ದೀಪಾವಳಿ ಬಂದರೆ ಸಾಕು ಭರ್ಜರಿ ಖಾದ್ಯಗಳ ರಸದೌತಣ. ಬಗೆಬಗೆಯ ತಿನುಸುಗಳ ಸೊಗಸೂ ಇರುತ್ತದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಗಡಿ ಜಿಲ್ಲೆಗಳಲ್ಲಿ ಕನ್ನಡ- ಮರಾಠಿ ಮಿಶ್ರ ಸಂಸ್ಕೃತಿ ಖಾದ್ಯಗಳನ್ನು ಸವಿಯುವುದೇ ಸಡಗರ. ಸಿಹಿಯೂ, ಖಾರವೂ, ಕರಿದ ಪದಾರ್ಥಗಳೂ, ಬೇಕರಿ ತಿನಿಸುಗಳೂ…
ಒಂದೇ ಎರಡೇ. ತಿಂಡಿಪ್ರಿಯರಿಗಂತೂ ಇದು ಹೇಳಿ ಮಾಡಿಸಿದ ಹಬ್ಬ.
‘ಬಲೀಂದ್ರ ಪೂಜೆ’ ಅಮಾವಾಸ್ಯೆಯ ವಿಶೇಷ. ಈ ದಿನದಿಂದಲೇ ವಿಕ್ರಮ ಸಂವತ್ಸರ ಆರಂಭವಾಗುತ್ತದೆ. ವರ್ತಕರು, ಉದ್ಯಮಿಗಳಿಗೆ ಈ ದಿನ ಅತ್ಯಂತ ಶ್ರೇಷ್ಠವಾದುದು. ಹಾಗಾಗಿ, ವ್ಯಾಪಾರದ ಪ್ರತಿಯೊಂದು ವಸ್ತುವನ್ನೂ ಪೂಜೆ ಮಾಡುವುದು ಸಂಪ್ರದಾಯ. ಹಳ್ಳಿಗಳಲ್ಲಿ ‘ಕರಿ ಹರಿಯುವ ದಿನ’ ಆಚರಿಸಿದ ಬಳಿಕ ಬಿಸಿಬಿಸಿ ಹೋಳಿಗೆ ಸವಿಯುವ ಸಂಭ್ರಮ.
ಕೊಬ್ಬರಿ ಹೋಳಿಗೆ ಶಂಕರೋಳಿಮರಾಠಿಗರು ಸಿದ್ಧಪಡಿಸುವ ಶೇಂಗಾ ಹೋಳಿಗೆ, ಜಾಮೂನು, ಕೊಬ್ಬರಿ ಉಂಡೆ, ಶಂಕರಪೋಳಿ, ಶಾವಿಗೆ ಪಾಯಸ, ಕನ್ನಡಿಗರ ಹೋಳಿಗೆ, ಚಕ್ಕುಲಿ, ವೈವಿಧ್ಯಮಯ ಉಂಡೆ, ಗಿಲಗಂಚಿ, ಗಾಟೆ, ಕೋಡುಬಳೆ, ಕರ್ಚಿಕಾಯಿ, ಕಡಬು, ಹಪ್ಪಳ… ಹತ್ತಾರು ಬಗೆ; ಭರ್ಜರಿ ಖಾದ್ಯಗಳ ಹೆಸರು ಕಿವಿ ಮೇಲೆ ಬೀಳುತ್ತಿದ್ದಂತೆಯೇ ನಾಲಗೆಯಲ್ಲಿ ನೀರೂರುತ್ತದೆ. ಒಂದೊಂದು ಸಿಹಿಯನ್ನು ಒಂದೊಂದು ದಿನ ಪ್ರತ್ಯೇಕವಾಗಿ ಮಾಡುವುದೇ ಈ ಭಾಗದ ವೈಶಿಷ್ಟ್ಯ.
ಮನೆಯ ಮಂದಿ, ನೆರೆಹೊರೆ ಹಾಗೂ ಬಂಧುಬಳಗದವರೆಲ್ಲ ಸೇರಿ ಒಂದಾಗಿ ಒಬ್ಬೊಬ್ಬರ ಮನೆಯಲ್ಲಿ ಒಂದೊಂದು ದಿನ ಖಾದ್ಯ ತಯಾರಿಸುತ್ತಾರೆ. ಉಂಡೆ, ಚೂಡಾ, ಶಂಕರಪೋಳಿಯಂಥ ಪದಾರ್ಥಗಳನ್ನು ಮೊದಲೇ ಸಿದ್ಧಪಡಿಸಿಕೊಂಡಿದ್ದಾರೆ. ಕುಟುಂಬದಲ್ಲಿ ಮಕ್ಕಳು, ಪುರುಷರು, ಹಿರಿಯರಿಗೆ ಇಷ್ಟವಾಗುವಂಥ ತಹರೇವಾರು ಖಾದ್ಯಗಳು ಈಗಾಗಲೇ ಘಮಘಮಿಸುತ್ತಿವೆ.
ಚಕ್ಕುಲಿ ರಾಶಿ‘ಬಲಿಪಾಡ್ಯಮಿ’ಯ ದಿನ ಮನೆ- ಮನಗಳಲ್ಲಿನ ಅಂಧಕಾರ ದೂರಾಗಿ ಬೆಳಗು ಹರಿಯಲಿ ಎಂಬ ಕಾರಣಕ್ಕೆ ದೀಪಾವಳಿ ಆಚರಿಸಲಾಗುತ್ತದೆ. ಹಬ್ಬದ ದಿನ ಬಹುಪಾಲು ಎಲ್ಲ ಸಿಹಿತಿಂಡಿಗಳನ್ನೂ ಸವಿಯುವುದೇ ಸಂಭ್ರಮ.
ವಡೆ