Breaking News

ಗಂಡನ ಖಾಸಗಿ ಭಾಗಕ್ಕೆ ಸಿಗರೇಟ್​​​ನಿಂದ ಸುಟ್ಟು ಚಿತ್ರಹಿಂಸೆ ನೀಡಿದ ಪತ್ನಿ,

Spread the love

ಬ್ಬ ಮಹಿಳೆ ತನ್ನ ಗಂಡನಿಗೆ ಚಿತ್ರಹಿಂಸೆ ನೀಡಿರುವ ಘಟನೆ ಉತ್ತರಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಪತಿಯನ್ನು ಪ್ರಜ್ಞೆ ತಪ್ಪಿಸಿ ಆತನನ್ನು ಬೆತ್ತಲೆ ಮಾಡಿ ಚಿತ್ರಹಿಂಸೆ ನೀಡಿದ್ದಾಳೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಕೆ ನೀಡಿದ ಚಿತ್ರಹಿಂಸೆಯನ್ನು ಒಮ್ಮೆ ಕೇಳಿದ್ರೆ, ಕಣ್ಣೀರು ಬರುತ್ತದೆ.ಪುಲ್​​ ಸ್ಟೋರಿ ಇಲ್ಲಿದೆ ನೋಡಿ.

ನೀವು ಪತಿ ಪತ್ನಿಗೆ ಚಿತ್ರಹಿಂಸೆ ನೀಡುವುದನ್ನು ಹೆಚ್ಚಾಗಿ ಕೇಳಿರಬಹುದು, ಆದರೆ ಇಲ್ಲೊಬ್ಬ ಮಹಿಳೆ ತನ್ನ ಗಂಡನಿಗೆ ಚಿತ್ರ ಹಿಂಸೆ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈಕೆ ತನ್ನ ಗಂಡನಿಗೆ ನೀಡಿದ ಶಿಕ್ಷೆ ಎಷ್ಟು ಕಠೋರವಾಗಿತ್ತೆಂದರೆ ಒಂದು ಬಾರಿ ನಿಮ್ಮ ಕರುಳು ಚುರುಕ್ ಅನ್ನೋದು ಖಂಡಿತ, ಉತ್ತರ ಪ್ರದೇಶದ ಬಿಜ್ನೋರ್​ದಲ್ಲಿ ಈ ಘಟನೆ ನಡೆದಿದೆ. ಮುಸ್ಲಿಂ ಮಹಿಳೆಯೊಬ್ಬಳು ತನ್ನ ಗಂಡನಿಗೆ ಚಿತ್ರಹಿಂಸೆ ನೀಡಿ, ಆತನ ಖಾಸಗಿ ಭಾಗಗಳಿಗೆ ಹಾನಿ ಮಾಡಿದ್ದಾಳೆ. ಪತಿಯನ್ನು ಬೆತ್ತಲೆ ಮಾಡಿ, ಮಂಚದ ಮೇಲೆ ಮಲಗಿಸಿ, ಕೈ-ಕಾಲುಗಳನ್ನು ಕಟ್ಟಿ ಹಾಕಿ ಕ್ರೂರವಾಗಿ ನಡೆಸಿಕೊಂಡಿದ್ದಾಳೆ. ಎಷ್ಟೇ ಕಿರುಚಿದರು, ಬೇಡಿಕೊಂಡರು, ಮನುಷ್ಯತ್ವವಿಲ್ಲದಂತೆ ಕಾಟ ನೀಡಿದ್ದಾಳೆ.

ಪತಿಯನ್ನು ಮಂಚಕ್ಕೆ ಕಟ್ಟಿ ಹಾಕಿ, ಅವಳಿಗೆ ಹೇಗೆ ಬೇಕು ಹಾಗೆ ನಡೆಸಿಕೊಳ್ಳುತ್ತಿದ್ದಳು, ಮಂಚದಲ್ಲಿ ಅವನ ಜತೆಗೆ ಮಲಗುವುದು, ಸಿಗರೇಟ್​​​ ಸೇದುತ್ತಿದ್ದಳು, ಮದ್ಯಪಾನ ಕೂಡ ಮಾಡುತ್ತಿದ್ದಳು, ಇದರ ಮಧ್ಯೆ ಪತಿಗೆ ಚಿತ್ರಹಿಂಸೆ ಕೂಡ ನೀಡುತ್ತಿದ್ದಳು ಎಂದು ಹೇಳಲಾಗಿದೆ. ಪತಿಯ ಖಾಸಗಿ ಭಾಗಕ್ಕೆ ಮುಟ್ಟಿ ಚಿತ್ರಹಿಂಸೆಯನ್ನು ನೀಡುತ್ತಿದ್ದಳು. ಇದರಿಂದ ಸಮಾಧಾನವಾಗದಿದ್ದಾಗ ಪತಿಯ ಖಾಸಗಿ ಅಂಗದ ಮೇಲೆ ಚಾಕುವಿನಿಂದ ಗಾಯ ಮಾಡುತ್ತಿದ್ದಳು ಎಂದು ಪೊಲೀಸರು ಮುಂದೆ ಆತ ಹೇಳಿಕೊಂಡಿದ್ದಾನೆ.

ಆತ ಹೇಳುತ್ತಿದ್ದ ಒದೊಂದು ಘಟನೆಯನ್ನು ಕೇಳಿಸಿಕೊಂಡ ಪೊಲೀಸರಿಗೂ ಒಂದು ಬಾರಿ ಅಚ್ಚರಿ ಹಾಗೂ ಅಘಾತವಾಗಿದೆ. ಆಕೆ ಹಿಂಸೆ ನೀಡಿದ್ದಳು ಎಂಬುದಕ್ಕೆ ಸಿಸಿಟಿವಿ ಕೂಡ ಸಾಕ್ಷಿಯಾಗಿದೆ. ಪತಿ ಹಾಗೂ ಸಿಸಿ ಟಿವಿ ವಿಡಿಯೋ ಆಧಾರದ ಮೇಲೆ ಮಹಿಳೆಯ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಆಕೆಯನ್ನು ಬಂಧಿಸಲಾಗಿದೆ.


Spread the love

About Laxminews 24x7

Check Also

ತಂದೆಗೆ ಲಿವರ್ ದಾನ ಮಾಡಿ ಮಹಾದಾನಿ ಆದ ಮಗ

Spread the loveಬೆಳಗಾವಿ: ಲಿವರ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ