ಹುಬ್ಬಳ್ಳಿ: “ನೀನು ರಾಜೀನಾಮೆ ಕೊಡು, ನಾನು ರಾಜೀನಾಮೆ ಕೊಡ್ತೀನಿ. ಚುನಾವಣೆಗೆ ಹೋಗೋಣ, ಯಾರು ಗೆಲ್ಲುತ್ತಾರೆ ನೋಡೋಣ” ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರಗೆ ಸವಾಲು ಹಾಕಿದ್ದಾರೆ.
ನಗರದ ಮೂರುಸಾವಿರ ಮಠದ ಸ್ವಾಮೀಜಿ ಭೇಟಿ ಮಾಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ನಾನು ಕೇವಲ ಭಗವಾ ಧ್ವಜದ ಮೇಲೆ ಗೆಲ್ಲುತ್ತೇನೆ. ನನಗೆ ಮುಸ್ಲಿಮರ ವೋಟ್ ಬೇಡ. ವಿಜಯೇಂದ್ರ ನಿನಗೆ ತಾಕತ್ ಇದೆಯಾ? ಎಂದು ಪ್ರಶ್ನಿಸಿದ ಅವರು, ವಿಜಯೇಂದ್ರ ನಿನಗೆ ಧಮ್ ಇದ್ರೆ ನನ್ನ ಬಗ್ಗೆ ನೇರವಾಗಿ ಮಾತನಾಡು” ಎಂದು ಹರಿಹಾಯ್ದರು.ಬಿಜೆಪಿ ಕುಟುಂಬ ರಾಜಕಾರಣ ಅದರಲ್ಲೂ ಯಡಿಯೂರಪ್ಪ ಕುಟುಂಬದಿಂದ ಮುಕ್ತಿ ಆದ ಮೇಲೆ ನಾನು ಮತ್ತೆ ಹೋಗುತ್ತೇನೆ. ನಾನು ಒಳ್ಳೆಯವನು.
ಆದರೆ, ದುಷ್ಟರಿಗೆ ನಾನು ದುಷ್ಟ. ಪಂಚಮಸಾಲಿ ಟ್ರಸ್ಟ್ ನ ಪ್ರಭಣ್ಣ ಮಠದ ಆಸ್ತಿಯನ್ನು ಹೊಡೆದಿದ್ದಾರೆ. ಕೂಡಲ ಸಂಗಮದ ಆಸ್ತಿಯನ್ನು ತನ್ನ ಕುಟುಂಬದ ಆಸ್ತಿ ಮಾಡಿಕೊಂಡಿದ್ದಾನೆ” ಎಂದು ಯತ್ನಾಳ್ ಗಂಭೀರ ಮಾಡಿದರು.”ಸ್ವಾಮೀಜಿಗಳನ್ನು ರಾಜಕೀಯವಾಗಿ ಉಪಯೋಗ ಮಾಡಿಕೊಳ್ಳುವ ಸಂಸ್ಕೃತಿ ನನ್ನದಲ್ಲ. ಯಾರು ಸ್ವಾಮೀಜಿಗಳನ್ನು ಉಪಯೋಗಿಸಿಕೊಳ್ಳುತ್ತಾರೆ ಅನ್ನೋದು ನಿಮಗೆ ಗೊತ್ತಿದೆ. ಮಠಮಾನ್ಯಗಳಿಗೆ ದುಡ್ಡು ಕೊಟ್ಟಿದ್ದು ನಾವೇ ಅಂತ ಬಹಳ ಮಾತಾಡ್ತಾರೆ” ಎಂದು ವಾಗ್ದಾಳಿ ನಡೆಸಿದರು.