ನವದೆಹಲಿ: ಈ ಬಾರಿಯ ಐಪಿಎಲ್-13ರಿಂದ ಚೀನಾ ಪ್ರಾಯೋಜಕತ್ವಕ್ಕೆ ಗೇಟ್ ಪಾಸ್ ನೀಡಲು ಬಿಸಿಸಿಐ ನಿರ್ಧರಿಸಿದ್ದು, ಈ ಕುರಿತು ಆಗಸ್ಟ್ 6ರಂದು ಅಧಿಕೃತ ಪ್ರಕಟನೆ ಹೊರಡಿಸುವ ಸಾಧ್ಯತೆಗಳಿವೆ.
ಐಪಿಎಲ್ ಲೀಗ್ 19ನೇ ಆವೃತ್ತಿಯ ಪಂದ್ಯಗಳು ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿವೆ. ಚೀನಾದ ವಿವೋ ಸ್ಮಾರ್ಟ್ ಕಂಪನಿ ಐಪಿಎಲ್-13ರ ಪ್ರಾಯೋಜಕತ್ವ ಹೊಂದಿರೋದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆ ಎಚ್ಚೆತ್ತಿರುವ ಪ್ರಾಯೋಜಕತ್ವದ ಚೀನಾದ ವಿವೋ ಕಂಪನಿಯನ್ನು ಕೈ ಬಿಡಲು ತೀರ್ಮಾನಿಸಿದೆ ಎಂದು ವರದಿಯಾಗಿದೆ.
ಒಂದು ವೇಳೆ ಐಪಿಎಲ್ ಶೀರ್ಷಿಕೆ ಜೊತೆಗಿರುವ ವಿವೋ ಹೆಸರನ್ನು ಕೈ ಬಿಟ್ಟರೆ ಬಿಸಿಸಿಐಗೆ ಸುಮಾರು 400 ರಿಂದ 500 ಕೋಟಿ ರೂ. ನಷ್ಟವಾಗಲಿದೆ ಎಂದು ಅಂದಾಜಿಸಲಾಗಿದೆ.
ಟೂರ್ನಿ ಸೆ.19 ರಿಂದ ನ.8ರ ವರೆಗೂ ನಡೆಯಲಿದೆ. 60 ಪಂದ್ಯ, 51 ದಿನ ಯಾವುದೇ ಪಂದ್ಯಗಳ ಕಡಿತವಿಲ್ಲದೇ ಸಂಪೂರ್ಣ ಟೂರ್ನಿ ನಡೆಯಲಿದೆ. ಐಸಿಸಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ಅವಧಿಯಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ಟೂರ್ನಿಯನ್ನು ಮುಂದೂಡಿದ ವೇಳೆಯೇ ಐಪಿಎಲ್ ಟೂರ್ನಿ ನಡೆಯುವುದು ಖಚಿತವಾಗಿತ್ತು. ಭಾರತದಲ್ಲಿ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಟೂರ್ನಿ ಯುಎಇನಲ್ಲಿ ನಡೆಯಲಿದೆ. ಉಳಿದಂತೆ ಟೂರ್ನಿಯಲ್ಲಿ 5 ಡಬಲ್ ಶೆಡ್ಯೂಲ್ ಪಂದ್ಯಗಳು ಮಾತ್ರ ನಡೆಯುವ ಅವಕಾಶವಿದೆ.