ಬೆಳಗಾವಿ: ಪಂಢರಪುರದಿಂದ ಮರಳುತ್ತಿದ್ದ ಬೆಳಗಾವಿಯ ಸಂತರ ಗುಂಪಿನ ಮೇಲೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮಾಲಗಾಂವ ಬಳಿ ಗುರುವಾರ ಹಲ್ಲೆ ನಡೆದಿದೆ. ಮೂವರಿಗೆ ಗಾಯಗಳಾಗಿವೆ. ಮೀರಜ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ತುರಮರಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ರಾಜೂಕರ (63), ಇಲ್ಲಿನ ಶಿವಾಜಿ ನಗರದ ಬಾಳು ಮನವಾಡಕರ (60), ಪರಶುರಾಮ ಜಾಧವ (42) ಅವರಿಗೆ ಗಾಯ ಆಗಿದೆ.
ಇವರು ಮೀರಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶನಿವಾರ ಬೆಳಗಾವಿಗೆ ಮರಳಿದ್ದಾರೆ.
’30ಕ್ಕೂ ಹೆಚ್ಚು ಸಂತರು ಲಾರಿಯಲ್ಲಿ ಪಂಢರಪುರಕ್ಕೆ ತೆರಳಿದ್ದು, ಜುಲೈ 18ರಂದು ಮರಳುವಾಗ ಮಾಲಗಾಂವ ಬಳಿ ರಸ್ತೆಯಲ್ಲಿ ಕಾರು ನಿಂತಿತ್ತು. ಕಾರನ್ನು ಸರಿಸಿ, ಲಾರಿಗೆ ಮುಂದೆ ಸಾಗಲು ಅವಕಾಶ ನೀಡಲು ಕೋರಿದೆವು. ಆದರೆ, ಕಾರಿನಲ್ಲಿದ್ದವರು ಜಾಗ ಬಿಡದೇ, ವಾಗ್ವಾದ ಮಾಡಿದರು. ನಾವು 3 ಕಿ.ಮೀ ಮುಂದಕ್ಕೆ ಸಾಗಿ ಬಂದೆವು. ಬೆನ್ನಟ್ಟಿ ಬಂದ 25ಕ್ಕೂ ಹೆಚ್ಚು ಮಂದಿ, ಲಾರಿ ಅಡ್ಡಗಟ್ಟಿದರು. ನಂತರ ಮಾರಕಾಸ್ತ್ರ ಮತ್ತು ಕಟ್ಟಿಗೆಯಿಂದ ಹಲ್ಲೆ ಮಾಡಿದರು’ ಎಂದು ಸುರೇಶ ರಾಜೂಕರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
Laxmi News 24×7