ಚೆನ್ನೈ: ತಮಗೆ ಚೆನ್ನೈ ಪಾಲಿಕೆ ನೀಡಿದ್ದ ತೆರಿಗೆ ನೋಟಿಸ್ ಅನ್ನು ಪ್ರಶ್ನಿಸಿ ಚಿತ್ರನಟ ರಜನೀಕಾಂತ್ ವಿರುದ್ಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಕಲ್ಯಾಣ ಮಂಟಪಕ್ಕೆ 6.50 ಲಕ್ಷ ಆಸ್ತಿ ತೆರಿಗೆ ವಿಧಿಸಿದ್ದ ಗ್ರೇಟರ್ ಚೆನ್ನೈ ಕಾರ್ಪೋರೇಷನ್ ವಿರುದ್ಧ ರಜನೀಕಾಂತ್ ಕೋರ್ಟ್ ಮೆಟ್ಟಿಲೇರಿದ್ದರು. ತಮಿಳುನಾಡಿನ ಕೊಡಂಬಕ್ಕಂನಲ್ಲಿ ರಜನಿಕಾಂತ್ ಅವರ ಕಲ್ಯಾಣ ಮಂಟಪವಿದ್ದು, ಅದರ ತೆರಿಗೆ ಹಣವನ್ನು ಕಟ್ಟುವಂತೆ ಜಾರಿ ಮಾಡಲಾಗಿದ್ದ ನೋಟಿಸನ್ನು ಅವರು ಪ್ರಶ್ನಿಸಿದ್ದರು.
ಕಳೆದ ಏಪ್ರಿಲ್ನಿಂದ ಸೆಪ್ಟಂಬರ್ವರೆಗೆ ಅರ್ಧ ವರ್ಷದ ತೆರಿಗೆ ನೀಡುವಂತೆ ನೋಟಿಸ್ನಲ್ಲಿ ತಿಳಿಸಲಾಗಿತ್ತು. ಆದರೆ ಲಾಕ್ಡೌನ್ ಹಾಗೂ ಕರೊನಾ ವೈರಸ್ ಕಾರಣ ನೀಡಿದ್ದ ‘ಸೂಪರ್ಸ್ಟಾರ್’, ಈ ಅವಧಿಯಲ್ಲಿ ಯಾವುದೇ ಆದಾಯ ಇಲ್ಲ, ಆದ್ದರಿಂದ ತೆರಿಗೆ ಕಟ್ಟುವುದು ಕಷ್ಟ ಎಂದು ಕೋರ್ಟ್ಗೆ ತಿಳಿಸಿದ್ದರು.