ಬೆಳಗಾವಿ ಜಿಲ್ಲೆ
ಅಥಣಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹಣ ನೀಡಿದರೆ ಮಾತ್ರ ಚಿಕಿತ್ಸೆ?ಈಗಾಗಲೇ ಮಾಧ್ಯಮದಲ್ಲಿ ವರದಿ ಮಾಡಿದರು ಎಚ್ಚೆತ್ತುಕೊಂಡಿಲ್ಲ?ವೈದ್ಯರು ಸರಿಯಾಗಿ ಟೈಮಿನಲ್ಲಿ ಬರುವುದಿಲ್ಲ ಎಂದು ಕಿವಿ ಮಾತು ಕೂಡ ಕೇಳಿ ಬರುತ್ತದೆ?ವೈದ್ಯಾಧಿಕಾರಿಗಳು ಸರಿಯಾಗಿ ಮಾಹಿತಿ ನೀಡುವುದಿಲ್ಲವೆಂದು ಕೂಡ ಕೇಳಿಬರುತ್ತದೆ?
ಬೆಳಗಾವಿ ಜಿಲ್ಲೆ ಅಥಣಿ ತಾಲೂಕು ಸಾರ್ವಜನಿಕರ ಆಸ್ಪತ್ರೆಯಲ್ಲಿ ದೇವರೆಂದು ಸಾರ್ವಜನಿಕರು ವೈದ್ಯರ ಬಳಿ ಬರುತ್ತಾರೆ ಆದರೆ ಅದೇ ವೈದ್ಯರು ಈ ರೀತಿ ಮಾಡಿದರೆ ಹೇಗೆ ರೋಗಿಗಳು ಎಲ್ಲಿಗೆ ಹೋಗಬೇಕು?
ಕೊರೊನಾ ಹಾವಳಿಯ ಸಂಕಷ್ಟ ಕಾಲದಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಿರುವಾಗ ಹೆರಿಗೆ ಚಿಕಿತ್ಸೆಗಾಗಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿದೆ. ತಾಲೂಕಾಸ್ಪತ್ರೆಯಲ್ಲಿ ಹಣ ನೀಡದಿದ್ದರೆ ರೋಗಿಗಳನ್ನು ಮಾತನಾಡಿಸುವುದೇ ಇಲ್ಲ. ಇನ್ನು ಸಮರ್ಪಕ ಚಿಕಿತ್ಸೆ ಕನಸಿನ ಮಾತಾಗಿದೆ. ಒಳಗೆ ಹೋದರೆ ಸಾಕು, ಖಾಸಗಿ ಆಸ್ಪತ್ರೆಗಳಂತೆ ಇಲ್ಲಿಯೂ ಪ್ರತಿಯೊಂದು ಚಿಕಿತ್ಸೆಗೂ ಇಂತಿಷ್ಟು ಹಣ ನೀಡಬೇಕು ಎಂದು ದರ ನಿಗದಿ ಮಾಡಲಾಗಿದೆ.ಅಥಣಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹಣ ನೀಡಿದರೆ ಮಾತ್ರ ಚಿಕಿತ್ಸೆ?ಸಿಜೇರಿಯನ್ ಹೆರಿಗೆ ಮಾಡಿದರೆ ಸುಮಾರು 6 – 7 ಸಾವಿರ ರೂಪಾಯಿ ಕೊಡಬೇಕೆಂಬ ಪರಿಸ್ಥಿತಿ ಇದೆ. ಸಾಮಾನ್ಯ ಹೆರಿಗೆಗೂ ಕೂಡ ಕನಿಷ್ಠ 3 ಸಾವಿರ ಹಣ ನೀಡಬೇಕು.? ತಾಲೂಕು ವೈದ್ಯಾಧಿಕಾರಿ ಮಾಧ್ಯಮದಲ್ಲಿ ವರದಿ ಮಾಡಿದರು ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗುತ್ತಿಲ್ಲ?
ಎಂದು ಸರ್ಕಾರಿ ಆಸ್ಪತ್ರೆಯಲ್ಲಿ ಯಾರು ಹಣ ಪಡೆದಿದ್ದಾರೆ?
ಅಥಣಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಸಮಯದಲ್ಲಿ ವೈದ್ಯರು ಲಂಚ ಪಡೆದುಕೊಳ್ಳುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ.?
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ನಾಯಕ್ ಹಾಗೂ ಎಂಎಂಪಿ ಸದಾ ಜನರ ಸೇವಾ ಸಂಸ್ಥೆ ಅದು ಮುಖಾಂತರ ಮನವಿ ಮಾಡಿಕೊಳ್ಳುತ್ತೇವೆ ಮಾನ್ಯ ಆರೋಗ್ಯ ಸಚಿವರಾದ ಹಾಗೂ ಶ್ರೀರಾಮುಲು ಸಚಿವರಾದ ವೈದ್ಯಾಧಿಕಾರಿ ಶ್ರೀ ಡಾ ಸುಧಾಕರ್ ಶ್ರೀಮಾನ್ಯ ಮಹೇಶ್ ಕುಮಟಳ್ಳಿ ಶ್ರೀ ಮಾನ್ಯ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಾರ್ವಜನಿಕರ ಆಸ್ಪತ್ರೆಯನ್ನು ಸರಿಪಡಿಸಬೇಕು ಎಲ್ಲಾ ಸೌಲಭ್ಯ ಎಲ್ಲ ರೀತಿ ಮಾಹಿತಿ ಮತ್ತು ಸರಿಯಾಗಿ ವೈದ್ಯಾಧಿಕಾರಿ ಬರುವಂತೆ ನೀವು ಅವರ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದಾರೆ
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ತಾಲೂಕು ಆಡಳಿತ ಜಿಲ್ಲಾಡಳಿತ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಅನ್ನೋದನ್ನ ಕಾದು ನೋಡಬೇಕಾಗುತ್ತದೆ