ಬೆಂಗಳೂರು. ಆಟೋ ಚಾಲಕನ ಮಗಳಾಗಿ ಹುಟ್ಟಿ ಆರ್ಕಿಟೆಕ್ಚರ್ ಎಂಜಿನಿಯರ್ ಆಗಿ ತನ್ನ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಾದ ಯುವತಿ ಮಸಣ ಸೇರಿದ್ದಾಳೆ. ಹಳಿ ತಪ್ಪಿದ ಯುವತಿಯ ನಡೆ ದುರಂತ ಅಂತ್ಯ ಕಂಡಿದ್ದು ದುರದೃಷ್ಟಕರ ಸಂಗತಿ. 5 ವರ್ಷದ ಪ್ರೀತಿಗೆ ಕೈಕೊಟ್ಟು ಎಂದು ಮಾಜಿ ಪ್ರಿಯಕರನ ಸ್ನೇಹಿತನ ಜೊತೆ ಹೋದ ಯುವತಿ ಶವವಾಗಿದ್ದಾಳೆ.
ಈ ಪ್ರೀತಿ ಅನ್ನೋದೆ ಹೀಗೆ… ಪ್ರೀತಿ ಪಡೆಯೋಕೆ ಏನು ಬೇಕಾದರೂ ಮಾಡಿಸುತ್ತದೆ. ಅದೇ ರೀತಿ ಪ್ರೀತಿ ಕಳೆದುಕೊಂಡಾಗ ಏನು ಬೇಕಾದರೂ ನಡೆಯುತ್ತದೆ. ಅದೇ ರೀತಿ ಕಳೆದುಕೊಂಡ ಪ್ರೀತಿಯಿಂದ ನೊಂದ ಯುವಕ ಪ್ರೇಯಸಿಯನ್ನು ಕೊಂದೇ ಬಿಟ್ಟಿದ್ದಾನೆ. ಹೌದು ಈ ದಾರುಣ ಘಟನೆ ನಡೆದಿರುವುದು ಬೆಂಗಳೂರಿನ ಚಿಕ್ಕ ಬಾಣವಾರದಲ್ಲಿ. ಕಳೆದ 40 ವರ್ಷದ ಹಿಂದೆ ದೂರದ ಚಾಮರಾಜನಗರ ಜಿಲ್ಲೆಯಿಂದ ಬದುಕು ಕಟ್ಟಿಕೊಳ್ಳುವ ಕುಮಾರ್ ದಂಪತಿಗಳು ಬೆಂಗಳೂರಿನ ಸಿಡೇದಹಳ್ಳಿ ನೆಲಸಿದ್ದರು.
ಈ ದಂಪತಿಗೆ ಜನಿಸಿದ ಮಗಳೆ ಮೋನಿಕಾ. ಆಟೋ ಓಡಿಸಕೊಂಡು ಜೀವನ ಮಾಡುತ್ತಿದ್ದ ಕುಮಾರ್ ತನ್ನ ಮಗಳನ್ನು ಆರ್ಕಿಟೆಕ್ಚರ್ ಎಂಜಿನಿಯರ್ ಮಾಡಿಸಿ, ತಾನು ಖರೀದಿಸಿದ್ದ ಸೈಟಿನಲ್ಲಿ ಮನೆ ಕಟ್ಟುವುದರೊಂದಿಗೆ ಮಗಳ ಉಜ್ವಲ ಭವಿಷ್ಯ ಕಟ್ಟಬೇಕು ಎಂದು ಕನಸು ಕಟ್ಟಿದ್ದರು.
ಇರುವ ಒಬ್ಬಳೆ ಮಗಳು ಆರಾಮಾಗಿ ಕೊಂಡು ಬರಲಿ ಅಂತ ಬಿಟ್ಟಿದ್ದೆ ಎಡಟ್ಟಾಯ್ತು, ಸುಂದರವಾಗಿದ ಮೋನಿಕ ತನ್ನ ಸೌಂದರ್ಯದಿಂದ ಹಣವಂತನಾಗಿದ್ದ ಚಿಕ್ಕಬಾಣವಾರ ಬಬಿತ್ ನನ್ನು ಕಳೆದ ಐದು ವರ್ಷಗಳಿಂದ ಪ್ರೀತಿ ಮಾಡಿತ್ತಿದ್ದ. ಇಬ್ಬರು ಪ್ರಣಯ ಪಕ್ಷಿಗಳಂತೆ ಔಟಿಂಗ್ ಡೇಟಿಂಗ್ ಮಾಲ್ ಸಿನಿಮಾ ಪಬ್ ಅಂತಾ ಸುತ್ತಾಡಿದ್ದೆ ಸುತ್ತಾಡಿದ್ದು. ಈಗೆ ಸುತ್ತಾಡುತ್ತ ಐದು ವರ್ಷ ಪ್ರೀತಿಯ ಅಮಲಿನಲ್ಲಿ ಯುವ ಪ್ರೇಮಿಗಳು ತೇಲಿದ್ದಾರೆ.
ತಂಗಾಳಿಯಾಗಿ ಸುಮಧುರವಾಗಿದ್ದ ಪ್ರೇಮದಲ್ಲಿ ಬಿರುಗಾಳಿಯಂತೆ ಬಂದು ಅಪ್ಪಳಿಸಿದ್ದು ಬಬಿತ್ನ ಸ್ನೇಹಿತ ಇಕ್ಕಬಾಣವಾರ ನಿವಾಸಿ ರಾಹುಲ್. ರಾಹುಲ್ ಹಾಗೂ ಬಬಿತ್ ಇಬ್ಬರು ಆತ್ಮೀಯ ಸ್ನೇಹಿತರೆ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಮೋನಿಕಾ ಹಾಗೂ ಬಬಿತ್ ಸ್ನೇಹಿತ ರಾಹುಲ್ ಗೆ ಸ್ನೇಹವಾಯಿತು. ಸ್ನೇಹ ಸ್ನೇಹವಾಗಿ ಇದ್ದಿದ್ದರೆ ಇಂದು ಮೋನಿಕಾ ಇಹಲೋಕ ತ್ಯಜಿಸುತ್ತಿರಲಿಲ್ಲ.
ಐದು ವರ್ಷದ ಪ್ರೀತಿಗೆ ಕೋಕ್ ಕೊಟ್ಟ ಮೋನಿಕಾ ಬಬಿತ್ ಸ್ನೇಹಿತ ರಾಹುಲ್ ಜೊತೆ ಒಡನಾಟ ಶುರುಮಾಡಿಕೊಂಡಳು. ಬಬಿತ್ ಪ್ರೀತಿಗೆ ಕೈಕೊಟ್ಟು ರಾಹುಲ್ ಪ್ರೀತಿಗೆ ಜೈ ಅಂದಿದ್ದಾಳೆ. ಕಳೆದ ಆರು ತಿಂಗಳಿನಿಂದ ರಾಹುಲ್ ಜೊತೆ ಮೋನಿಕ ಓಡಾಡಿಕೊಂಡಿದ್ದಳು, ಮೋನಿಕ ಜೂನ್ 7 ಭಾನುವಾರ ಸಂಜೆ ರಾಹುಲ್ ಮನೆಗೆ ಬರ್ತಡೆ ಪಾರ್ಟಿಗೆಂದು ತೆರಳಿದ್ದಾಗ ಅಲ್ಲಿಗೆ ಬಂದ ಬಬಿತ್ ಮೋನಿಕಾಳ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲಿ ಬಬಿತ್ ಹಾಗೂ ರಾಹುಲ್ ಗೆ ಸಹ ಜಗಳವಾಗಿದೆ. ಅಷ್ಟ ಸಾಲದು ಅಂತ ಬಬಿತ್ ಮನೆಗೆ ಮೋನಿಕಾಳನ್ನು ಕರೆತಂದು ಅಲ್ಲಿಯು ಸಹ ಮನಸೋ ಇಚ್ಚೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹೆಲ್ಮೆಟ್ನಿಂದ ಹೊಡೆದು ತಲೆಯನ್ನು ಗೋಡೆಗೆ ಗುದ್ದಿದ್ದಾನೆ. ಸ್ಥಳದಲ್ಲೆ ಮೋನಿಕ ನಿತ್ರಾಣಳಾಗಿ ಬಿದ್ದಿದ್ದು, ಬಬಿತ್ ಮೋನಿಕಾ ತಂದೆಗೆ ಕರೆ ಮಾಡಿ ನಿಮ್ಮ ಮಗಳಿಗೆ ಅಪಘಾತವಾಗಿದೆ, ಮನೆಯ ಬಳಿ ಇದ್ದಾಳೆ ಬನ್ನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದಿದ್ದಾನೆ. ತಕ್ಷಣ ಸ್ಥಳಕ್ಕೆ ಮೋನಿಕಾ ಪೋಷಕರು ಹೋಗಿ ಸಪ್ತಗಿರಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಕಾಲೇಜಿಗೆ ಹೋಗಿ ಮನೆಗೆ ಬರುತ್ತಿದ್ದ ಮಗಳ ಬಗ್ಗೆ ನಡವಳಿಕೆ ಬಗ್ಗೆ ಪೋಷಕರಿಗೆ ಸ್ವಲ್ಪವೂ ಅನುಮಾನ ಇರಲಿಲ್ಲ. ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಈ ಎಲ್ಲಾ ಪ್ರಕರಣಗಳು ಬೆಳಕಿಗೆ ಬಂದಿದೆ. ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೋನಿಕಾಳ ಮಾಜಿ ಪ್ರಿಯಕರ ಬಬಿತ್ ಹಾಗೂ ರಾಹುಲ್ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಸತತ ಐದು ದಿನಗಳ ಸಾವು ಬದುಕಿನ ನಡುವಿನ ನಿರಂತರ ಹೋರಾಟದಲ್ಲಿ ಮೋನಿಕಾ ಇಂದು ಕೊನೆಯುಸಿರು ಎಳೆದಿದ್ದಾಳೆ.
ಒಟ್ಟಾರೆ ಎಂಜಿನಿಯರಿಂಗ್ ಮಾಡಿ ಬದುಕು ಕಟ್ಟಿಕೊಳ್ಳಬೇಕಾದ ಚಂದದ ಯುವತಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದು, ಇತ್ತ ಆರೋಪಿಗಳಾದ ಬಬಿತ್ ಹಾಗೂ ರಾಹುಲ್ ನನ್ನು ಸೋಲದೇವನಹಳ್ಳಿ ಪೊಲೀಸರು 7 ದಿನಗಳ ಕಾಲ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.