ಅಟೊ ರೀಕ್ಷಾದಲ್ಲಿ ಪ್ರೇಮಿಗಳ್ಳಿಬ್ಬರು ನೇಣಿಗೆ ಶರಣು
ಸುಮಾರು ದಿನಗಳಿಂದ ಪ್ರೀತಿಸುತ್ತಿದ್ದ ಇಬ್ಬರು ಪ್ರೇಮಿಗಳು ಅಟೊ ರೀಕ್ಷಾದಲ್ಲಿ ನೇಣಿಗೆ ಶರಣಾದ ಘಟನೆ ಗೋಕಾಕ ತಾಲೂಕಿನ ಹೀರೆನಂದಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಸವದತ್ತಿ ತಾಲೂಕಿನ ಮುನ್ನೋಳಿ ಪಟ್ಟಣದ ನಾಗಲಿಂಗ ನಗರದ ನಿವಾಸಿಗಳಾದ ರಾಘವೇಂದ್ರ ನಾರಾಯಣ ಜಾದವ (28), ರಂಜಿತಾ ಅಡಿವೇಪ್ಪ ಚೌಬಾರಿ (25) ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾಘವೇಂದ್ರ ಹಾಗೂ ರಂಜಿತಾ ಇಬ್ಬರು ಸುಮಾರು ದಿನಗಳಿಂದ ಪರಸ್ಪರ ಪ್ರೀತಿಸುತಿದ್ದರು.
ಈವರಿಬ್ಬರು ಪ್ರೀತಿ ಮಾಡುವ ವಿಷಯ ಎರಡು ಕುಟುಂಬಕ್ಕೆ ಗೊತ್ತಿರಲಿಲ್ಲ. ಕೆಲವು ದಿನಗಳ ಹಿಂದೆ ರಂಜಿತಾಳ ಜೋತೆ ಬೇರೆ ಹುಡುಗನ ನಿಶ್ಚಿತಾರ್ಥವಾಗಿತ್ತು.
ಇಬ್ಬರು ಬೇರೆ, ಬೇರೆ ಆಗುತ್ತೇವೆಂದು ನೇಣಿಗೆ ಶರಣಾಗಿದ್ದಾರೆ. ಈ ಕುರಿತು ಗೋಕಾಕ ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7