರ ಸಂಘಟನೆಗಳ ಕುರಿತು ರೋಲ್ ಕಾಲ್ ಸಂಘಟನೆಗಳೆಂದು ಹೇಳಿಕೆ ನೀಡಿ ಅವಮಾನಿಸಿರುವದನ್ನು ಖಂಡಿಸಿ,ಕರವೇ ಕಾರ್ಯಕರ್ತರು ಬೆಳಗಾವಿಯಲ್ಲಿ ಪ್ರತಿಭಟಿಸಿದರು. ಕನ್ನಡ ಪರ ಸಂಘಟನೆಗಳ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ನೀಡಿರುವದನ್ನು ವಿರೋಧಿಸಿ. ಬೆಳಗಾವಿ ಕರವೇ ನಾರಾಯಣಗೌಡ ಬಣದಿಂದ ಪ್ರತಿಭಟನೆ ಮಾಡಲಾಯಿತು. ಬೆಳಗಾವಿಯ ಅಶೋಕ ಸರ್ಕಲ್ ನಲ್ಲಿ ಬಸನಗೌಡ ಪಾಟೀಲ ಯತ್ನಾಳರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯೆಕ್ತಪಡಿಸಿದರು.

Read More »