Breaking News

ಪತಿಯ ಕಿಡ್ನ್ಯಾಪ್​ಗೆ ಮೊದಲ ಪತ್ನಿಯದ್ದೇ ಸುಪಾರಿ!

Spread the love

ಬೆಂಗಳೂರು: 2ನೇ ಮದುವೆಯಾದ ಪತಿಯ ಅಪಹರಣಕ್ಕೆ ಮೊದಲ ಪತ್ನಿಯೇ ಸುಪಾರಿ ಕೊಟ್ಟ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಗುಂಟೆಯ ವಿಶ್ವೇಶ್ವರಯ್ಯ ಲೇಔಟ್ ನಿವಾಸಿ ಶಾಹೀದ್ ಶೇಖ್ ಅಪಹರಣಕ್ಕೆ ಒಳಗಾಗಿದ್ದ ಗುತ್ತಿಗೆದಾರ. ಹೆಸರಘಟ್ಟದ ಅಭಿಷೇಕ್ (26), ನಾಗಸಂದ್ರದ ಭರತ್ (25), ಜೆ.ಪಿ.ನಗರದ ಪ್ರಕಾಶ (22) ಹಾಗೂ ಬ್ಯಾಡರಹಳ್ಳಿಯ ಚೆಲುವಮೂರ್ತಿ (22) ಬಂಧಿತರು. ಸುಪಾರಿ ಕೊಟ್ಟ ಪ್ರಮುಖ ಆರೋಪಿ ಮೊದಲ ಪತ್ನಿ ರೋಮಾ ಶೇಖ್ ಸೇರಿ ನಾಲ್ವರು ತಲೆಮರೆಸಿಕೊಂಡಿದ್ದಾರೆ ಎಂದು ಉತ್ತರ ವಿಭಾಗದ ಡಿಸಿಪಿ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಸುಪಾರಿ ಕೊಟ್ಟಿದ್ದು ಏಕೆ?: ಶಾಹೀದ್ ಶೇಖ್ ಕಟ್ಟಡ ನಿರ್ಮಾಣ ಗುತ್ತಿಗೆದಾರ. ಮೊದಲ ಪತ್ನಿ ರೋಮಾ ಶೇಖ್ ಜತೆ ಮಾರತ್ತಹಳ್ಳಿಯಲ್ಲಿ ವಾಸವಿದ್ದ. ಹಳೇ ಪರಿಚಯ ಹೊಂದಿದ್ದ ರತ್ನಾ ಕಾತುಮ್ ಎಂಬಾಕೆಯನ್ನು ಎರಡನೇ ಮದುವೆಯಾಗಿ ಬಾಗಲಗುಂಟೆಯ ವಿಶ್ವೇಶ್ವರಯ್ಯ ಲೇಔಟ್​ನಲ್ಲಿ ಮನೆ ಮಾಡಿ ಇರಿಸಿದ್ದ.

ಮೊದಲ ಪತ್ನಿಯ ಒಡವೆ, ಹಣ ಹಾಗೂ ಇನ್ನಿತರ ವಸ್ತುಗಳನ್ನು 2ನೇ ಪತ್ನಿ ರತ್ನಾ ಕಾತುಮ್ ಕೊಡುತ್ತಿದ್ದ. ಇದೇ ವಿಚಾರಕ್ಕೆ ಪತಿ ಜತೆ ಮೊದಲ ಪತ್ನಿ ಜಗಳವಾಡುತ್ತಿದ್ದಳು. ಹೇಗಾದರೂ ಮಾಡಿ ರತ್ನಾಳಿಂದ ಪತಿಯನ್ನು ಬೇರ್ಪಡಿಸಬೇಕು ಎಂದು ನಿರ್ಧರಿಸಿದ್ದಳು. ಪತಿಯನ್ನು ಅಪಹರಿಸಿ ಆ ಆರೋಪವನ್ನು 2ನೇ ಪತ್ನಿ ಮೇಲೆ ಹೊರಿಸಲು ರೋಮಾ ಸಂಚು ರೂಪಿಸಿದ್ದಳು. ಅದಕ್ಕಾಗಿ ಪರಿಚಯಸ್ಥ ಸಲ್ಮಾನ್​ಗೆ ಪತಿಯ ಅಪಹರಣ ಮಾಡಲು 2 ಲಕ್ಷ ರೂ. ಸುಪಾರಿ ಕೊಟ್ಟಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬೆಂಗ್ಳೂರು ಟು ಹಾಸನ!: ಶಾಹಿದ್ ತನ್ನ ಸ್ನೇಹಿತನ ಜತೆ ಜೂ.7ರಂದು ಎಂಇಐ ಬಡಾವಣೆಯ ಆರ್ಚ್ ಬಳಿ ತರಕಾರಿ ತರಲು ಹೋಗಿದ್ದಾಗ ಕಾರಿನಲ್ಲಿ ಬಂದ ಆರೋಪಿ ಗಳು ಆತನನ್ನು ಅಪಹರಿಸಿದ್ದರು. ರೋಮಾಳ ಸೂಚನೆಯಂತೆ 2ನೇ ಪತ್ನಿ ರತ್ನಾಳಿಗೆ ಕರೆ ಮಾಡಿ 2 ಲಕ್ಷ ರೂ. ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ರತ್ನಾ ಕೊಟ್ಟ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಶಾಹಿದ್ ಫೋನ್ ಲೊಕೇಷನ್ ಜಾಡು ಹಿಡಿದು ತನಿಖೆ ನಡೆಸಿದಾಗ ಆರೋಪಿಗಳು ಹಾಸನದ ಸಾರಾಪುರದಲ್ಲಿರುವ ಸುಳಿವು ಸಿಕ್ಕಿತ್ತು. ಅದನ್ನು ಆಧರಿಸಿ ಅಲ್ಲಿಗೆ ತೆರಳಿ ಅಕ್ರಮ ಬಂಧನದಲಿಟ್ಟಿದ್ದ ಶಾಹೀದ್​ನನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ