ಧಾರವಾಡ: ನಗರದ ಹೊರವಲಯದ ಇಟ್ಟಿಗಟ್ಟಿ ಬಳಿ ಜ.15 ರ ಬೆಳ್ಳಂಬೆಳಗ್ಗೆ ಟೆಂಪೋ ಟ್ರಾವೆಲರ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರು ಇಂದು ಅಪಘಾತ ನಡೆದ ಸ್ಥಳಕ್ಕೆ ಬಂದು ಶ್ರದ್ದಾಂಜಲಿ ಸಲ್ಲಿಸಿದರು.
ಘಟನೆ ನಡೆದ ಸ್ಥಳದಲ್ಲಿ ಮೃತರ ಪೋಟೋಗಳನ್ನಿಟ್ಟು ಹೂಮಾಲೆ ಸಮರ್ಪಿಸಿ ಆತ್ಮಕ್ಕೆ ಶಾಂತಿ ಕೋರಿದರು.
ಮೃತರೆಲ್ಲರೂ ದಾವಣಗೆರೆ ಮೂಲದವರು. ದಾವಣಗೆರೆಯ ಸೇಂಟ್ ಪಾಲ್ಸ್ ಕಾನ್ವಂಟ್ ಶಾಲೆಯ ಹಳೇ ವಿದ್ಯಾರ್ಥಿಗಳಾದ ಇವರು ಹಲವು ವರ್ಷಗಳ ನಂತರ ಭೇಟಿಯಾಗಿದ್ದರು. ಜ.15 ರಂದು ಗೋವಾಕ್ಕೆ ಪ್ರವಾಸ ಹೊರಟಿದ್ದರು. ಟೆಂಪೋ ಟ್ರಾವೆಲರ್‌ನಲ್ಲಿ ಮುಂಜಾನೆ 2 ಗಂಟೆಗೆ ದಾವಣಗೆರೆಯಿಂದ ಹೊರಟಿದ್ದರು.
ಧಾರವಾಡದ ಇಟ್ಟಿಗಟ್ಟಿ ಬೈಪಾಸ್ ಸಮೀಪ ಬೆಳಗಗೆ ಯಮರೂಪಿಯಾಗಿ ಬಂದ ಮರಳು ಸಾಗಣೆ ಟಿಪ್ಪರ್ ಲಾರಿಯು ಟೆಂಪೋ ಟ್ರಾವೆಲ್ಲರ್ಗೆ ಢಿಕ್ಕಿ ಹೊಡೆದಿತ್ತು.
ಅಪಘಾತದ ನಂತರ ಕಾಂಗ್ರಸ್ ಪಕ್ಷ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಬೈಪಾಸ್ ಅಗಲೀಕರಣಕ್ಕೆ ಹೋರಾಟ ಮಾಡಿದ್ದವು.
ಇದೀಗ ಮೃತರ ಕುಟುಂಬ ಸದಸ್ಯಉ ಬೈಪಾಸ್ ವರೆಗೂ ಬಂದು ರಸ್ತೆ ತಡೆ ನಡೆಸಿ ಈ ಹೆದ್ದಾರಿ ಅಗಲೀಕರಣಕ್ಕೆ ಹೋರಾಟ ಮಾಡಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ.