Breaking News

Daily Archives: ನವೆಂಬರ್ 12, 2020

ಪಟಾಕಿ ಮಾರಾಟ ಮತ್ತು ಪಟಾಕಿ ಸಿಡಿಸಿದ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಇಲ್ಲಿಯವರೆಗೆ ಒಟ್ಟು 32 ಮಂದಿಯನ್ನು ಬಂಧಿಸಿದ್ದಾರೆ.

ನವದೆಹಲಿ: ಪಟಾಕಿ ಮಾರಾಟ ಮತ್ತು ಪಟಾಕಿ ಸಿಡಿಸಿದ ಆರೋಪದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಇಲ್ಲಿಯವರೆಗೆ ಒಟ್ಟು 32 ಮಂದಿಯನ್ನು ಬಂಧಿಸಿದ್ದಾರೆ. ಬುಧವಾರ 14 ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇಲ್ಲಿಯವರೆಗೆ ಒಟ್ಟು 37 ಪ್ರಕರಣ ದಾಖಲಾಗಿದೆ. ಬಂಧಿತ 32 ಮಂದಿ ಪೈಕಿ ಇಬ್ಬರನ್ನು ಪಟಾಕಿ ಸಿಡಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಬುಧವಾರ ಬಂಧಿತರ ಬಳಿಯಿಂದ ಒಟ್ಟು 1,770 ಕೆಜಿ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದ್ದು ಇಲ್ಲಿಯವರೆಗೆ ಒಟ್ಟು 2,794 ಕೆಜಿ ಪಟಾಕಿಗಳನ್ನು ದೆಹಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. …

Read More »

ಕೆಮಿಕಲ್ ಗೋದಾಮು ನಡೆಸುತ್ತಿದ್ದ ಕಂಪನಿಯ ಮಾಲೀಕರ ವಿರುದ್ಧ 2ನೇ ಎಫ್‍ಐಆರ್ ದಾಖಲಾಗಿದೆ.ವಿವಿಧ ಮಾದರಿಯ ಎಂಟು ವಾಹನಗಳು ಬೆಂಕಿಗಾಹುತಿ

ಬೆಂಗಳೂರು: ನಗರದ ಹೊಸಗುಡ್ಡದಹಳ್ಳಿ ಬೆಂಕಿ ಅವಘಡ ಘಟನೆಗೆ ಸಂಬಂಧಿಸಿದಂತೆ ಸದ್ಯ ಕೆಮಿಕಲ್ ಗೋದಾಮು ನಡೆಸುತ್ತಿದ್ದ ಕಂಪನಿಯ ಮಾಲೀಕರ ವಿರುದ್ಧ 2ನೇ ಎಫ್‍ಐಆರ್ ದಾಖಲಾಗಿದೆ. ಶಂಭುಲಿಂಗ ಎಂಬುವರು ರೇಖಾ ಕೆಮಿಕಲ್ಸ್ ವಿರುದ್ಧ ಸ್ಫೋಟಕ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 427, 338, 285 ಅಡಿ ಎಫ್‍ಐಆರ್ ದಾಖಲು ಮಾಡಲಾಗಿದೆ. ಟೀ ಕುಡಿದು ಬರುವಷ್ಟರಲ್ಲಿ ತಮ್ಮ ಲಗೇಜ್ ಟೆಂಪೋಗೆ ಬೆಂಕಿ ತಾಗಿತ್ತು. ಇದೇ ರೀತಿ ಸ್ಥಳದಲ್ಲಿದ್ದ ಉಳಿದ ಐದು ಕಾರು …

Read More »

ನಿವೃತ್ತಿಯ ಬಳಿಕ ಕಡಕ್‍ನಾಥ್ ಕಪ್ಪು ಕೋಳಿ ಸಾಕಾಣಿಕೆ ಮುಂದಾದ ಧೋನಿ

ರಾಂಚಿ: ಮಧ್ಯಪ್ರದೇಶದ ಬುಡಕಟ್ಟು ಜಿಲ್ಲೆಯ ಕಡಕ್‍ನಾಥ್ ಕಪ್ಪು ಕೋಳಿ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರ ಮನಗೆದ್ದಿದ್ದು, ನಿವೃತ್ತಿಯ ಬಳಿಕ ಕುಕ್ಕುಟೋದ್ಯಮ ಆರಂಭಿಸಲು ಧೋನಿ ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಧೋನಿ ಅವರ ಆರ್ಗಾನಿಕ್ ಫಾರ್ಮ್‍ನೊಂದಿಗೆ ರಾಂಚಿಯಲ್ಲಿರುವ ಸಾವಯವ ಕೃಷಿಗೆ ಸಂಬಂಧಿಸಿದ ತಂಡ ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಕೋಳಿ ಕೃಷಿಕರಿಂದ ಸುಮಾರು 2 ಸಾವಿರ ಕಟಕ್‍ನಾಥ್ ಕೋಳಿ ಮರಿಗಳು ನೀಡುವಂತೆ ಅರ್ಡರ್ ನೀಡಿದ್ದಾರೆ ಎಂದು ಮಾಧ್ಯಮವೊಂದು …

Read More »

ಸರ್ಕಾರದ ವಸತಿ ಯೋಜನೆಯಡಿ ಫಲಾನುಭವಿಗಳು ಪಡೆದಂತಹ ಮನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಅದನ್ನು ಮಾರಾಟ ಮಾಡಬೇಡಿ:ವಿ.ಸೋಮಣ್ಣ

ಬೆಳಗಾವಿ – ಸರ್ಕಾರದ ವಸತಿ ಯೋಜನೆಯಡಿ ಫಲಾನುಭವಿಗಳು ಪಡೆದಂತಹ ಮನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಅದನ್ನು ಮಾರಾಟ ಮಾಡಬೇಡಿ ಎಂದು ವಸತಿ ಸಚಿವ ವಿ.ಸೋಮಣ್ಣ ಕಿವಿಮಾತು ಹೇಳಿದರು. ನಿಪ್ಪಾಣಿಯ ಶಿಂಧೆ ನಗರದಲ್ಲಿ ರಾಜೀವ ಗಾಂಧಿ ವಸತಿ ನಿಗಮದ ವತಿಯಿಂದ ಪಿಎಂಎವೈ-ಎಎಚ್ ಪಿ ಯೋಜನೆಯಡಿ ಮನೆಗಳ ನಿರ್ಮಾಣಕ್ಕೆ ಬುಧವಾರ(ನ.11) ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು ಮಾತನಾಡಿದರು.  ಪಿಎಂಎವೈ-ಎಎಚ್ ಪಿ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಈ ವಸತಿಗಳನ್ನು  1 ವರ್ಷದಲ್ಲಿ  ನಿರ್ಮಾಣ  ಮಾಡುವ ಗುರಿಯನ್ನು ಹೊಂದಿದ್ದು, ಶೀಘ್ರವೇ …

Read More »

ವಿವಿಧೆಡೆ ಸರಗಳ್ಳತನ ಮಾಡುತ್ತಿದ್ದ ಕಳ್ಳರ ತಂಡ ಪತ್ತೆ ಹಚ್ಚಿದ ಖಾನಾಪುರ ಪೊಲೀಸರು

ಖಾನಾಪುರ: ವಿವಿಧೆಡೆ ಸರಗಳ್ಳತನ ಮಾಡುತ್ತಿದ್ದ ಕಳ್ಳರ ತಂಡವೊಂದನ್ನು ಪತ್ತೆ ಹಚ್ಚಿದ ಖಾನಾಪುರ ಪೊಲೀಸರು ಇಬ್ಬರನ್ನು ಬಂಧಿಸಿ ಬಂಧಿತರಿಂದ ೨.೫೪ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡ ಘಟನೆ ಬುಧವಾರ ವರದಿಯಾಗಿದೆ. ಪಟ್ಟಣದ ಮಲಪ್ರಭಾ ಕ್ರೀಡಾಂಗಣದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಬೆಳಗಾವಿ ವಡಗಾಂವ ನಿವಾಸಿ ಪರಶುರಾಮ ದಂಡಗಲ್ ಮತ್ತು ಶಹಾಪುರ-ಖಾಸಬಾಗದ ನಿವಾಸಿ ವಿನಯ ಅಣ್ವೇಕರ ಎಂಬಾತರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ಅವರು ನೀಡಿದ ಮಾಹಿತಿಯಂತೆ ಬಂಧಿತರಿಂದ ೭೯ ಗ್ರಾಂ ಚಿನ್ನಾಭರಣ ಮತ್ತು ೧೩೫ ಗ್ರಾಂ …

Read More »

ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಇಬ್ಬರು ಸಚಿವರು,

ಬೆಂಗಳೂರು: ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ, ಶಿರಾ ಕ್ಷೇತ್ರದ ಶಾಸಕ ರಾಜೇಶ್ ಗೌಡ ಅವರು ಆದಿಚುಂಚನಗಿರಿಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದಾರೆ. ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಇಬ್ಬರು ಸಚಿವರು, ಶ್ರೀ ಕ್ಷೇತ್ರ ಆದಿಚುಂಚನಗಿರಿಯ ಶ್ರೀ ಡಾ.ನಿರ್ಮಾಲನಂದನಾಥ ಸ್ವಾಮೀಜಿಗಳ ಆರ್ಶೀವಾದ ಪಡೆದಿದ್ದಾರೆ. ಇದೇ ವೇಳೆ ಕಂದಾಯ ಸಚಿವ ಆರ್.ಅಶೋಕ್, ಸಚಿವ ಗೋಪಾಲಯ್ಯ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಿ.ಹೆಚ್.ರಾಮಚಂದ್ರ ಉಪಸ್ಥಿತರಿದ್ದರು. …

Read More »

ಕಾಂಗ್ರೆಸ್ ಸೋಲಿಗೆ ನಾಯಕರೇ ಕಾರಣ – ತಯಾರಾಗುತ್ತಿದೆ ಚಾರ್ಜ್‍ಶೀಟ್

ಬೆಂಗಳೂರು: ಎರಡು ಉಪಚುನಾವಣೆಯಲ್ಲಿನ ಸೋಲು ಕಾಂಗ್ರೆಸ್‍ನಲ್ಲಿ ಆಂತರಿಕ ಕಲಹ ಭುಗಿಲೇಳುವ ಸಾಧ್ಯತೆ ಕಂಡು ಬರುತ್ತಿದೆ. ಚುನಾವಣಾ ಅಖಾಡದಲ್ಲಿ ಹಿರಿಯರನ್ನು ಕಡೆಗಣಿಸಿ ನಾವೇ ಮೇಲು ಎಂದು ಓಡಾಡಿದವರ ವಿರುದ್ಧ ತಂಡವೊಂದು ಹೈಕಮಾಂಡ್‍ಗೆ ದೂರು ಕೊಡಲು ಚಾರ್ಜ್‍ಶೀಟ್ ಸಿದ್ದಪಡಿಸುತ್ತಿದೆ ಎನ್ನಲಾಗಿದೆ. ಕೆಲವರು ಪಕ್ಷದ ಶಿಸ್ತು ಮೀರಿ ಸಿಎಂ ಜಪ ಮಾಡಿದ್ದು, ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿತು. ತಮ್ಮ ಬೆಂಬಲಿಗರ ಆಟಾಟೋಪಕ್ಕೆ ಬ್ರೇಕ್ ಹಾಕದೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಪರೋಕ್ಷವಾಗಿ ಕುಮ್ಮಕ್ಕು ನೀಡಿದ್ದಾರೆ …

Read More »

ಸಂಪುಟ ಸರ್ಜರಿಗೆ ಸಿಎಂ ಬಳಿಯಿದೆ ಯಾರು ಇನ್‌? ಯಾರು ಔಟ್‌?

ಬೆಂಗಳೂರು: ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳನ್ನು ಬಿಜೆಪಿ ಜಯಗಳಿಸಿದರೂ ಈ ಗೆಲುವನ್ನು ಸಿಎಂ ಯಡಿಯೂರಪ್ಪ ಆಸ್ವಾದಿಸುವ ಸ್ಥಿತಿಯಲ್ಲಿ ಇದ್ದಂತೆ ಕಾಣುತ್ತಿಲ್ಲ. ಸಿಎಂ ಯಡಿಯೂರಪ್ಪ ಮುಂದೆ ಕ್ಯಾಬಿನೆಟ್ ಭರ್ತಿ ಮಾಡುವ ಸವಾಲಿದ್ದು ಯಾರನ್ನು ಸೇರಿಸಬೇಕು ಎನ್ನುವುದೇ ದೊಡ್ಡ ತಲೆನೋವಾಗಿದೆ. ಶೀಘ್ರವೇ ಸಂಪುಟಕ್ಕೆ ಸರ್ಜರಿ ನಡೆಯಲಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ವೇಳೆ, ಮೂಲ ಬಿಜೆಪಿಗರನ್ನು, ಮಿತ್ರಮಂಡಳಿಯನ್ನು ಜೊತೆಜೊತೆಯಲ್ಲೇ ಕರೆದೊಯ್ಯುವ ಅನಿವಾರ್ಯತೆ ಇದೆ. ದೀಪಾವಳಿ ಬಳಿಕ ಅಂದರೆ ನವೆಂಬರ್ 19 …

Read More »

ರಕ್ತರಹಿತವಾದ ಬಕ್ರೀದ್ ಆಚರಿಸೋಣ, ನಿಶ್ಶಬ್ದವಾದ ಶುಕ್ರವಾರ ಆಚರಣೆ ಮಾಡೋಣ. ಆಗ ಶಬ್ದವಿಲ್ಲದ, ಪಟಾಕಿ ಇಲ್ಲದ ದೀಪಾವಳಿ ಆಚರಿಸೋಣ

ಚಿಕ್ಕಮಗಳೂರು: ರಕ್ತರಹಿತವಾದ ಬಕ್ರೀದ್ ಆಚರಿಸೋಣ, ನಿಶ್ಶಬ್ದವಾದ ಶುಕ್ರವಾರ ಆಚರಣೆ ಮಾಡೋಣ. ಆಗ ಶಬ್ದವಿಲ್ಲದ, ಪಟಾಕಿ ಇಲ್ಲದ ದೀಪಾವಳಿ ಆಚರಿಸೋಣ ಎಂದು ಕಾಳಿಮಠದ ಋಷಿಕುಮಾರ ಸ್ವಾಮೀಜಿ ಸರ್ಕಾರದ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮಾತನಾಡಿದ ಅವರು, ಪಟಾಕಿ ನಿಷೇಧದ ಬಗ್ಗೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಹಸಿರು ಪಟಾಕಿಯಂತೆ. ಇದ್ಯಾವುದು ಹೊಸದು. ಎಲೆ ಸುತ್ತಬೇಕಾ ಅಥವಾ ಪೇಪರ್ ಹರಿದು ಹಸಿರು ಬಣ್ಣದ ಪೇಪರ್ ಸುತ್ತಬೇಕಾ ಎಂದು ಸರ್ಕಾರದ ವಿರುದ್ಧ …

Read More »

ರಜೆಗೆ ಬಂದಿದ್ದ ಯೋಧನನ್ನು ಕೊಂದಿದ್ದ ಪಾಪಿ ತಂದೆಗೆ ಜೀವಾವಧಿ ಶಿಕ್ಷೆ

ಬೆಳಗಾವಿ: ರಜೆಗೆ ಬಂದಿದ್ದ ಯೋಧನನ್ನು ಕೊಂದಿದ್ದ ಪಾಪಿ ತಂದೆಗೆ ಬೆಳಗಾವಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಕೋರ್ಟ್ ಇಂದು ಜೀವಾವಧಿ ಶಿಕ್ಷೆಯ ಜೊತೆಗೆ ಮೂರು ಸಾವಿರ ರೂ. ದಂಡ ವಿಧಿಸಿದೆ. 2016ರ ಡಿಸೆಂಬರ್ 12ರಂದು ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಗ್ರಾಮದಲ್ಲಿ ಮಗ ಈರಣ್ಣ ಹತ್ಯೆಗೈದಿದ್ದ ತಂದೆ ವಿಠ್ಠಲ್ ಇಂಡಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಹಣಕಾಸಿನ ವ್ಯವಹಾರ …

Read More »