Breaking News

ಬೆಳಗಾವಿಯ ಮೇಲ್ಸೇತುವೆಗೆ “ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ಸೇತುವೆ” ಎಂದು ನಾಮಕರಣ…

Spread the love

ಬೆಳಗಾವಿಯ ಮೇಲ್ಸೇತುವೆಗೆ “ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ಸೇತುವೆ” ಎಂದು ನಾಮಕರಣ…
ಬೆಳಗಾವಿಯ ಮೇಲ್ಸೇತುವೆಗೆ ಬಸವ ಜಯಂತಿಯ ಹಿನ್ನೆಲೆ “ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ಸೇತುವೆ” ಎಂದು ನಾಮಕರಣ ಮಾಡಿ, ನಾಮಫಲಕವನ್ನು ಅನಾವರಣಗೊಳಿಸಲಾಯಿತು.
ಬೆಳಗಾವಿಯ ಮೇಲ್ಸೇತುವೆಗೆ ಬಸವ ಜಯಂತಿಯ ಹಿನ್ನೆಲೆ “ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ಸೇತುವೆ” ಎಂದು ನಾಮಕರಣ ಮಾಡಿ, ಸಂಸದ ಜಗದೀಶ್ ಶೆಟ್ಟರ್, ದಕ್ಷಿಣ ಶಾಸಕ ಅಭಯ್ ಪಾಟೀಲ್, ಕೆ.ಎಲ್.ಇ. ಕಾರ್ಯಾಧ್ಯಕ್ಷ ಡಾ. ಪ್ರಭಾಕರ್ ಕೋರೆ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ನಗರಸೇವಕರಾದ ರಾಜಶೇಖರ್ ಢೋಣಿ, ಹಣಮಂತ ಕೊಂಗಾಲಿ, ರತ್ನಪ್ರಭಾ ಬೆಲ್ಲದ, ಎಂ.ಬಿ. ಝೀರಲಿ, ಈರಣ್ಣ ದೇಯನ್ನವರ, ಬಸವರಾಜ್ ರೊಟ್ಟಿ ಸೇರಿದಂತೆ ಇನ್ನುಳಿದವರು ನಾಮಫಲಕವನ್ನು ಅನಾವರಣಗೊಳಿಸಿದರು.
ಬಸವ ಜಯಂತಿಯ ಹಿನ್ನೆಲೆ ನಗರದ ರೇಲ್ವೆ ಮೇಲ್ಸೇತುವೆಗೆ ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ಸೇತುವೆ ಎಂದು ಸ್ಥಳೀಯ ಜನಪ್ರತಿನಿಧಿಗಳು ಕೈಗೊಂಡ ನಿರ್ಣಯದಂತೆ ಹೆಸರಿಡಲಾಗಿದೆ.
ಅಲ್ಲದೇ ಬೆಳಗಾವಿಯಲ್ಲಿ ಬಸವಣ್ಣನವರ ಮೂರ್ತಿ ಮತ್ತು ಅನುಭವ ಮಂಟಪದ ಪ್ರತಿಕೃತಿಯನ್ನು ನಿರ್ಮಿಸಿಲು ಸ್ಮಾರ್ಟ್ ಸಿಟಿಯಿಂದ 18 ಕೋಟಿ ರೂಪಾಯಿ ಮೊದಲೇ ಮಂಜೂರಾಗಿದೆ. ಆ ಅನುದಾನ ಬೇರೆಡೆ ವರ್ಗಾವಣೆಯಾಗಿದ್ದು, ಅದನ್ನು ಮರಳಿ ತರುವ ರಾಜ್ಯ ಸರ್ಕಾರ ಮಾಡಬೇಕಿದೆ ಎಂದರು.
ಬೆಳಗಾವಿಯಲ್ಲಿರುವ ಜಗಜ್ಯೊತಿ ಬಸವೇಶ್ವರ ಉದ್ಯಾನ ಮತ್ತು ಬಸವಣ್ಣನವರ ಮೂರ್ತಿಯ ಅಭಿವೃದ್ಧಿಯಾಗಿ 3 ವರ್ಷದ ಹಿಂದೆಯೇ ಯೋಜನೆಯನ್ನು ತಯಾರಿಸಲಾಗಿದ್ದು, 18 ಕೋಟಿ ರೂಪಾಯಿಯನ್ನು ಇದಕ್ಕಾಗಿ ಮೀಸಲಿಡಲಾಗಿತ್ತು. ಆದರೇ ಅದನ್ನ ಬೇರೆ ಕಾರ್ಯಕ್ಕೆ ಬಳಸಿಕೊಂಡು, ಸರ್ಕಾರದಿಂದ ಅನುದಾನ ಮಂಜೂರುಗೊಳಿಸುವ ಭರವಸೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನೀಡಿದ್ದರು. ಆದರೇ, ಇಲ್ಲಿಯ ವರೆಗೂ, ಅದನ್ನ ಮರಳಿ ನೀಡಿಲ್ಲ. ಶೀಘ್ರದಲ್ಲೇ ಅನುದಾನವನ್ನು ಮರಳಿ ನೀಡಬೇಕೆಂದರು.
ಈ ವೇಳೆ ವಿವಿಧ ಗಣ್ಯರು ಮತ್ತು ಸಮಾಜ ಪ್ರಮುಖರು ಉಪಸ್ಥಿತರಿದ್ಧರು.

Spread the love

About Laxminews 24x7

Check Also

ಗೃಹ ಕಾರ್ಮಿಕರಿಗೆ ಶೀಘ್ರದಲ್ಲೇ ಶಾಸನಬದ್ಧ ರಕ್ಷಣೆ, ಕನಿಷ್ಠ ವೇತನ; ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಸರ್ಕಾರದ ಸಿದ್ಧತೆ

Spread the love ಬೆಂಗಳೂರು: ರಾಜ್ಯಾದ್ಯಂತ ಸುಮಾರು 8 ಲಕ್ಷ ಗೃಹ ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದ ಮಹತ್ವದ ಕಾನೂನನ್ನು ಜಾರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ