Breaking News
Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ / ನೀರಿಗಾಗಿ ಉಮರಾಣಿ ಗ್ರಾಮಸ್ಥರು ಹೈರಾಣ

ನೀರಿಗಾಗಿ ಉಮರಾಣಿ ಗ್ರಾಮಸ್ಥರು ಹೈರಾಣ

Spread the love

ಚಿಕ್ಕೋಡಿ: ತಾಲ್ಲೂಕಿನ ಉಮರಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉಮರಾಣಿ ಹಾಗೂ ಇಟ್ನಾಳ್‌ ಗ್ರಾಮಗಳಲ್ಲಿ, ಬೇಸಿಗೆ ಆರಂಭದಿಂದಲೇ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ಬಂದಿದೆ. ದಿನ ಬೆಳಗಾದರೆ ಮಹಿಳೆಯರು ಕೊಡಗಳನ್ನು ಹೊತ್ತು ಅಲೆಯುವುದು ಅನಿವಾರ್ಯವಾಗಿದೆ.

ಉಮರಾಣಿ ಗ್ರಾಮದಲ್ಲಿ 6,000 ಜನಸಂಖ್ಯೆ ಇದೆ.

12 ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಗ್ರಾಮದ ತೋಟಪಟ್ಟಿ ವಸತಿಗಳಲ್ಲಿ ಕಳೆದ 10 ದಿನಗಳಿಂದ 4 ಟ್ಯಾಂಕರ್‌ನಿಂದ ಸರದಿಯಂತೆ ನೀರು ಪೂರೈಸಲಾಗುತ್ತಿದೆ.

ಚಿಕ್ಕೋಡಿ | ನೀರಿಗಾಗಿ ಉಮರಾಣಿ ಗ್ರಾಮಸ್ಥರು ಹೈರಾಣ

ಪರಿಶಿಷ್ಟ ಜಾತಿ ಕಾಲೊನಿ, ಬಾಗೇವಾಡಿ ತೋಟ, ಕರೆನ್ನವರ ತೋಟ, ಮಖಣಿ ತೋಟ, ಪಾಶ್ಚಾಪೂರ ತೋಟದ ವಸತಿಗಳಿಗೆ ಎರಡು ದಿನಗಳಿಗೊಮ್ಮೆ ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುತ್ತಿದೆ.

2022-23ನೇ ಸಾಲಿನಲ್ಲಿ ಪೂರ್ಣಗೊಳ್ಳಬೇಕಿದ್ದ ₹2.6 ಕೋಟಿ ವೆಚ್ಚದ ಜಲ ಜೀವನ ಮಿಷನ್ ಕಾಮಗಾರಿ ಇನ್ನೂ ಮುಗಿದಿಲ್ಲ. ಹೀಗಾಗಿ ಜೆಜೆಎಂ ಯೋಜನೆ ಗ್ರಾಮ ಪಂಚಾಯಿತಿಗೆ ಹಸ್ತಾಂತರಗೊಂಡಿಲ್ಲ. ಗ್ರಾಮದ 804 ನಲ್ಲಿಗಳಲ್ಲಿ ನೀರು ಬರಬೇಕಿತ್ತು. ಅಪೂರ್ಣಗೊಂಡ ಕಾಮಗಾರಿಯಿಂದ 400 ನಲ್ಲಿಗಳಿಗೆ ಮಾತ್ರ ಬರುತ್ತಿದೆ. ಅದರಲ್ಲೂ 1 ತಾಸು ಮಾತ್ರ ನೀರು ಬರುತ್ತದೆ. ಗ್ರಾಮದ ಅರ್ಧ ಭಾಗದ ಜನರಿಗೆ ಮನೆಮನೆ ಗಂಗೆ ಬರುತ್ತಿದ್ದರೆ, ಇನ್ನರ್ಧ ಊರು ಗಂಗೆಯನ್ನು ಹುಡುಕಿಕೊಂಡು ಹೋಗಬೇಕಾಗಿದೆ.

ಈ ಹಿಂದೆಯೇ ಕೊರೆಸಿದ 24 ಕೊಳವೆಬಾವಿಗಳು ಇದ್ದರೂ 9 ಬಂದ್ ಆಗಿ ತಿಂಗಳುಗಳೇ ಕಳೆದಿವೆ. 2 ಕೊಳವೆಬಾವಿಗಳಲ್ಲಿ ಒಂದು ಗಂಟೆಯವರೆಗೆ ಮಾತ್ರ ನೀರು ಬರುತ್ತದೆ. ಇನ್ನುಳಿದ ಕೊಳವೆಬಾವಿಗಳು ಬತ್ತಿ ಹೋಗಿವೆ. ಇಡೀ ದಿನ ಕಾದರೂ ಹತ್ತು ಕೊಡ ನೀರು ಸಿಗುವುದಿಲ್ಲ.


Spread the love

About Laxminews 24x7

Check Also

ಅಥಣಿಯ ಇಬ್ಬರು ವಿದ್ಯಾರ್ಥಿನಿಯರಿಗೆ ತೃತೀಯ ರ್‍ಯಾಂಕ್‌

Spread the love ಬೆಳಗಾವಿ: ಜಿಲ್ಲೆಯ ಅಥಣಿಯ ಬಣಜವಾಡ ವಸತಿ ಪದವಿಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ