ಬೆಳಗಾವಿ – ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರ ಸಹೋದರಿಯ ಪುತ್ರಿ ಸುಶ್ಮಿತಾ ಅವರ ವಿವಾಹವು ಹುಬ್ಬಳ್ಳಿಯ ದಿ.ವಿಶ್ವಪ್ರಕಾಶ ಉಳ್ಳಾಗಡ್ಡಿಮಠ ಅವರ ಪುತ್ರ ರಜತ್ ಜೊತೆ ಬೆಳಗಾವಿಯಲ್ಲಿ ನಡೆಯಿತು.
ಇಲ್ಲಿಯ ಸಂಕಮ್ ಹೊಟೆಲ್ ಸಭಾಂಗಣದಲ್ಲಿ ವಿವಾಹ ಪೂರ್ವ ಕಾರ್ಯಕ್ರಮ ಹಾಗೂ ವಿವಾಹ ಕಾರ್ಯಕ್ರಮಗಳು ಒಟ್ಟೂ 3 ದಿನಗಳ ಕಾಲ ನಡೆಯಿತು. ಕೊರೋನಾ ಹಿನ್ನೆಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಆಮಂತ್ರಣ ನೀಡಲಾಗಿತ್ತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಚಿತ್ರನಟ ವಿಜಯರಾಘವೇಂದ್ರ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ವಧು ವರರನ್ನು ಆಶಿರ್ವದಿಸಿದರು.