ನಿನ್ನ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮೆರವಣಿಗೆ ಮಾಡಿಸ್ತೀನಿ!
ಬೆಳಗಾವಿ: ಅಭಿವೃದ್ಧಿ ಕೆಲಸಗಳಿಗಿಂತ ಜಾಸ್ತಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ (Controversy Statement) ನಮ್ಮ ರಾಜ್ಯದ ಹಲವು ಶಾಸಕರು (MLA), ಸಚಿವರು (Ministers) ಸುದ್ದಿಯಾಗ್ತಾರೆ. ಈ ಸಾಲಿಗೆ ಬೆಳಗಾವಿ (Belagavi) ಜಿಲ್ಲೆಯ ಕಾಗವಾಡ (Kagawada) ಕ್ಷೇತ್ರದ ಕಾಂಗ್ರೆಸ್ ಶಾಸಕ (Congress MLA) ರಾಜು ಕಾಗೆ (Raju Kage) ಸೇರುತ್ತಾರೆ.
ಇದೀಗ ಇದೇ ರಾಜು ಕಾಗೆ ವಿವಾದಾತ್ಮಕ ಹೇಳಿಕೆ ನೀಡಿ, ಮತ್ತೆ ಸುದ್ದಿಯಾಗಿದ್ದಾರೆ. “ನನ್ನ ತಂಟೆಗೆ ಬಂದ್ರೆ ನಿನ್ನ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮೆರವಣಿಗೆ ಮಾಡ್ತೀನಿ” ಅಂತ ರಾಜು ಕಾಗೆ ನಾಲಿಗೆ ಹರಿ ಬಿಟ್ಟಿದ್ದಾರೆ! ಮಾಜಿ ಶಾಸಕ ಶ್ರೀಮಂತ ಪಾಟೀಲ್ (Shrimant Patil) ವಿರುದ್ಧ ಹರಿಹಾಯುವ ಭರದಲ್ಲಿ ರಾಜು ಕಾಗೆ ಲಘು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಶಾಸಕರ ಉಡಾಫೆ ಮಾತಿಗೆ ಇದೀಗ ಸಾರ್ವಜನಿಕ ವಲಯದಲ್ಲೂ ಭಾರೀ ಆಕ್ರೋಶ ವ್ಯಕ್ತವಾಗಿದೆ.
ನಾಲಿಗೆ ಹರಿಬಿಟ್ಟ ಕೈ ಶಾಸಕ ರಾಜು ಕಾಗೆ