ಮಾ.19 ರಿಂದ 26 ರ ವರೆಗೆ ಸುಳೇಭಾವಿ ಲಕ್ಷ್ಮೀ ಜಾತ್ರೆ
ಬೆಳಗಾವಿಯಲ್ಲಿ ಜಾಗೃತಿಪರ ಬೈಕ್ ರ್ಯಾಲಿ
ಮಾರ್ಚ್ 19 ರಿಂದ 26 ರ ವರೆಗೆ ನಡೆಯಲಿರುವ ಸುಳೇಭಾವಿ ಶ್ರೀ ಮಹಾಲಕ್ಷ್ಮೀ ಜಾತ್ರೆಯ ನಿಮಿತ್ಯ ದೇವಸ್ಥಾನದ ಜಿರ್ಣೋದ್ಧಾರ ಕಮೀಟಿಯ ವತಿಯಿಂದ ಬೈಕ್ ರ್ಯಾಲಿ ನಡೆಸಿ, ಜನಜಾಗೃತಿ ಮೂಡಿಸಲಾಯಿತು.
ಬೆಳಗಾವಿ ಜಿಲ್ಲೆ ಶಕ್ತಿದೇವತೆಗಳಲ್ಲಿ ಒಂದಾದ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮೀ ಜಾತ್ರೆಯ ನಿಮಿತ್ಯ ಕೈಗೊಂಡ ಬೈಕ್ ರ್ಯಾಲಿಯೂ ಇಂದು ಕಲ್ಬುರ್ಗಿ ಮಾರ್ಗವಾಗಿ ಬೆಳಗಾವಿ ನಗರಕ್ಕೆ ಆಗಮಿಸಿತು. ಶ್ರೀ ಮಹಾಲಕ್ಷ್ಮೀಗೆ ಜೈ ಜೈ ಕಾರವನ್ನು ಹಾಕುತ್ತ ದೇವಿಯ ಭಾವಚಿತ್ರವನ್ನು ಹೊತ್ತ ವಾಹನ ಮುಂದೆ ಸಾಗಿತು.
ಸದ್ಭಕ್ತರು ಅಮ್ಮನ್ನವರ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಬೇಕೆಂದು ದೇವಪ್ಪ ಭೀಂಗೆನ್ನವರ ಮತ್ತು ಬಸನಗೌಡ ಹುಂಕ್ರು ಪಾಟೀಲ್ ಅವರು ಕರೆ ನೀಡಿದರು.
ಬೈಕ್ ರ್ಯಾಲಿಯೂ ಬೆಳಗಾವಿಯಿಂದ ಸಾಂಬ್ರಾ ಮಾರ್ಗವಾಗಿ ಸುಳೇಭಾವಿಗೆ ತಲುಪಿತು. ಇದರಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿದ್ದರು.