ಅಥಣಿ- ತಹಸೀಲ್ದಾರ್ ಚಾಲಕನ ಮೇಲೆ ಟ್ರಾಕ್ಟರ್ ಹಾಯಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆ ಮಾಡಲು ಪ್ರಯತ್ನಿಸಿದ ಆರೋಪಿತರನ್ನು ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಥಣಿ ತಾಲೂಕಿನ ಶಿರೂರ -ಖಿಳೆಗಾಂವ ಮಧ್ಯದ ಹಳ್ಳದಲ್ಲಿ ಅಕ್ರಮ ಮರಳು ಗಣಿಗಾರಿಕೆ
ಮಾಡುತ್ತಿದ್ದಾಗ ಅಥಣಿ ತಹಸೀಲ್ದಾರ್ ಮತ್ತು ಅವರ ಚಾಲಕ ಅನಿಲ್ ಮಲ್ಲಪ್ಪ ಗಸ್ತಿ ಹಾಗೂ ಆರ್.ವಿ. ಖಲಾಟೆ ಅವರೊಂದಿಗೆ ದಾಳಿ ಕೈಗೊಂಡಾಗ ತಹಸೀಲ್ದಾರ್ ಮತ್ತು ಅವರ ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಒತ್ತಾಯಪೂರ್ವಕವಾಗಿ ಟ್ರ್ಯಾಕ್ಟರನ್ನು ತೆಗೆದುಕೊಂಡು ಹೊರಟಾಗ ಟ್ರಾಕ್ಟರ್‌ಗೆ ಅಡ್ಡಗಟ್ಟಿದ ತಹಸೀಲ್ದಾರ್ ಕಾರು ಚಾಲಕ ಅನಿಲ್ ಗಸ್ತಿ ಇವರ ಮೇಲೆ ಟ್ರಾಕ್ಟರ್ ಹಾಯಿಸಿ ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ (ಅಪರಾಧ ಸಂಖ್ಯೆ 139/2020 ಕಲಂ 353, 307 ಐಪಿಸಿ ಮತ್ತು 3 ಪ್ರಿವೆನ್ನನ್ ಆಫ್ ಡ್ಯಾಮೇಜ್ ಟು ಪಬ್ಲಿಕ್ ಪ್ರಾಪರ್ಟಿ ಆಕ್ಟ್ ಅಡಿಯಲ್ಲಿ ದಿನಾಂಕ: 27-04-2020 ರಂದು) ಪ್ರಕರಣ ದಾಖಲಾಗಿದೆ.
ಪ್ರಕರಣದಲ್ಲಿ ಭಾಗಿಯಾದ ಆರೋಪಿತರಾದ 1) ಸಾಗರ್ ಮಾರುತಿ ತಂದೆ ಶ್ರೀರಂಗ ಕೋಳಿ 2) ಗಣಪತಿ ಚನ್ನಪ್ಪ ಮಾನೆ 3) ನಾರಾಯಣ ಬಾಪು ಹೊನಮೋಲೆ 4) ಪ್ರಕಾಶ ಲಕ್ಷಣ ಹೊನಮೋರೆ, ಎಲ್ಲರನ್ನೂ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರಪಡಿಸಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತರು ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದರು. ಬಂಧಿಸಲು ಸಿಪಿಐ ಅಥಣಿ ಶ್ರೀ ಶಂಕರಗೌಡ ಬಸನಗೌಡರ್ ಹಾಗೂ ಅವರ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.