ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಯಲಕ್ಕೂ ಕೊರೊನಾ ಸೋಂಕು ವಕ್ಕರಿಸಿದ್ದು, ವಿಶ್ವವಿದ್ಯಾಯಲ ಆವರಣದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಯೊಬ್ಬರಿಗೆ ಸೋಂಕು ದೃಢವಾಗಿದೆ. ಸಿಬ್ಬಂದಿಗೆ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಸಿಂಡಿಕೇಟ್ ಬ್ಯಾಂಕ್ ಸೀಲ್ ಡೌನ್ ಮಾಡಲಾಗಿದೆ. ನೌಕರನಿಗೆ ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿ ಪಾಸಿಟಿವ್ ಬಂದಿದೆ.
Read More »Daily Archives: ಜುಲೈ 27, 2020
ಮಧ್ಯರಾತ್ರಿ ‘ಬಿಗ್‍ಬಾಸ್’ ಖ್ಯಾತಿಯ ಕವಿತಾ ಗೌಡ ಮನೆಗೆ ಹೋಗಿ ಚಂದನ್ ಸರ್ಪ್ರೈಸ್
ಬೆಂಗಳೂರು: ರಿಯಾಲಿಟಿ ಶೋ ‘ಬಿಗ್‍ಬಾಸ್’ ಖ್ಯಾತಿಯ ಕಿರುತೆರೆ ನಟಿ ಕವಿತಾ ಗೌಡ ಮನೆಗೆ ಮಧ್ಯರಾತ್ರಿ ನಟ ಚಂದನ್ ಹೋಗಿ ಸರ್ಪ್ರೈಸ್ ಕೊಟ್ಟಿದ್ದಾರೆ. ಭಾನುವಾರ ಕವಿತಾ ಗೌಡ ಹುಟ್ಟುಹಬ್ಬ ಇತ್ತು. ಕೊರೊನಾ ಇರುವುದರಿಂದ ಮನೆಯಲ್ಲಿಯೇ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ವೇಳೆ ನಟ ಚಂದನ್ 12 ಗಂಟೆಗೆ ಸರಿಯಾಗಿ ಕವಿತಾ ಗೌಡ ಮನೆಗೆ ಹೋಗಿ ಅವರಿಗೆ ಸರ್ಪ್ರೈಸ್ ನೀಡಿದ್ದಾರೆ. ಅಷ್ಟೇ ಅಲ್ಲದೇ ಕವಿತಾ ಗೌಡ ಹುಟ್ಟುಹಬ್ಬಕ್ಕೆ ಉಡುಗೊರೆಯನ್ನು ಕೊಟ್ಟಿದ್ದಾರೆ. “ಸ್ನೇಹಿತರ ಹುಟ್ಟುಹಬ್ಬದ …
Read More »ಫ್ರಂಟ್‍ಲೈನ್ ನಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವ ವೈದ್ಯನನ್ನು ಮಹಾಮಾರಿ ಕೊರೊನಾ ಬಲಿ ಪಡೆದಿದೆ.
ನವದೆಹಲಿ: ಫ್ರಂಟ್‍ಲೈನ್ ನಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಯುವ ವೈದ್ಯನನ್ನು ಮಹಾಮಾರಿ ಕೊರೊನಾ ಬಲಿ ಪಡೆದಿದೆ. ಶನಿವಾರ ರಾತ್ರಿ ವೈದ್ಯ ಜೋಗಿಂದರ್ ಚೌಧರಿ ನಿಧನರಾಗಿದ್ದು, ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಇವರನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ನೇಮಿಸಲಾಗಿತ್ತು. ಜೂನ್ 27ರಂದು ಚೌಧರಿ ಅವರಿಗೆ ಸೋಂಕು ತಗುಲಿದ್ದು ದೃಢವಾಗಿತ್ತು. ಕಳೆದ ಒಂದು ತಿಂಗಳಿನಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮೊದಲಿಗೆ ದೆಹಲಿಯ ಲೋಕ್ ನಾಯಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದಂತೆ …
Read More »ಮನೆಯಲ್ಲಿದ್ದುಕೊಂಡೇ ಒಟಿಟಿಯಲ್ಲಿ ಕನ್ನಡ ಸಿನಿಮಾಗಳ ಮೇಲೆ ಅಪಾರ ಪ್ರೀತಿ ತೋರುತ್ತಿದ್ದಾರೆ.
ಕೊರೊನಾ ಎಫೆಕ್ಟ್ ನಿಂದ ಸಿನಿಮಾ ರಿಲೀಸ್ ಆಗ್ತಿಲ್ಲ. ಚಿತ್ರಮಂದಿರಕ್ಕೆ ಬಂದು ಸಿನಿಮಾ ಕಣ್ತುಂಬಿಕೊಳ್ಳೋ ಭಾಗ್ಯ ಸಿನಿರಸಿಕರ ಪಾಲಿಗೆ ಸದ್ಯಕ್ಕಿಲ್ಲ. ಹಾಗಂತ ನಮ್ಮ ಸಿನಿ ಪ್ರೇಮಿಗಳು ಸಿನಿಮಾ ನೋಡೋದು ಬಿಟ್ಟಿಲ್ಲ. ಮನೆಯಲ್ಲಿದ್ದುಕೊಂಡೇ ಒಟಿಟಿಯಲ್ಲಿ ಕನ್ನಡ ಸಿನಿಮಾಗಳ ಮೇಲೆ ಅಪಾರ ಪ್ರೀತಿ ತೋರುತ್ತಿದ್ದಾರೆ. ನಿಜ ಹೇಳ್ಬೇಕು ಅಂದ್ರೆ ಥಿಯೇಟರ್ ಅಂಗಳದಲ್ಲೂ ಸಿಗದ ಅದ್ಭುತ ರೆಸ್ಪಾನ್ಸ್ ಒಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಕನ್ನಡ ಸಿನಿಮಾಗಳಿಗೆ ಸಿಕ್ತಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ‘ನಮ್ ಗಣಿ …
Read More »ಬೆಳಗಾವಿಯಲ್ಲಿ ಆ್ಯಂಬುಲೆನ್ಸ್ ಗೆ ಬೆಂಕಿಯಿಟ್ಟಿದ್ದ 9 ಆರೋಪಿಗಳಿಗೆ ಕೊರೊನಾ ಪಾಸಿಟಿವ್..!
ಬೆಂಗಳೂರು,ಜು.27-ಬೆಳಗಾವಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಆ್ಯಂಬುಲೆನ್ಸ್ ಸುಟ್ಟು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಯತ್ನ ನಡೆಸಿದ್ದ ಪ್ರಕರಣದಲ್ಲಿ ಬಂಧಿತರಾಗಿದ್ದ 22 ಆರೋಪಿಗಳಲ್ಲಿ 9 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಜು.22ರಂದು ಇಲ್ಲಿನ ಬಿಮ್ಸ್ ಆಸ್ಪತ್ರೆ ಮುಂಭಾಗ ಆ್ಯಂಬುಲೆನ್ಸ್‍ಗೆ ದುಷ್ಕರ್ಮಿಗಳು ಬೆಂಕಿ ಇಟ್ಟು ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಯತ್ನ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 22 ಮಂದಿಯನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ 9 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಎಲ್ಲರನ್ನು …
Read More »“ಯಾರು ಎಷ್ಟೇ ಟೀಕೆ ಮಾಡಿದರೂ ನಾನೆಂದೂ ದ್ವೇಷ ರಾಜಕಾರಣ ಮಾಡಲ್ಲ” : ಸಿಎಂ ಬಿಎಸ್ವೈ
ಬೆಂಗಳೂರು,ಜು.27- ನನ್ನನ್ನು ಎಷ್ಟೇ ಟೀಕೆ ಮಾಡಿದರೂ ನಾನು ಯಾರ ಬಗ್ಗೆಯೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸವಾಲುಗಳ ವರ್ಷ, ಪರಿಹಾರದ ಸ್ಪರ್ಶ, ಸರ್ಕಾರದ ಪ್ರಗತಿ ವರದಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನನ್ನನ್ನು ಎಷ್ಟೇ ಟೀಕೆ ಮಾಡಲಿ. ಇದರ ಬಗ್ಗೆ ಗಮನಹರಿಸುವುದಿಲ್ಲ. ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ತೀರ್ಮಾನಿಸಿದ್ದೇನೆ. ಪ್ರತಿಪಕ್ಷಗಳು ಎಷ್ಟೇ ಟೀಕೆ ಮಾಡಿದ್ದರೂ ಎಂದಿಗೂ ದ್ವೇಷ ರಾಜಕಾರಣ …
Read More »“ಯಾರು ಎಷ್ಟೇ ಟೀಕೆ ಮಾಡಿದರೂ ನಾನೆಂದೂ ದ್ವೇಷ ರಾಜಕಾರಣ ಮಾಡಲ್ಲ” : ಸಿಎಂ ಬಿಎಸ್ವೈ
ಬೆಂಗಳೂರು,ಜು.27- ನನ್ನನ್ನು ಎಷ್ಟೇ ಟೀಕೆ ಮಾಡಿದರೂ ನಾನು ಯಾರ ಬಗ್ಗೆಯೂ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಸವಾಲುಗಳ ವರ್ಷ, ಪರಿಹಾರದ ಸ್ಪರ್ಶ, ಸರ್ಕಾರದ ಪ್ರಗತಿ ವರದಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನನ್ನನ್ನು ಎಷ್ಟೇ ಟೀಕೆ ಮಾಡಲಿ. ಇದರ ಬಗ್ಗೆ ಗಮನಹರಿಸುವುದಿಲ್ಲ. ನಾನು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ತೀರ್ಮಾನಿಸಿದ್ದೇನೆ. ಪ್ರತಿಪಕ್ಷಗಳು ಎಷ್ಟೇ ಟೀಕೆ ಮಾಡಿದ್ದರೂ ಎಂದಿಗೂ ದ್ವೇಷ ರಾಜಕಾರಣ …
Read More »ಶಾಸಕ ದುರ್ಯೋಧನನಿಗೆ ಖಾದಿ ಮತ್ತು ಗ್ರಾಮೋದ್ಯೋಗ ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಕ
ಬೆಳಗಾವಿ: ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಅವರಿಗೆ ಕರ್ನಾಟಕ ಖಾದಿ ಮತ್ತು ಗ್ರಾಮೋದ್ಯೋಗ ನಿಗಮ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ. ರಾಯಬಾಗ ಕ್ಷೇತ್ರಿದಂದ ಸತತ ಮೂರು ಬಾರಿ ಶಾಸಕರಾಗಿ ದುರ್ಯೋಧನ ಐಹೊಳೆ ಅವರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದೆ. ಸಂಭ್ರಮದ ಮಧ್ಯೆಯೇ 24 ಶಾಸಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಂಪರ್ ಗಿಫ್ಟ್ ನೀಡಿದ್ದಾರೆ. 24 …
Read More »ಅಥಣಿ ತಾಲ್ಲೂಕಿನ ವ್ಯಕ್ತಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಮತ್ತು ನೆಗೆಟಿವ್ ಎರಡು ರಿಪೋರ್ಟ್
ಬೆಳಗಾವಿ: ಜಿಲ್ಲೆ ಅಥಣಿ ತಾಲ್ಲೂಕಿನ ವ್ಯಕ್ತಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಮತ್ತು ನೆಗೆಟಿವ್ ಎರಡು ರಿಪೋರ್ಟ್ ನೀಡಿ ಅಧಿಕಾರಿಗಳು ನಿನ್ನೆ ಎಡವಟ್ಟು ಮಾಡಿದ್ದಾರೆ. ಜುಲೈ 15ರಂದು ಅಥಣಿಯಲ್ಲಿ ಗಂಟಲು ದ್ರವದ ಮಾದರಿಯನ್ನು ನೀಡಿದ್ರು. ಜುಲೈ 16ರಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾಗಿ ಅಲ್ಲಿಯೇ ದಾಖಲಾಗಿದ್ದರು. ಜುಲೈ 18ರಂದು ಬೆಳಗಾವಿ ಬಿಮ್ಸ್ ಕೊರೊನಾ ನೆಗೆಟಿವ್ ರಿಪೋರ್ಟ್ ನೀಡಿದ ಹಿನ್ನೆಲೆ ಅಂದೇ ಡಿಸ್ಚಾರ್ಜ್ ಮಾಡಿತ್ತು. ಕೊರೊನಾ ನೆಗೆಟಿವ್ ವರದಿ ಪಡೆದು ವ್ಯಕ್ತಿ …
Read More »ಡಿಸಿಎಂ ಲಕ್ಷ್ಮಣ ಸವದಿ ದೆಹಲಿ ಭೇಟಿ ತೀವ್ರ ಕುತೂಹಲ
ಬೆಂಗಳೂರು: ಡಿಸಿಎಂ ಲಕ್ಷ್ಮಣ ಸವದಿ ದೆಹಲಿ ಭೇಟಿ ತೀವ್ರ ಕುತೂಹಲ ಮೂಡಿಸಿದ್ದು ರಾಜಕೀಯ ಮೊಗಸಾಲೆಯಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ವರ್ಷ ತುಂಬುತ್ತಿದ್ದಂತೆ ದೆಹಲಿಗೆ ಹಾರಿರುವ ಲಕ್ಷ್ಮಣ ಸವದಿ ಇಂದು ಬಿಜೆಪಿ ವರಿಷ್ಠರ ಜೊತೆ ಸಭೆ ನಡೆಸಲಿದ್ದಾರೆ. ಮೊನ್ನೆಯಷ್ಟೇ ರಾಜ್ಯಪಾಲ ವಜೂಭಾಯ್ ವಾಲಾ ಕರೆಗೆ ಓಗೊಟ್ಟು ಸವದಿ ರಾಜಭವನಕ್ಕೆ ತೆರಳಿದ್ದರು. ಈ ವೇಳೆ ರಾಜ್ಯಪಾಲರು, ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗುವಂತೆ ಸವದಿಗೆ …
Read More »