Breaking News

ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಏಕಕಾಲಕ್ಕೆ 11 ಜನ ಶವಸಂಸ್ಕಾರ

Spread the love

ಬೆಳಗಾವಿ-ಮಹಾಮಾರಿ ಕೊರೊನಾ ಅಟ್ಟಹಾಸ ಬೆಳಗಾವಿಯಲ್ಲಿ ಮುಂದುರೆದಿದ್ದು ಕೋವೀಡ್ ಮರಣ ಮೃದಂಗ ಮುಂದುರೆದಿದೆ,ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಏಕಕಾಲಕ್ಕೆ 11 ಜನ ಶವಸಂಸ್ಕಾರ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಈವರೆಗೂ 11 ಜನರು ಮೃತಪಟ್ಟಿದ್ದು, ಈ ಹನ್ನೊಂದು ಶವಗಳನ್ನುಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ಮಾಡಲಾಗಿದೆ.ಸದಾಶಿವನಗರ ಸ್ಮಶಾನದಲ್ಲಿ ಇಂದು ಒಂದೇ ದಿನ 11 ಜನರ ಅಂತ್ಯಕ್ರಿಯೆ ನಡೆದಿದೆ.

ಸದಾಶಿವ ನಗರ ಸ್ಮಶಾನದ ಬಳಿ ನಿಯೋಜಿತ ಮಹಾನಗರ ಪಾಲಿಕೆ ಸಿಬ್ಬಂದಿಯಿಂದ ಬೆಚ್ಚಿ ಬೀಳಿಸುವ ಮಾಹಿತಿ ಹೊರಬಿದ್ದಿದೆ.ಬೆಳಗಾವಿಯ ಸದಾಶಿವನಗರ ಸ್ಮಶಾನದಲ್ಲಿ ಸದ್ಯ ಏಕಕಾಲಕ್ಕೆ 7 ಮೃತದೇಹಗಳ ಅಂತ್ಯಕ್ರಿಯೆ ನಡೆದಿದ್ದು ಈ ಹನ್ನೊಂದು ಜನರು ಕೋವೀಡ್ ಗೆ ಬಲಿಯಾದ್ರಾ ಎನ್ನುವ ಪ್ರಶ್ನೆಗೆ ಇನ್ನುವರೆಗೆ ಉತ್ತರ ಸಿಕ್ಕಿಲ್ಲ ಆದ್ರೆ 11 ಜನರ ಅಂತ್ಯಕ್ರಿಯೆ ಮಾತ್ರ ಕೋವೀಡ್ ನಿಯಮಾವಳಿ ಪ್ರಕಾರ ನಡೆದಿದ್ದು ಸತ್ಯ.

ಓರ್ವ ಕೋವಿಡ್‌ನಿಂದ ಮೃತಪಟ್ಟರೇ ಇತರ ರೋಗಿಗಳು ಕೋವಿಡ್‌ನಿಂದ ಮೃತಪಟ್ಟಿದ್ದಾರೆ,ಇಂದು ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಸದೇ ಓರ್ವ ಸೋಂಕಿತ ಮಾತ್ರ ಸಾವನ್ನಪ್ಪಿದ್ದಾಗಿ ಅಧಿಕಾರಿಗಳು ಹೇಳುತ್ತಿದ್ದು ಉಳಿದವರುನಗರದ ಖಾಸಗಿ ಆಸ್ಪತ್ರೆಗಳಲ್ಲಿ ವಿವಿಧ ರೋಗಗಳಿಗೆ ತುತ್ತಾಗಿ ಮೃತಪಟ್ಟಿರಬಹುದು ಎನ್ನುವ ಮಾಹಿತಿ ಇದೆ ಆದ್ರೆ ಈ ಕುರಿತು ಅಧಿಕಾರಿಗಳು ಇನ್ನುವರೆಗೆ ದೃಡಪಡಿಸಿಲ್ಲ.

ಸದ್ಯ ಏಳು ಶವಗಳಿಗೆ ಏಕಕಾಲಕ್ಕೆ ಅಂತ್ಯಕ್ರಿಯೆ ನಡೆಸುತ್ತಿರುವ ಮಹಾನಗರ ಪಾಲಿಕೆ ಸಿಬ್ಬಂದಿ ಉಳಿದ ಶವಗಳ ಅಂತ್ಯಕ್ರಿಯೆ ನಡೆಸಿದ್ದಾರೆ.ಕೋವಿಡ್ ಟೆಸ್ಟ್ ಮಾಡಿಸದೇ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುತ್ತಿದ್ದಾರೆ ಹಲವರು ಇದರಲ್ಲಿ ಮೃತಪಟ್ಟಿದ್ದು, ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ, ಎನ್ನುತ್ತಿವೆ ಆರೋಗ್ಯ ಇಲಾಖೆ ಮೂಲಗಳು


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ