Breaking News

ಹಾವೇರಿ ರೈತನಿಗೆ ಒಲಿದ ಗೌರವ ಡಾಕ್ಟರೇಟ್

Spread the love

ಹಾವೇರಿ: ವೈವಿಧ್ಯಮಯ ಕೃಷಿಗಾಗಿ ಹಾವೇರಿಯ ಕಾಮನಹಳ್ಳಿ ಗ್ರಾಮದ ರೈತರೊಬ್ಬರು ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ಶಾಲೆಯ ಮೆಟ್ಟಿಲು ಹತ್ತದ ರೈತ ಮುತ್ತಣ್ಣ ಭೀರಪ್ಪ ಪೂಜಾರ ಎಂಬವರು “ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು” ಎಂಬುದನ್ನು ನಿರೂಪಿಸಿದ್ದಾರೆ. ಇವರ ಸಮಗ್ರ ಕೃಷಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ದೊರೆತಿದೆ. ಅಷ್ಟೇ ಅಲ್ಲದೇ, ಧರ್ಮಸ್ಥಳ ಕೃಷಿ ಮೇಳ, ಜಿಲ್ಲಾ ಮೇಳ ಸೇರಿದಂತೆ ವಿವಿಧ ಮೇಳಗಳಲ್ಲಿ ಹಲವು ಪ್ರಶಸ್ತಿಗಳು ಮುತ್ತಣ್ಣನವರನ್ನು ಅರಸಿಕೊಂಡು ಬಂದಿವೆ.

10 ಎಕರೆ ಜಮೀನಿನಲ್ಲಿ ಕೃಷಿ ಆರಂಭ: ಮುತ್ತಣ್ಣ ಮೂಲತಃ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ನವಿಲಾಳ ಗ್ರಾಮದವರು. ಕಳೆದ ಎರಡು ದಶಕಗಳ ಹಿಂದೆ ಇವರು ತಂದೆ, ತಾಯಿ ಜೊತೆ ಕುರಿ ಮೇಯಿಸಿಕೊಂಡು ಹಾವೇರಿಗೆ ಆಗಮಿಸಿದ್ದರು. ಅವರೊಂದಿಗಿದ್ದ 2,500 ಕುರಿಗಳು ರೋಗ ತಗುಲಿ ಸಾವಿರಕ್ಕೆ ಕುಸಿದಿದ್ದವು. ಹೀಗಾಗಿ ಕುರಿ ಸಾಕಾಣಿಕೆ ಸಾಕು ಎಂದು ನಿರ್ಧರಿಸಿದ ಮುತ್ತಣ್ಣ, ಪೋಷಕರ ಸಹಾಯದಿಂದ ಕಾಮನಹಳ್ಳಿಯಲ್ಲಿ ಸುಮಾರು 10 ಎಕರೆ ಜಮೀನಿನಲ್ಲಿ ಕೃಷಿ ಕಸುಬಿಗೆ ಮುಂದಾಗುತ್ತಾರೆ. ಆದರೆ, ಆ ಜಮೀನು ಬರಡಾಗಿದ್ದರಿಂದ ಜನರು ಅಪಹಾಸ್ಯ ಮಾಡುತ್ತಿದ್ದರು. ಇದರಿಂದ ಎದೆಗುಂದದ ಮುತ್ತಣ್ಣ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆಗಳ ಸಹಾಯದಿಂದ ಹತ್ತೆಕರೆ ಜಮೀನಿನಲ್ಲಿ ವಿವಿಧ ಬೆಳೆ ಬೆಳೆಯಲು ಮುಂದಾಗುತ್ತಾರೆ. ಜೊತೆಜೊತೆಗೆ ಅಡಿಕೆ ನರ್ಸರಿಯನ್ನೂ ಆರಂಭಿಸುತ್ತಾರೆ. ಅಲ್ಲಿಂದ ಮುತ್ತಣ್ಣ ಹಿಂತಿರುಗಿ ನೋಡಲಿಲ್ಲ.ಈಗ 37 ಎಕರೆ ಜಮೀನಿನ ಒಡೆಯ ಮುತ್ತಣ್ಣ: ಆರಂಭದಲ್ಲಿ ವರ್ಷಕ್ಕೆ ಸಾವಿರಾರು ಅಡಿಕೆ ಸಸಿಗಳನ್ನು ಮಾರುತ್ತಿದ್ದ ಇವರು, ಈ ವರ್ಷ ಮೂರು ಲಕ್ಷ ಅಡಿಕೆ ಸಸಿಗಳ ಜೊತೆಗೆ ಮಾವು, ತೆಂಗು ಸಸಿಗಳನ್ನೂ ಮಾರಾಟ ಮಾಡಿದ್ದಾರೆ. ಇದೀಗ ಮುತ್ತಣ್ಣನ ಬಳಿ 37 ಎಕರೆ ಜಮೀನಿದೆ. ಇದರಲ್ಲಿ ತೆಂಗು, ಬಾಳೆ, ಅಡಿಕೆ, ಸಪೋಟ, ಮಾವು ಸೇರಿದಂತೆ ವೈವಿಧ್ಯಮಯ ಕೃಷಿ ಮಾಡಿದ್ದಾರೆ. ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆ, ಅಜೋಲಾ ಹಾಗು ಸಾವಯುವ ಬೇಸಾಯದ ಮೂಲಕ ಜಿಲ್ಲೆಯಲ್ಲಿ ಮನೆಮಾತಾಗಿದ್ದಾರೆ.


Spread the love

About Laxminews 24x7

Check Also

ಜ. 31ರ ನಂತರ ಸಂಪುಟ ಪುನಾರಚನೆ ಸಾಧ್ಯತೆ; ಬಿಜೆಪಿ ವಿರುದ್ಧ ‘ನರೇಗಾ ಬಚಾವ್’ ಹೋರಾಟಕ್ಕೆ ಸಲೀಂ ಅಹ್ಮದ್ ಕರೆ

Spread the love ಜ. 31ರ ನಂತರ ಸಂಪುಟ ಪುನಾರಚನೆ ಸಾಧ್ಯತೆ; ಬಿಜೆಪಿ ವಿರುದ್ಧ ‘ನರೇಗಾ ಬಚಾವ್’ ಹೋರಾಟಕ್ಕೆ ಸಲೀಂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ