Breaking News

ಸಾರ್ವಜನಿಕರ ಮೇಲೆ ಲಾಠಿ ಚಾರ್ಜ್ ಮಾಡದಂತೆ ಕಮಿಷನರ್​ ಭಾಸ್ಕರ್ ರಾವ್, ನಗರ ಪೊಲೀಸರಿಗೆ ಖಡಕ್​ ಆದೇಶ

Spread the love

ಬೆಂಗಳೂರು: ಲಾಕ್​ಡೌನ್​ ಆದೇಶ ಉಲ್ಲಂಘಿಸುವ ಸಾರ್ವಜನಿಕರ ಮೇಲೆ ಲಾಠಿ ಚಾರ್ಜ್ ಮಾಡದಂತೆ ಕಮಿಷನರ್​ ಭಾಸ್ಕರ್ ರಾವ್, ನಗರ ಪೊಲೀಸರಿಗೆ ಖಡಕ್​ ಆದೇಶ ನೀಡಿದ್ದಾರೆ.

ಪೊಲೀಸರು ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಬೇಕು. ವೃದ್ದರು, ಮಹಿಳೆಯರಿಗೆ ಗೌರವ ನೀಡಿ. ಕಡ್ಡಾಯವಾಗಿ ಸಮವಸ್ತ್ರ ಧರಿಸಿಬೇಕು. ಅವಶ್ಯಕತೆ ಇದ್ದರೆ ಕೇವಲ ಕೆಎಸ್​ಆರ್​ಪಿ ಮತ್ತು ಸಿಎಆರ್​ ಪೊಲೀಸರು ಮಾತ್ರ ಬಳಸಬಹುದು. ಆದ್ರೆ ಸಿವಿಲ್​ ಪೊಲೀಸರು ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಲಾಠಿ ಬಳಸಬೇಡಿ.

ಮೈಕ್​ಗಳನ್ನ ಬಳಸಿ ಅನೌನ್ಸ್​ಮೆಂಟ್​ ಮಾಡುವ ಮೂಲಕ ಜನರ ಮನವೊಲಿಸಿ ಅಂತಾ ಹೇಳಿದ್ದಾರೆ.

ಗೃಹಸಚಿವ ಬಸವರಾಜ ಬೊಮ್ಮಾಯಿ ಕೂಡಾ ಲಾಠಿ ಬಳಸದಂತೆ ಪೊಲೀಸರಿಗೆ ಆದೇಶ ನೀಡಿದ್ದಾರೆ.


Spread the love

About Laxminews 24x7

Check Also

ಹುಬ್ಬಳ್ಳಿಯಲ್ಲಿ ನಾಳೆ ವೀರಶೈವ ಲಿಂಗಾಯತ ಏಕತಾ ಸಮಾವೇಶ

Spread the loveಹುಬ್ಬಳ್ಳಿ: ರಾಜ್ಯ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಹಿನ್ನೆಲೆಯಲ್ಲಿ ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಧರ್ಮದ ಪ್ರತಿಪಾದಕರಲ್ಲಿ ಮೂರ್ನಾಲ್ಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ