ಬೆಳಗಾವಿ ಡಿಸಿಸಿ ಬ್ಯಾಂಕ ಅಧ್ಯಕ್ಷ ಸ್ಥಾನಕ್ಕೆ ನಾನು ಪ್ರಬಲ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ
ಬಿಡಿಸಿಸಿ ಬ್ಯಾಂಕಿನ ನಾಲ್ಕು ನಿರ್ದೇಶಕ ಸ್ಥಾನದ ಫಲಿತಾಂಶ ಪ್ರಕಟವಾಗಿದ್ದು ರಮೇಶ್ ಕತ್ತಿ, ಅಣ್ಣಾಸಾಹೇಬ್ ಜೊಲ್ಲೆ, ನಾನಾಸಾಹೇಬ್ ಪಾಟೀಲ್ ಹಾಗೂ ಮಹಾಂತೇಶ್ ದೊಡ್ಡಗೌಡರ್ ಆಯ್ಕೆಯಾಗಿದ್ದು.
ಒಟ್ಟು 16 ಸ್ಥಾನಗಳಲ್ಲಿ 9 ಸ್ಥಾನ ಅವಿರೋಧ ಆಯ್ಕೆಯಾಗಿದ್ದವು.
ಇನ್ನುಳಿದ ಏಳು ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಮೂರು ಕ್ಷೇತ್ರದ ಫಲಿತಾಂಶ ಪ್ರಕಟವಾಗಿತ್ತು.
ಇನ್ನುಳಿದ ನಾಲ್ಕೂ ಸ್ಥಾನದ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಬಾಲಚಂದ್ರ ಜಾರಕಿಹೊಳಿ ನೇತೃತ್ವದ ಬಣ 13 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಹಿಡಿತ ಕಾಯ್ದುಕೊಂಡಿದೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಬಣದ ಸದಸ್ಯರೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಕರ್ನಾಟಕದ ಚಿತ್ತ ಬೆಳಗಾವಿ ಡಿಸಿಸಿ ಬ್ಯಾಂಕ ಅಧ್ಯಕ್ಷ ಉಪಾಧ್ಯಕ್ಷರ ಸ್ಥಾನದತ್ತ ನೆಟ್ಟಿದೆ
ಲಿಂಗಾಯತ ಬಣದವರನ್ನೇ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎಂದು ಈಗಾಗಲೇ ಬಾಲಚಂದ್ರ ಜಾರಕಿಹೊಳಿ ಘೋಷಣೆ ಮಾಡಿದ್ದಾರೆ.
ಸಧ್ಯ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಸಾಹೆಬ್ ಜೊಲ್ಲೆ, ಮಹಾಂತೇಶ್ ದೊಡ್ಡಗೌಡರ್ ತೀವ್ರ ಪೈಪೋಟಿ ನಡೆಸಿದ್ದು
ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ನಾನು ಒಬ್ಬ ಪ್ರಬಲ ಆಕಾಂಕ್ಷಿ ಎಂದು
ಮಹಾಂತೇಶ್ ದೊಡ್ಡಗೌಡರ ಸ್ಪಷ್ಟನೆ
ಸಾಕಷ್ಟು ವರ್ಷಗಳಿಂದ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ಕೊಡುಗೆ ನೀಡುತ್ತಾ ಬಂದಿದೇನೆ
ಎಲ್ಲಾ ಡಿಸಿಸಿ ಬ್ಯಾಂಕ್ ಮುಖಂಡರು ಮೇಲೆ ನಂಬಿಕೆ ಇದೆ ನಾಯಕರು ಕೈಗೊಂಡ ನಿರ್ಣಯಕ್ಕೆ ನಾನು ಬದ್ಧ
ಬೆಳಗಾವಿ ಡಿಸಿಸಿ ಬ್ಯಾಂಕ್ 16 ನಿರ್ದೇಶಕರಿಗೂ ಕೂಡ ಅಧ್ಯಕ್ಷ ಉಪಾಧ್ಯಕ್ಷ ಆಸೆ ಇದ್ದೇ ಇರುತ್ತದೆ
ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಸ್ಥಾನಕ್ಕೆ ನನ್ನ ಸೇವೆ ಪರಿಗಣಿಸಿ ನನ್ನ ಆಯ್ಕೆ ಮಾಡುವ ನಿರೀಕ್ಷೆ ಇದೆ
ಕಿತ್ತೂರು ಕ್ಷೇತ್ರದಲ್ಲಿ ಮುಂಬರುವ 2028ನೆಯ ಚುನಾವಣೆಯಲ್ಲಿ ಬಿಜೆಪಿ ಪತಾಕೆ ಹಾರಿಸುತ್ತೇವೆ ಕಂಡಿತಾ
Laxmi News 24×7