ಶಹಾಪುರದಲ್ಲಿ ಶ್ರೀ ದುರ್ಗಾದೇವಿ- ಶ್ರೀ ಮಾತಂಗಿದೇವಿ ಜಾತ್ರಾ ಮಹೋತ್ಸವದ ಸಂಭ್ರಮ: ಪಲ್ಲಕ್ಕಿ ಮೆರವಣಿಗೆಗೆ ಭಕ್ತರ ಸಾಗರ

ಬೆಳಗಾವಿ ನಗರದ ಶಹಾಪುರದ ಗಾಡೆ ಮಾರ್ಗದಲ್ಲಿರುವ ಸಿದ್ಧಾರ್ಥ ಕಾಲನಿಯಲ್ಲಿ ಶ್ರೀ ದುರ್ಗಾದೇವಿ ಮಾತಂಗಿ ದೇವಿಯ ಜಾತ್ರಾ ಮಹೋತ್ಸವವು ಅತ್ಯಂತ ಸಡಗರ-ಸಂಭ್ರಮದಿಂದ ಆರಂಭಗೊಂಡಿದೆ. ಜಾತ್ರೆಯ ಅಂಗವಾಗಿ ಶನಿವಾರದಂದು ದೇವಿಯ ಭವ್ಯ ಪಲ್ಲಕ್ಕಿ ಮೆರವಣಿಗೆಯು ಸಡಗರದಿಂದ ಜರುಗಿತು.
ನೂರಾರು ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಭಂಡಾರ ಹಾರಿಸುವ ಮೂಲಕ ಭಕ್ತಿ ಸಮರ್ಪಿಸಿದರು. ಮಂಗಳವಾರ, ಜನವರಿ 20 ರಂದು ದೇವಿಗೆ ವಿಶೇಷ ಪೂಜೆ ಹಾಗೂ ಸುಮಂಗಲೆಯರಿಂದ ಉಡಿ ತುಂಬುವ ಧಾರ್ಮಿಕ ಕಾರ್ಯಕ್ರಮಗಳು ಶಾಸ್ತ್ರೋಕ್ತವಾಗಿ ನೆರವೇರಲಿವೆ.
ಬರುವ ಬುಧವಾರ, ಜನವರಿ 21 ರಂದು ಜಾತ್ರಾ ಮಹೋತ್ಸವದ ಪ್ರಮುಖ ಘಟ್ಟವಾದ ಮಹಾಪ್ರಸಾದ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ.
ಅಂದು ಮಧ್ಯಾಹ್ನ 12:00 ಗಂಟೆಯಿಂದ 3:00 ಗಂಟೆಯವರೆಗೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು, ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರಸಾದ ಸ್ವೀಕರಿಸಬೇಕೆಂದು ಶ್ರೀ ದುರ್ಗಾದೇವಿ ಮಾತಂಗಿ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ವಿನಂತಿಸಿದ್ದಾರೆ. ಸಿದ್ಧಾರ್ಥ ಕಾಲೋನಿಯ ನಿವಾಸಿಗಳು ಹಾಗೂ ಕಮಿಟಿಯ ಸದಸ್ಯರು ಜಾತ್ರೆಯ ಯಶಸ್ವಿಗಾಗಿ ಶ್ರಮಿಸುತ್ತಿದ್ದು, ಇಡೀ ಪ್ರದೇಶದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.
Laxmi News 24×7