Breaking News

ವಾಹನ ಸವಾರರೇ, DL, RC ಅವಧಿ ಮುಗಿದಿದ್ರೆ ನವೀಕರಿಸಿ, ಇಲ್ಲದಿದ್ರೆ ʼ5000 ದಂಡʼ ತೆರಬೇಕಾಗುತ್ತೆ..!

Spread the love

ನವದೆಹಲಿ: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಾರಿಗೆ ನಿಯಮಗಳಲ್ಲಿ ಸಡಿಲಿಕೆ ನೀಡಿದ್ದು, ಅವಧಿ ಮೀರಿದ ಡಿ.ಎಲ್‌ ಮತ್ತು ಆರ್.ಸಿಯನ್ನ 2021 ಡಿಸೆಂಬರ್ 31ರವರೆಗೆ ಬಳಸಬಹುದು ಎಂದಿದೆ. ಅದ್ರಂತೆ, 2020ರ ಮಾರ್ಚ್ ನಿಂದ ಅಮಾನ್ಯವಾದ ಚಾಲನಾ ಪರವಾನಗಿಗಳು, ಆರ್ ಸಿಗಳು ಮತ್ತು ಫಿಟ್ ನೆಸ್ ಪ್ರಮಾಣ ಪತ್ರಗಳನ್ನು ಹೊಂದಿರುವ ವಾಹನಗಳ ಮೇಲೆ ಸಾರಿಗೆ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.

ಆದರೆ, ಡಿಸೆಂಬರ್ 31ರಿಂದ ಅಕ್ರಮ ಪರವಾನಗಿ ಹೊಂದಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ. ಆದ್ದರಿಂದ ನಿಮ್ಮ ಪರವಾನಗಿ ಮತ್ತು RCಯ ವ್ಯಾಲಿಡಿಟಿ ಮುಗಿದಿದ್ರೆ, ಹೊಸ ವರ್ಷಕ್ಕೂ ಮುನ್ನ ಅವುಗಳನ್ನು ನವೀಕರಿಸಿ, ಇಲ್ಲದಿದ್ದರೆ ಸಮಸ್ಯೆಗಳು ಹೆಚ್ಚಾಗಬಹುದು.

ಹೊಸ ಮೋಟಾರು ವಾಹನ ನಿಯಮ ಪ್ರಕಾರ, ಪರವಾನಗಿ ಇಲ್ಲದ ಚಾಲಕರಿಗೆ 5,000 ರೂಪಾಯಿ ದಂಡ ವಿಧಿಸಬಹುದು. ಹೌದು, ಕಾರು ಅಥವಾ ದ್ವಿಚಕ್ರ ವಾಹನ ಚಾಲಕನಿಗೆ ಮಾನ್ಯ ಪರವಾನಗಿ ಇಲ್ಲದಿದ್ದರೆ ಅಥವಾ ಅವರ ಡಿಎಲ್ (ಡ್ರೈವಿಂಗ್ ಲೈಸೆನ್ಸ್) ಅವಧಿ ಮುಗಿದಿದ್ದರೆ, 5 ಸಾವಿರ ರೂ.ಗಳ ದಂಡ ವಿಧಿಸಬಹುದು. ಸಾರಿಗೆ ಇಲಾಖೆಯಿಂದ ದೊರೆತ ಮಾಹಿತಿ ಪ್ರಕಾರ, ಡಿಸೆಂಬರ್ 31ರ ನಂತರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಂಚಾರ ನಿಯಮಗಳಲ್ಲಿ ಸಡಿಲಿಕೆಯನ್ನ ವಿಸ್ತರಿಸದಿದ್ದರೆ ವಾಹನ ಚಾಲಕರು ತೊಂದರೆ ಎದುರಿಸಬೇಕಾಗುತ್ತದೆ.

ಈ ರೀತಿ ಡಿಎಲ್ ಮತ್ತು ಆರ್ ಸಿ ಯನ್ನು ನವೀಕರಿಸಬಹುದು..!
ನೀವು ನಿಮ್ಮ ಡಿಎಲ್ ಮತ್ತು ಆರ್ ಸಿ ಯನ್ನ ನವೀಕರಿಸಲು ಬಯಸಿದರೆ, ಇದಕ್ಕಾಗಿ ನೀವು ಸಾರಿಗೆ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ parivahan.gov.in ಭೇಟಿ ನೀಡಿ. ಇದಾದ ನಂತರ, ಸೈಟ್ʼನಲ್ಲಿ ಡ್ರೈವಿಂಗ್ ಲೈಸೆನ್ಸ್ ಸೇವೆಯ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಇದನ್ನ ದ ನಂತರ, ಡಿಎಲ್ ಸಂಖ್ಯೆಯ ವಿವರಗಳನ್ನ ಕೇಳಲಾಗುತ್ತೆ. ಅದನ್ನ ಭರ್ತಿ ಮಾಡಿದ ನಂತರ ಅಗತ್ಯ ದಾಖಲೆಗಳನ್ನ ಅಪ್ಲೋಡ್ ಮಾಡಿ ನಂತರ ಹತ್ತಿರದ ಆರ್ ಟಿಓ ಕಚೇರಿಗೆ ತೆರಳಿ ಹಣ ಪಾವತಿಸಿ ಸ್ಲಾಟ್ ಬುಕ್ ಮಾಡಿಕೊಳ್ಳಬೇಕಾಗುತ್ತದೆ. ನಿಮ್ಮ ಬಯೋಮೆಟ್ರಿಕ್ ವಿವರಗಳನ್ನ ಆರ್ ಟಿಓ ಕಚೇರಿಯಲ್ಲಿ ಪರಿಶೀಲಿಸಲಾಗುವುದು ಮತ್ತು ನಿಮ್ಮ ದಾಖಲೆಗಳನ್ನು ಪರಿಶೀಲಿಸಲಾಗುವುದು. ಇದಾದ ನಂತರ, ನಿಮ್ಮ ಪರವಾನಗಿಯನ್ನ ನವೀಕರಿಸಲಾಗುತ್ತದೆ. ನೀವು ನಿಮ್ಮ RC ಯನ್ನ ಕೂಡ ಇದೇ ರೀತಿಯಲ್ಲಿ ನವೀಕರಿಸಬಹುದು.


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ