ಇಂದು ಸಿ.ಎಫ್.ಟಿ.ಎಫ್.ಕೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ, ಡ್ರಗ್ಸ್, ಮದ್ಯಪಾನ ಮುಕ್ತ ಕರ್ನಾಟಕ ಜನಜಾಗೃತಿ ಕಾರ್ಯಕ್ರಮದಲ್ಲಿ, ಗೂಗಲ್ ಮೀಟ್ ಮೂಲಕ ಭಾಗವಹಿಸಿ, ಮಾತನಾಡಲಾಯಿತು.
ಇತ್ತೀಚಿನ ದಿನಮಾನಗಳಲ್ಲಿ ಮಕ್ಕಳು ಡ್ರಗ್ಸ್ , ಮದ್ಯಪಾನ ಹೀಗೆ ಹಲವು ದುಶ್ಚಟಗಳಿಗೆ ಬಲಿಯಾಗುತ್ತಿರುವ ನಡುವೆ ಸಮಾಜದಲ್ಲಿ ಜಾಗೃತಿ ಅಭಿಯಾನ ನಡೆಸುತ್ತಿರುವ ಸಿ.ಎಫ್.ಟಿ.ಎಫ್.ಕೆ ಸಂಸ್ಥೆಯ ಕಾರ್ಯ ಶ್ಲಾಘನೀಯ. ನಮ್ಮ ಇಲಾಖೆಯ ರೀತಿ ಸಿ.ಎಫ್.ಟಿ.ಎಫ್.ಕೆ ಸಂಸ್ಥೆ ಕೂಡ ಸಮಾಜದಲ್ಲಿ ಧೂಮಪಾನ, ಡ್ರಗ್ಸ್, ಮದ್ಯಪಾನದಂತಹ ಕೆಟ್ಟ ಚಟಗಳಿಂದ ಜನರನ್ನು ದೂರವಿರಿಸಲು ಶ್ರಮವಹಿಸುತ್ತಿದೆ. ಇಂತಹ ಸಂಸ್ಥೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನ್ನ ಸೌಭಾಗ್ಯ.
ದುಶ್ಚಟಗಳು ಮಾನವನ ಆರೋಗ್ಯ ಹದೆಗೆಡಿಸುವುದಲ್ಲದೇ, ಸಮಾಜದ ಶಾಂತಿಯನ್ನೂ ಹಾಳುಗೆಡುವುತ್ತವೆ. ಮಕ್ಕಳೂ ಇಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಹೀಗಾಗಿ ಪಾಲಕರು, ಶಿಕ್ಷಕರಲ್ಲಿ ಜಾಗೃತಿ ಮೂಡಿಸಿ, ಧೂಮಪಾನ, ಮಾಧಕ ವಸ್ತುಗಳು, ಮದ್ಯಪಾನದಂತ ಕೆಟ್ಟ ಚಟಗಳಿಂದ ಮಕ್ಕಳನ್ನು ದೂರವಿರಿಸಿ, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಪಣ ತೊಡೋಣ.