ಗೋಕಾಕ : ಆರೋಗ್ಯ ರಕ್ಷಣೆಗೆ ಜನತೆ ಸ್ವಚ್ಚತೆಗೆ ಹೆಚ್ಚಿನ ಮಹತ್ವ ನೀಡಿ ನಗರಸಭೆಯವರ ಸ್ವಚ್ಚತಾ ಕಾರ್ಯಕ್ರಮಕ್ಕೆ ಸಹಕಾರ ನೀಡುವಂತೆ ನಗರಸಭೆಯ ಪರಿಸರ ಸಹಾಯಕ ಕಾರ್ಯಪಾಲಕ ಅಭಿಯಂತ ಎಮ್.ಎಚ್.ಗಜಾಕೋಶ ಹೇಳಿದರು.
ಶುಕ್ರವಾರದಂದು ಇಲ್ಲಿಯ ವಾರ್ಡ ನಂ. 29 ರ ಸೋಮವಾರ ಪೇಟೆಯಯಲ್ಲಿರುವ ಶ್ರೀ ಅಂಭಾಭವಾನಿ ದೇವಸ್ಥಾನದಲ್ಲಿ ನಗರಸಭೆ ಹಾಗೂ ನಮ್ಮಭಿಮಾನ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸ್ವಚ್ಚ ಭಾರತ ಮಿಷನ್ ಯೋಜನೆಯಡಿ ಹಮ್ಮಿಕೊಂಡ “ಜನ ಜಾಗೃತಿ ಅಭಿಯಾನ” ಪಾಲ್ಗೊಂಡು ಮಾತನಾಡುತ್ತಿದ್ದರು.
ನಗರಸಭೆಯವರು ನಗರದ ಜನತೆಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಸ್ವಚ್ಚತೆ ಹಾಗೂ ನಗರ ಸೌಂದರ್ಯೀಕರಣಕ್ಕೂ ಹೆಚ್ಚಿನ ಮಹತ್ವ ನೀಡುತ್ತಿದ್ದು, ಈ ಕಾರ್ಯಕ್ಕೆ ಜನತೆಯು ಕೈಜೋಡಿಸಬೇಕು. ಘನತ್ಯಾಜ್ಯ ವಸ್ತುಗಳನ್ನು ಮೂಲದಲ್ಲಿಯೇ ಹಸಿ ಕಸ, ಒಣಕಸ ಹಾಗೂ ಹಾನಿಕಾರಕ ತ್ಯಾಜ್ಯ ವಸ್ತುಗಳನ್ನು ಪ್ರತ್ಯೇಕಿಸಿ ನಗರಸಭೆಯ ತ್ಯಾಜ್ಯ ಸಂಗ್ರಹಣ ವಾಹನಕ್ಕೆ ನೀಡಬೇಕು. ರಸ್ತೆ ಬದಿಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯಗಳನ್ನು ಬೀಸಾಡದಿರಿ. ಪ್ಲಾಸ್ಟಿಕ್ ಬಳಕೆ ಮಾಡದಿರಿ. ವಾರದಲ್ಲಿ 2 ಗಂಟೆ ಸ್ವಚ್ಚತಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ನಗರದ ಸ್ವಚ್ಚತೆಗೆ ಸಹಕರಿಸುವಂತೆ ಕೋರಿದರು.
ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ಬಸವರಾಜ ದೇಶನೂರ, ಶಾಸಕ ರಮೇಶ ಜಾರಕಿಹೊಳಿ ಅವರು, ನಗರದ ಸರ್ವಾಂಗೀಣ ಅಭಿವೃದ್ಧಿಗೆ ಹಲವಾರು ಯೋಜನೆಗಳ ಅನುಷ್ಠಾನದೊಂದಿಗೆ ಶ್ರಮಿಸುತ್ತಿದ್ದಾರೆ. ನಗರವನ್ನು ರಾಜ್ಯದಲ್ಲಿಯೇ ಮಾದರಿ ಮಾಡುವ ಅವರ ಕಾರ್ಯಕ್ಕೆ ನಾವೆಲ್ಲರೂ ಸಂಘಟಿತರಾಗಿ ಸಹಕಾರ ನೀಡೋಣವೆಂದು ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನೀರಿಕ್ಷಕ ಜೆ.ಸಿ.ತಾಂಬೋಳಿ, ವಾರ್ಡ ಮುಖಂಡರಾದ ಸುರೇಶ ಜೋರಾಪೂರ, ಅಣ್ಣಪ್ಪಾ ಕಲ್ಯಾಣಶೆಟ್ಟಿ, ಧರೀಶ ಕಲಘಾನ, ಮಲ್ಲಿಕಾರ್ಜುನ ಹೊಸಪೇಠ, ಬಸವರಾಜ ಶೇಗುಣಶಿ, ಪ್ರಕಾಶ ಆಲತಗಿ, ಮಹಾದೇವ ಹಾದಿಮನಿ, ತುಕಾರಾಮ ರಾಮಲಿಂಗ, ಸುನೀಲ ದೇಶನೂರ, ರಾಜು ಹಿರೇಮಠ, ಧನಂಜಯ ಪೂಜೇರಿ, ಸೋಮನಾಥ ಮಗದುಮ್, ರಾಜು ಗೋಸಾಂವಿ, ವಿನಯ ಕುರಬೇಟ, ಗಂಗಸಾ ರಾಮಲಿಂಗ, ಶಿವಲೀಲಾ ಆಲತಗಿ, ಪುಷ್ಪಾ ಧನಶೆಟ್ಟಿ, ದುಂಡವ್ವಾ ಖಾನಪ್ಪನವರ, ಶಾರದಾ ಕೊಳಕಿ, ಮಹಾದೇವಿ ಶೆಟ್ಟಿ, ಧನಶೆಟ್ಟಿ, ಜಯಶ್ರೀ ಭೂತಿ, ಭಾರತಿ ಭೂತಿ, ಸುವರ್ಣಾ ಅಳಗುಂಡಿ, ಪುಷ್ಪಾ ರಾಮಲಿಂಗ, ಗಂಗವ್ವಾ ಮುರಗೋಡ, ಸಾವಿತ್ರಿ ಗೋಸಾಮವಿ, ಶಾರದಾ ಸಾತಪುತೆ, ದ್ರಾಕ್ಷಾಯಿಣಿ ಬಡದಾಳಿ, ಅಂತವ್ವಾ ಹಿಡಕಲ್ ಸೇರಿದಂತೆ ಅನೇಕರು ಇದ್ದರು.
Check Also
ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ
Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …