Breaking News

KGF 2 ಟೀಸರ್ ರಿಲೀಸ್ ಆದ ಕೂಡಲೆ ಟ್ರೆಂಡ್ ಆಯ್ತು RRR ಸಿನಿಮಾ

Spread the love

ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾದ ಟೀಸರ್ ಕೊನೆಗೂ ರಿಲೀಸ್ ಆಗಿದೆ. ವರ್ಷದಿಂದ ಕಾಯುತ್ತಿದ್ದ ಅಭಿಮಾನಿಗಳು ಕೆಜಿಎಫ್-2 ಟೀಸರ್ ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಕನ್ನಡಿಗರು ಮಾತ್ರವಲ್ಲದೆ ಬೇರೆ ಬೇರೆ ಭಾಷೆಯ ಅಭಿಮಾನಿಗಳು ಸಹ ಕೆಜಿಎಫ್-2 ಟೀಸರ್ ನೋಡಿ ಸಂಭ್ರಮಿಸುತ್ತಿದ್ದಾರೆ. ಕನ್ನಡ ಸಿನಿಮಾವೊಂದಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಇಡೀ ಸ್ಯಾಂಡಲ್ ವುಡ್ ದಂಗಾಗಿದೆ.

 

ಇದೀಗ ಎಲ್ಲಾ ಕಡೆ ಕೆಜಿಎಫ್-2 ಟೀಸರ್ ದೆ ಹವಾ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಶ್, ಕೆಜಿಎಫ್-2 ಟೀಸರ್ ರಿಲೀಸ್ ಆದ ಬೆನ್ನಲ್ಲೇ ತೆಲುಗಿನ ಬಹುನಿರೀಕ್ಷೆಯ ಆರ್ ಆರ್ ಆರ್ ಸಿನಿಮಾ ಟ್ವಿಟ್ಟರ್ ನಲ್ಲಿ ಟ್ರೆಂಡ್ ಸೃಷ್ಟಿಯಾಗಿದೆ. ರಾಮ್ ಚರಣ್ ಮತ್ತು ಜೂ. ಎನ್ ಟಿ ಆರ್ ಅಭಿಮಾನಿಗಳು ಆರ್ ಆರ್ ಆರ್ ಸಿನಿಮಾದ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.

ಕೆಜಿಎಫ್ ಟೀಸರ್ ಸೂಪರ್: ಆದ್ರೂ ಆ ವಿಚಾರಕ್ಕೆ ಬೇಸರಗೊಂಡ ಅಭಿಮಾನಿಗಳು!

ಅಂದಹಾಗೆ ದಿಢೀರ್ ನೆ ಟ್ರೆಂಡ್ ಸೃಷ್ಟಿಯಾಗಲು ಕಾರಣ ಇಂದು ಆರ್ ಆರ್ ಆರ್ ಸಿನಿಮಾದ ರಿಲೀಸ್ ಡೇಟ್. ಅಂದುಕೊಂಡಂತೆ ಆಗಿದ್ದರೆ ಇವತ್ತು, ಜನವರಿ 8ರಂದು ಆರ್ ಆರ್ ಆರ್ ಸಿನಿಮಾ ರಿಲೀಸ್ ಆಗಬೇಕಿತ್ತು. ಈ ಮೊದಲು ಸಿನಿಮಾತಂಡ 2021 ಜನವರಿ 8ರಂದು ಸಿನಿಮಾ ರಿಲೀಸ್ ಮಾಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿತ್ತು. ಆದರೆ ಕೊರೊನಾ ಕಾರಣದಿಂದ ಸಿನಿಮಾ ರಿಲೀಸ್ ಮುಂದಕ್ಕೆ ಹೋಗಿದೆ.


Spread the love

About Laxminews 24x7

Check Also

ಬೆಳಗಾವಿ ಜಿಲ್ಲಾಧಿಕಾರಿ ಕಾರಿಗೆ (ಕಾಂಕ್ರೀಟ್ ಮಷಿನ್ ವಾಹನ)ಡಿಕ್ಕಿ.

Spread the loveಬೆಳಗಾವಿ ಜಿಲ್ಲಾಧಿಕಾರಿ ಕಾರಿಗೆ (ಕಾಂಕ್ರೀಟ್ ಮಷಿನ್ ವಾಹನ)ಡಿಕ್ಕಿ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದ ಘಟನೆ. ಜಿಲ್ಲಾಧಿಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ