Breaking News

ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಕತಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ :ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಜರುಗಿತು.

Spread the love

ಬೆಳಗಾವಿ: ಯಮಕನಮರಡಿ ವಿಧಾನಸಭಾ ಕ್ಷೇತ್ರದ ಕಾಕತಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಇರುವ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಜರುಗಿತು.

ಇದೇ ವೇಳೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕಾಂಗ್ರೆಸ್ ಎದುರಾಳಿ ಪಕ್ಷಕ್ಕೆ ಕೌಂಟರ್ ಕೊಡಬೇಕಾಗಿದೆ. ಪಕ್ಷ ಸಂಘಟನೆಗೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ.ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಪ್ರತಿದಿನ ಸೋಶಿಯಲ್ ಮೀಡಿಯಾದಲ್ಲಿ ಎದುರಾಳಿ ಪಕ್ಷದಲ್ಲಿ ಮೂರನಾಲ್ಕು ಸುಳ್ಳು ಸುದ್ದಿಗಳು ಬರುತ್ತವೆ. ಅವುಗಳನ್ನು ನೋಡಿ ಸುಮ್ಮನಿರದೆ, ಸುಳ್ಳು ವಂದತಿಯ ವಿರುದ್ಧ ಧ್ವನಿ ಎತ್ತಬೇಕು. ಪ್ರತಿ ಜಿಲ್ಲೆ ಜಿಲ್ಲಾಧ್ಯಕ್ಷ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಕಾರ್ಯವನ್ನು ಪಕ್ಷ ಗಮನಿಸುತ್ತದೆ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲಾಧ್ಯಕ್ಷ ವಿನಯ ನಾವಗಟ್ಟಿ, ಕೆಪಿಸಿಸಿ ಚಿಕ್ಕೋಡಿ ಲೋಕಸಭಾ ವೀಕ್ಷಕ ನ್ಯಾಯವಾದಿ ಎಂ.ವಿ.ಗಸ್ತಿ, ಅರುಣ ಕಟಾಂಬಳೆ, ಲಕ್ಷ್ಮಣರಾವ ಚಿಂಗಳೆ, ತೇಜಸ್ವಿನಿ ನಾಯಕವಾಡಿ, ರಾಮಣ್ಣ ಗುಳ್ಳಿ ಸೇರಿದಂತೆ ಇತರರು ಇದ್ದರು.


Spread the love

About Laxminews 24x7

Check Also

ಗೋಕಾಕ ಗ್ರಾಮ ದೇವತೆಯರ ಆಶೀರ್ವಾದ ಪಡೆದ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ರಾಜಕೀಯ ಹಿರಿಯ ಮುಖಂಡರಾದ ಅಶೋಕ್ ಪೂಜಾರಿ

Spread the loveಗೋಕಾಕ ಗ್ರಾಮ ದೇವತೆಯರ ಆಶೀರ್ವಾದ ಪಡೆದ ಶಾಸಕರಾದ ರಮೇಶ್ ಜಾರಕಿಹೊಳಿ ಹಾಗೂ ರಾಜಕೀಯ ಹಿರಿಯ ಮುಖಂಡರಾದ ಅಶೋಕ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ