ಮೈಸೂರು: ಕೊರೊನಾ ಸೋಂಕಿತರಿಗೆ ಬೆಡ್ ಹಂಚಿಕೆ ವಿಚಾರದಲ್ಲಿ ಮೈಸೂರು ಡಿಹೆಚ್ಓ ಅಸಹಾಯಕರಾಗಿ ಮಾತನಾಡಿರುವ ಆಡಿಯೋ ವೈರಲ್ ಆಗಿದೆ.
ಕೊರೊನಾ ಸೋಂಕಿತರ ಸಂಬಂಧಿಕರೊಡನೆ ಮಾತನಾಡಿರುವ ಮೈಸೂರು ಡಿಹೆಚ್ಓ, ನನ್ನ ಕೈ ಸೋತೋಗಿದೆ. ನನ್ನ ಹೆಂಡತಿಗೆ ವೆಂಟಿಲೇಟರ್ ಕೊಡಿಸಲು ನನಗೆ ಯೋಗ್ಯತೆ ಇಲ್ಲ. ನೀವು ಯಾರಿಗೆ ಬೇಕಾದ್ರು ಕಂಪ್ಲೇಂಟ್ ಕೊಡಿ. ಇವತ್ತೇ ಮನೆಗೆ ಕಳುಹಿಸಿದರು ನಾನು ಹೋಗಲು ರೆಡಿ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ ನನ್ನಿಂದ ವೆಂಟಿಲೇಟರ್ ಅರೆಂಜ್ ಮಾಡಲು ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ವತಃ ನಾನು ಇಎಸ್‌ಐ ಆಸ್ಪತ್ರೆಯಲ್ಲಿ ಬೆಡ್ ಅರೆಂಜ್ ಮಾಡೋಕೆ ಬೇಕಾದಷ್ಟು ಕಷ್ಟಪಟ್ಟಿದ್ದೇನೆ. ಆ ಕಷ್ಟ ನಿಮಗೆ ಗೊತ್ತಿಲ್ಲ. ನಮ್ಮ ಕೈನಲ್ಲಿ ಏನು ಇಲ್ಲ. ವೆಂಟಿಲೇಟರ್ ಎಲ್ಲಿದೆ ಎಂದು ನನಗೇನು ಗೊತ್ತು..? ವಾರ್ ರೂಂ ಅವರಿಗೆ ಗೊತ್ತಿರುತ್ತೆ ಎಂದು ಬಹಳ ಅಸಹಾಯಕ ಧ್ವನಿಯಲ್ಲಿ ತಮ್ಮ ನೋವು ಹೇಳಿಕೊಂಡಿದ್ದಾರೆ.
ಕೊರೊನಾ ನಿಯಂತ್ರಣದಲ್ಲಿ ಹರಗಲಿರುಳು ದುಡಿಯುತ್ತಿರುವ ಅಧಿಕಾರಿಗಳು ಇಷ್ಟೊಂದು ಅಸಹಾಯಕರಾಗಿ ಮಾತನಾಡಿದ್ದಾರೆ ಎಂದರೆ, ಜನ ಸಾಮನ್ಯರ ಪಾಡೇನು ಎನ್ನುವುದು ನಮ್ಮ ಮುಂದಿರುವ ಪ್ರಶ್ನೆ.
Laxmi News 24×7