Breaking News

ಅಬುಧಾಬಿಯಲ್ಲಿ ಮಂಗಳೂರಿನ ಅಡ್ಡೂರಿನ ಯುವಕ ಯಶವಂತ ಪೂಜಾರಿಗೆ ಅಪಘಾತ,ಮಂಗಳೂರಿನ ಯುವಕನ ಮೃತದೇಹ ತವರೂರಿಗೆ

Spread the love

ಮಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ಮಾನವೀಯತೆ ಮೆರೆದ, ಸೌಹಾರ್ದತೆಯನ್ನು ಎತ್ತಿಹಿಡಿಯುವಂತಹ ಶ್ಲಾಘನೀಯ ಕಾರ್ಯವನ್ನು ಯುಎಇಯ ಕನ್ನಡಿಗರು ನಡೆಸಿದ್ದು. ಅಬುಧಾಬಿಯಲ್ಲಿ ಮೃತರಾಗಿದ್ದ ಕರಾವಳಿಯ ಯುವಕ ಯಶವಂತ್ ಪೂಜಾರಿಯ ಮೃತದೇಹವನ್ನು ಯುಎಇ ಸರ್ಕಾರದ ಎಲ್ಲಾ ನಿಯಮ ಪಾಲಿಸಿ ತಾಯ್ನಾಡಿಗೆ ರವಾನಿಸಲು ಯಶಸ್ವಿಯಾಗಿದ್ದು. ಈ ಯಶಸ್ವಿಯ ಹಿಂದೆ ಸತತ 13 ದಿನಗಳು ನಡೆಸಿದ ಪರಿಶ್ರಮ ಎಲ್ಲರಿಗೂ ಮಾದರಿಯಾಗಿದೆ.

ಅಬುಧಾಬಿಯಲ್ಲಿ ಮಂಗಳೂರಿನ ಅಡ್ಡೂರಿನ ಯುವಕ ಯಶವಂತ ಪೂಜಾರಿಗೆ ಅಪಘಾತವಾಗಿದೆ ಎಂದು ಮುಝಮ್ಮಿಲ್ ಎಂಬವರು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡದ ಹಿದಾಯತ್ ಅಡ್ಡೂರ್ ರವರಿಗೆ ಕರೆಮಾಡಿ ತಿಳಿಸಿದ್ದು, ಅವರು ಮೃತರ ಒಂದು ಫೋಟೋ ಮತ್ತು ಆಧಾರ್ ಕಾರ್ಡ್ ಮಾತ್ರವಿರುವುದು, ಪಾಸ್ ಪೋರ್ಟ್ ಕಾಪಿ, ಮೊಬೈಲ್ ನಂಬರ್ ಅಥವಾ ಬೇರೆ ಯಾವುದೇ ದಾಖಲೆಗಳಿಲ್ಲ, ಸ್ವಲ್ಪ ಸಹಾಯ ಮಾಡಿ ಎಂದಾಗ ಇದನ್ನು ಸವಾಲಾಗಿ ಸ್ವೀಕರಿಸಿ ಹಿದಾಯತ್ ಮತ್ತು ತಂಡ ಕಾರ್ಯಪ್ರವೃತ್ತರಾದರು.

ಯಶವಂತ್ ಕುರಿತು ಮಾಹಿತಿ ಕಲೆ ಹಾಕಲು ಹೊರಟಾಗ ಆತ ಮೃತಪಟ್ಟಿದ್ದು, ಅನಾಥ ಶವವಾಗಿ ಶವಾಗಾರದಲ್ಲಿ ಇರುವುದು ತಿಳಿದ್ದು ಯಶವಂತ್ ಹೆತ್ತವರು ಅವರ ಮಗನ ಮುಖವನ್ನು ಕೊನೆಯ ಬಾರಿಗೆ ನೋಡಬೇಕು, ಹೇಗಾದರೂ ಮಾಡಿ ಊರಿಗೆ ಮೃತದೇಹವನ್ನು ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ವಿನಂತಿಕೊಂಡಾಗ, ಇದನ್ನು ಕಾರ್ಯರೂಪಕ್ಕೆ ತರಲು ಹಿದಾಯತ್ ವಾಟ್ಸಾಪ್ ಗ್ರೂಪ್ ಒಂದನ್ನು ರಚಿಸಿ ಕನ್ನಡಿಗಾಸ್ ಹೆಲ್ಪ್ ಲೈನ್ ನ ಸಿರಾಜ್ ಪರ್ಲಡ್ಕ, ದಯಾ ಕಿರೋಡಿಯನ್, ನವೀದ್ ಮಾಗುಂಡಿ, ಅನಿವಾಸಿ ಕನ್ನಡಿಗರ ಒಕ್ಕೂಟದ ರಶೀದ್ ಬಿಜೈ, ಶರೀಫ್ ಸರ್ವೆ, ಬಶೀರ್ ಕೊಡ್ಲಿಪೇಟೆ, ಅಬುಧಾಬಿಯ ಪ್ರದೀಪ್ ಕಿರೋಡಿಯನ್, ಶ್ರೀಧರ್, ದೀಪ ಹಾಗೂ ಮಂಗಳೂರಿನಲ್ಲಿರುವ ಆಸಿಫ್, ಮುಝಮ್ಮಿಲ್, ಭಾಗ್ಯರಾಜ್, ದೀಪಕ್, ರಾಜೇಶ್ ಮರೋಳಿ ಮತ್ತಿತರನ್ನು ಸೇರಿಸಿ ಕಾರ್ಯಪ್ರವೃತ್ತರಾದರು.

ಕೊರೋನ ಸಂಕಷ್ಟದ ಈ ಸೂಕ್ಷ್ಮ ಸಮಯದಲ್ಲಿ ಪೋಸ್ಟ್ ಮಾರ್ಟಮ್ ನಡೆಸಿ ಸಹಜ ಸಾವು ಎಂದು ಖಚಿತಪಡಿಸಿ, ಕೋವಿಡ್ ಟೆಸ್ಟ್ ನಡೆಸಿ ನೆಗೆಟಿವ್ ವರದಿ ಬಂದ ನಂತರವೂ ಯಶವಂತ ಪಾಸ್ ಪೋರ್ಟ್, ವಿಸಾ, ಎಮಿರೇಟ್ಸ್ ಕಾರ್ಡ್ ಯಾವುದೂ ಇರದೇ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲು ಪರವಾನಗಿ ಪಡೆಯುವುದು ಅಸಾಧ್ಯ ಎಂಬಂತಿದ್ದಾಗ ಭಾರತೀಯ ರಾಯಭಾರಿ ಕಚೇರಿಯಲ್ಲಿ ರಶೀದ್ ಬಿಜೈ ನೇತೃತ್ವದಲ್ಲಿ ತಾತ್ಕಾಲಿಕ ಪಾಸ್ ಪೋರ್ಟ್ ಮತ್ತು ಎಲ್ಲಾ ಪರವಾನಗಿ ಕೆಲಸ ತ್ವರಿತವಾಗಿ ನಡೆಯಿತು.ಈ ಸಂದರ್ಭದಲ್ಲಿ ದುಬೈ ಕಾನ್ಸುಲೇಟ್ ಮತ್ತು ಕಾರ್ಗೋ ಸಂಬಂಧಿಸಿದ ಎಲ್ಲಾ ಕೆಲಸಕ್ಕೂ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ಸಂಪೂರ್ಣ ಸಹಕಾರ ನೀಡಲಿದೆ ಎಂದು ಪ್ರವೀಣ್ ಶೆಟ್ಟಿಯವರೂ ಭರವಸೆ ನೀಡಿದರು. ಅದೇ ರೀತಿ ಮಂಗಳೂರಿನಲ್ಲಿ ಬೇಕಾದ ಎಲ್ಲಾ ಕಾನೂನಾತ್ಮಕ ಕೆಲಸವನ್ನು ನ್ಯಾಯವಾದಿ ಉಲ್ಲಾಸ್ ಪಿಂಟೋ ಸಕ್ರಿಯವಾಗಿ ಸಹಕರಿಸಿದರು.

ಯಶವಂತ್ ಕುಟುಂಬದರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ದೈನಂದಿನ ಚಟುವಟಿಕೆ ಬಗ್ಗೆ ಮಾಹಿತಿ ನೀಡುತ್ತಿದ್ದ ಹಿದಾಯತ್ ರವರು ಮೃತದೇಹ ರವಾನಿಸಲು ಉಂಟಾಗುವ ಖರ್ಚುನ್ನು ಕನ್ನಡಿಗರ ತಂಡವೇ ಸಂಪೂರ್ಣವಾಗಿ ಭರಿಸಲಿದೆ ಎಂದು ಭರವಸೆ ನೀಡಿದರು, ಅಬುಧಾಬಿಯಲ್ಲಿದ್ದ ಮೃತದೇಹ ದುಬೈ ಮೂಲಕ ತಾಯ್ನಾಡಿಗೆ ತಲುಪಬೇಕೆಂದು ಅಂತಿಮವಾದಾಗ ದುಬೈನಲ್ಲಿ ಪೊಲೀಸ್ ಮತ್ತು ಇತರ ಪರವಾನಗಿ ಕೆಲಸವನ್ನು ಹಮೀದ್ ಸತ್ತಿ ಕಲ್ಲ್ ನಡೆಸಿಕೊಟ್ಟು ಪೂರ್ತಿಗೊಂಡ ನಂತರ ಮೃತದೇಹದೊಂದಿಗೆ ಆಂಬ್ಯುಲೆನ್ಸ್ ನಲ್ಲಿ ಸಿರಾಜ್ ಪರ್ಲಡ್ಕ ಅಬುಧಾಬಿಯಿಂದ ದುಬೈ ತಲುಪಿ ದುಬೈನಲ್ಲಿ ನವೀದ್ ಮಾಗುಂಡಿ, ದಯಾ ಕಿರೋಡಿಯನ್, ಇಮ್ರಾನ್ ಖಾನ್, ಯಶವಂತ್ ಕರ್ಕೇರಾರವರು ಜೊತೆಗೂಡಿ ವಿಮಾನದಲ್ಲಿ ರವಾನಿಸುವ ಅಂತಿಮ ಕೆಲಸದಲ್ಲಿ ಪಾಲ್ಗೊಂಡು ಸಹಕರಿಸಿದರು.

ಈ ಕುರಿತು ಮಾತನಾಡಿದ ಕನ್ನಡಿಗಾಸ್ ಹೆಲ್ಪ್ ಲೈನ್ ನ ಹಿದಾಯತ್ ಅಡ್ಡೂರ್, ಎಲ್ಲಕ್ಕಿಂತಲೂ ಮಿಗಿಲಾದದ್ದು ಮಾನವಧರ್ಮ,ಯಶವಂತ್ ನಮ್ಮ ಊರಿನ ಹುಡುಗ, ಕನ್ನಡಿಗ, ಹಾಗಾಗಿ ಇದು ನಮ್ಮ ಕರ್ತವ್ಯ, ಕೊನೆಗೂ ಯಶವಂತನ ತಾಯಿಗೆ ಆತನ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಿಲಿದೆ ಎಂಬ ಖುಷಿ ಇದೆ, ಈ ಕೆಲಸದಲ್ಲಿ ಹಿಂದೂ ಮುಸ್ಲಿಂ ಕ್ರೈಸ್ತ ಹೀಗೆ ಎಲ್ಲಾ ಸಹೃದಯಿ ಸಹೋದರರು ಸಹಕಾರ ನೀಡಿದ್ದಾರೆ, ವಿಶೇಷವಾಗಿ ರಶೀದ್ ಬಿಜೈ ಹಾಗೂ ಇತರ ಎಲ್ಲರಿಗೂ ಧನ್ಯವಾದಗಳು ತಿಳಿಸಿದರು, ಅಲ್ಲದೇ ಯಶವಂತ್ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಲು ಅನಿವಾಸಿ ಕನ್ನಡಿಗರು ಮುಂದೆಬಂದಿದ್ದು, ಅದನ್ನೂ ಶೀಘ್ರದಲ್ಲೇ ತಲುಪಿಸಲಾಗುವುದು ಎಂದರು.


Spread the love

About Laxminews 24x7

Check Also

ಮೊಬೈಲ್ ನೋಡ್ಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆ

Spread the loveಶಿವಮೊಗ್ಗ, (: ಮೊಬೈಲ್ (Mobile) ಹೆಚ್ಚು ನೋಡಬೇಡ ಎಂದು ಪೋಷಕರು ಬುದ್ಧಿ ಹೇಳಿದ್ದಕ್ಕೆ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ