Breaking News

ಶಿವಪೂರ ಹ ಗ್ರಾಮದ ಒಂದು ಕುಟುಂಬದ ವ್ಯಕ್ತಿಗೆ ಕೊರೊನಾ ಸೋಂಕು ಬಂದಿದೆ ಎಂಬ ಸುಳ್ಳು ಸುದ್ದಿ

Spread the love

ಮೂಡಲಗಿ ನಗರ ಸಮೀಪದ ಶಿವಪೂರ ಹ ಗ್ರಾಮದ ಒಂದು ಕುಟುಂಬದ ವ್ಯಕ್ತಿಗೆ ಕೊರೊನಾ ಸೋಂಕು ಬಂದಿದೆ ಎಂಬ ಸುಳ್ಳು ಸುದ್ದಿ ಹರಡಿದ ನಿಮಿತ್ಯ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು ಗ್ರಾಮದ ಹಿರಿಯರು ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರು ಗ್ರಾಮಸ್ಥರಿಗೆ ಧೈರ್ಯ ತುಂಬುವುದರ ಮುಖಾಂತರ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಹಿರಿಯರನ್ನು ಹಾಗೂ ಮಕ್ಕಳನ್ನು ಹೊರ ಬರದಂತೆ ನೋಡಿಕೊಳ್ಳಬೇಕು.

ಹಾಗೂ ಗ್ರಾಮದಲ್ಲಿ ಅನಾವಶ್ಯಕವಾಗಿ ಯಾರು ಹೊರಗಡೆ ತಿರುಗಾಡುವುದು ನಮ್ಮೆಲ್ಲರಿಗೂ ಕಂಟಕವಾಗುತ್ತೆ ಗ್ರಾಮ ಮತ್ತು ದೇಶದ ರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲೆ ಇದೆ ಎಂದು ಧ್ವನಿ ವರ್ಧಕ ಮುಖಾಂತರ ಜನರಲ್ಲಿ ಮನವರಿಕೆ ಮಾಡಿಸಿ ಗ್ರಾಮಕ್ಕೆ ಅಂಟಿಕೊಂಡಿರುವ ಕೋಳೆಯನ್ನು ತೊಳೆಯಲು ಮುಂಜಾಗೃತ ಕ್ರಮವಾಗಿ ಗ್ರಾಮದಲ್ಲಿ ಔಷಧಿ ಸಿಂಪಡಿಸಲಾಯಿತು, ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಶಿವ ಬಸು ಜುಂಜರವಾಡ್ ಶಿವನಗೌಡ ಪಾಟೀಲ್ ಪಿ ಡಿ ಒ ಶ್ರೀಶೈಲ ತಡಸನ್ನವರ ಸಿದ್ದಣ್ಣ ನಡಗಟ್ಟಿ ಪೊಲೀಸ್ ಸಿಬ್ಬಂದಿ ನಾಗಪ್ಪ ಒಡೆಯರ್ ಮಾಜಿ ಸೈನಿಕ ಶಂಕರ ತುಕ್ಕನ್ನವರ ಶ್ರೀಶೈಲ ಬೆಳಗಲಿ ರೇವಣಶಿದ್ದ ಬಿಳ್ಳೂರ,ಮುಂತಾದವರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ ಭವನದಲ್ಲಿ ಆಯೋಜಿಸಲಾದ “ಬಿಲ್ಡ್ ಟೆಕ್ – 2025” ಕಟ್ಟಡ ನಿರ್ಮಾಣ

Spread the love ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ