2024ರ Loka Saba ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ BJP ಘಟಕದಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ.ರಾಜ್ಯ ಬಿಜೆಪಿ ಘಟಕದ ವತಿಯಿಂದ ಯಾವ್ಯಾವ ಕ್ಷೇತ್ರಕ್ಕೆ ಯಾರ್ಯಾರು ಅಭ್ಯರ್ಥಿಗಳಾಗಬೇಕು? ಅವರ Strength and Weakness ಕುರಿತ ವರದಿಯೊಂದಿಗೆ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ.
ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರೇ ಅಳೆದುತೂಗಿ ಪಟ್ಟಿ ಸಿದ್ಧಪಡಿಸಿದ್ದು, ಎಲ್ಲವೂ ಅಂದುಕೊಂಡಂತೆ ಆದ್ರೆ, ಫೆಬ್ರವರಿ ಮೊದಲ ವಾರದಲ್ಲಿ ಪಟ್ಟಿ ಬಿಜೆಪಿ ರಾಷ್ಟ್ರೀಯಾಧ್ಯಕ್ಷರ ಕೈ ಸೇರಲಿದೆ.
ಈಗಾಗಲೇ ಎರಡು ಸರ್ವೇಗಳನ್ನು ಮಾಡಿಸಿದ್ದು, ರಾಜ್ಯ ನಾಯಕರು ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ದೇಶದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಈ ಪಟ್ಟಿಯನ್ನು ಜೆ.ಪಿ.ನಡ್ಡಾರಿಗೆ ಕಳುಹಿಸಿ ಕೊಡಲು ಬಿಜೆಪಿ ನಾಯಕರು Plan ಮಾಡಿದ್ದಾರೆ. ಹಾಗಾದ್ರೆ, ಆ ಪಟ್ಟಿಯಲ್ಲಿರುವ ಸಂಭಾವ್ಯ ಅಭ್ಯರ್ಥಿಗಳಾದ್ರೂ ಯಾರು ಯಾರು? ಎಂಬುದನ್ನು ನೋಡುವುದಾದ್ರೆ,
- ಬೀದರ್ – ಭಗವಂತ ಖೂಬಾ (ಕೇಂದ್ರ ಸಚಿವ ಹಾಗೂ ಹಾಲಿ ಸಂಸದ). ವೀರಶೈವ-ಲಿಂಗಾಯತ.
- ರಾಯಚೂರು ಮೀಸಲು (ಎಸ್.ಟಿ) – ರಾಜಾ ಅಮರೇಶ್ ನಾಯಕ್ (ಹಾಲಿ ಸಂಸದ) ವಾಲ್ಮೀಕಿ ಸಮಾಜ (ಎಸ್.ಟಿ)/ ಬಿ. ಶ್ರೀರಾಮುಲು (ಮಾಜಿ ಸಚಿವ). ವಾಲ್ಮೀಕಿ ಸಮಾಜ.
- ಕಲ್ಬುರ್ಗಿ ಮೀಸಲು (ಎಸ್.ಸಿ) – ಉಮೇಶ್ ಜಾಧವ್ (ಹಾಲಿ ಸಂಸದ).
- ಕೊಪ್ಪಳ – ಕರಡಿ ಸಂಗಣ್ಣ. (ಹಾಲಿ ಸಂಸದ). ವೀರಶೈವ-ಲಿಂಗಾಯತ.
- ಬಳ್ಳಾರಿ ಮೀಸಲು (ಎಸ್.ಟಿ) – ದೇವೇಂದ್ರಪ್ಪ (ಹಾಲಿ ಸಂಸದ). ವಾಲ್ಮೀಕಿ ಸಮುದಾಯ / ಬಿ. ಶ್ರೀರಾಮುಲು. (ಮಾಜಿ ಸಚಿವ). ವಾಲ್ಮೀಕಿ ಸಮುದಾಯ.
- ಚಿತ್ರದುರ್ಗ ಮೀಸಲು (ಎಸ್.ಸಿ) – ಅನೇಕಲ್ ನಾರಾಯಣಸ್ವಾಮಿ (ಕೇಂದ್ರ ಸಚಿವ ಹಾಗೂ ಹಾಲಿ ಸಂಸದ). ಮಾದಿಗ. / ರಘು ಚಂದನ್ (ಹೊಸಮುಖದ ಅಭ್ಯರ್ಥಿ) ಬೋವಿ.
- ವಿಜಯಪುರ ಮೀಸಲು (ಎಸ್.ಸಿ) – ರಮೇಶ್ ಜಿಗಜಿಣಗಿ (ಹಾಲಿ ಸಂಸದ). ಮಾದಿಗ ಸಮುದಾಯ / ಗೋವಿಂದ ಕಾರಜೋಳ (ಮಾಜಿ ಡಿಸಿಎಂ). ಮಾದಿಗ / ಗೋಪಾಲ್ ಕಾರಜೋಳ (ಹೊಸಮುಖದ ಅಭ್ಯರ್ಥಿ). ಮಾದಿಗ ಸಮುದಾಯ.
- ಬಾಗಲಕೋಟೆ – ಪಿ.ಸಿ. ಗದ್ದೀಗೌಡರ್. (ಹಾಲಿ ಸಂಸದ). ವೀರಶೈವ-ಲಿಂಗಾಯತ.
- ಚಿಕ್ಕೋಡಿ – ಅಣ್ಣಾಸಾಹೇಬ್ ಜೊಲ್ಲೆ (ಹಾಲಿ ಸಂಸದ). ವೀರಶೈವ-ಲಿಂಗಾಯತ.
- ಬೆಳಗಾವಿ – ಮಂಗಳಾ ಸುರೇಶ್ ಅಂಗಡಿ (ಹಾಲಿ ಸಂಸದೆ). ವೀರಶೈವ-ಲಿಂಗಾಯತ./ ಜಗದೀಶ್ ಶೆಟ್ಟರ್ (ಮಾಜಿ ಮುಖ್ಯಮಂತ್ರಿ). ವೀರಶೈವ-ಲಿಂಗಾಯತ. / ಮಹಾಂತೇಶ್ ಕವಟಗಿಮಠ (ವಿಧಾನಪರಿಷತ್ ಮಾಜಿ ಸದಸ್ಯ). ವೀರಶೈವ-ಲಿಂಗಾಯತ.
- ಧಾರವಾಡ – ಪ್ರಹ್ಲಾದ್ ಜೋಶಿ. (ಕೇಂದ್ರ ಸಚಿವ ಹಾಗೂ ಹಾಲಿ ಸಂಸದ). ಬ್ರಾಹ್ಮಣ/ ಜಗದೀಶ್ ಶೆಟ್ಟರ್ (ಮಾಜಿ ಮುಖ್ಯಮಂತ್ರಿ) ವೀರಶೈವ-ಲಿಂಗಾಯತ.
- ಹಾವೇರಿ-ಗದಗ – ಜಗದೀಶ್ ಶೆಟ್ಟರ್ (ಮಾಜಿ ಮುಖ್ಯಮಂತ್ರಿ) ವೀರಶೈವ-ಲಿಂಗಾಯತ./
ಬಸವರಾಜ ಬೊಮ್ಮಾಯಿ (ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕರು) ವೀರಶೈವ-ಲಿಂಗಾಯತ/ ಕೆ.ಇ. ಕಾಂತೇಶ್ (ಹೊಸಮುಖದ ಅಭ್ಯರ್ಥಿ) ಹಿಂದುಳಿದ ವರ್ಗ/ ಬಿ.ಸಿ.ಪಾಟೀಲ್ (ಮಾಜಿ ಸಚಿವ) ವೀರಶೈವ-ಲಿಂಗಾಯತ / ಸಂದೀಪ್ ಪಾಟೀಲ್ (ಹೊಸಮುಖದ ಅಭ್ಯರ್ಥಿ) ವೀರಶೈವ-ಲಿಂಗಾಯತ. - ದಾವಣಗೆರೆ – ಜಿ.ಎಂ. ಸಿದ್ದೇಶ್ವರ್ (ಹಾಲಿ ಸಂಸದ) ವೀರಶೈವ-ಲಿಂಗಾಯತ.
- ಶಿವಮೊಗ್ಗ – ಬಿ.ವೈ. ರಾಘವೇಂದ್ರ (ಹಾಲಿ ಸಂಸದ) ವೀರಶೈವ-ಲಿಂಗಾಯತ.
- ಉತ್ತರ ಕನ್ನಡ – ಅನಂತ್‌ಕುಮಾರ್ ಹೆಗಡೆ (ಹಾಲಿ ಸಂಸದ) ಬ್ರಾಹ್ಮಣ / ವಿಶ್ವೇಶ್ವರ ಹೆಗಡೆ ಕಾಗೇರಿ (ಮಾಜಿ ಸ್ಪೀಕರ್) ಬ್ರಾಹ್ಮಣ.
- ಉಡುಪಿ-ಚಿಕ್ಕಮಗಳೂರು – ಶೋಭಾ ಕರಂದ್ಲಾಜೆ (ಕೇಂದ್ರ ಸಚಿವೆ ಹಾಗೂ ಹಾಲಿ ಸಂಸದೆ) ಒಕ್ಕಲಿಗ/ ಡಿ.ಎನ್.ಜೀವರಾಜ್ (ಮಾಜಿ ಸಚಿವ). ಒಕ್ಕಲಿಗ./ ಸಿ.ಟಿ.ರವಿ. (ಮಾಜಿ ಸಚಿವ) ಒಕ್ಕಲಿಗ.
- ದಕ್ಷಿಣ ಕನ್ನಡ – ನಳಿನ್‌ಕುಮಾರ್ ಕಟೀಲ್ (ಹಾಲಿ ಸಂಸದ). ಬಂಟ್ ಸಮುದಾಯ.
- ಮೈಸೂರು-ಕೊಡಗು – ಪ್ರತಾಪ್ ಸಿಂಹ (ಹಾಲಿ ಸಂಸದ) ಒಕ್ಕಲಿಗ.
- ಚಾಮರಾಜನಗರ ಮೀಸಲು (ಎಸ್.ಸಿ) – ಎನ್.ಮಹೇಶ್ (ಮಾಜಿ ಸಚಿವ) ದಲಿತ. / ಕೆ.ಶಿವರಾಂ (ಹೊಸಮುಖದ ಅಭ್ಯರ್ಥಿ) ದಲಿತ / ಹರ್ಷವರ್ಧನ್ (ಮಾಜಿ ಶಾಸಕ) ದಲಿತ.
- ಮಂಡ್ಯ – ಎನ್‌ಡಿಎ ಅಭ್ಯರ್ಥಿ. ಬಹುತೇಕ ಜೆಡಿಎಸ್‌ನ ಅಭ್ಯರ್ಥಿ ಕಣಕ್ಕಿಳಿಯುವುದು ನಿಶ್ಚಿತ.
- ಬೆಂಗಳೂರು ಗ್ರಾಮಾಂತರ – ಸಿ.ಪಿ.ಯೋಗೇಶ್ವರ್ (ವಿಧಾನಪರಿಷತ್ ಸದಸ್ಯ). ಒಕ್ಕಲಿಗ.
- ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ (ಹಾಲಿ ಸಂಸದ). ಬ್ರಾಹ್ಮಣ.
- ಬೆಂಗಳೂರು ಕೇಂದ್ರ – ಪಿ.ಸಿ. ಮೋಹನ್. (ಹಾಲಿ ಸಂಸದ). ಹಿಂದುಳಿದ ವರ್ಗ.
- ಬೆಂಗಳೂರು ಉತ್ತರ – ಡಿ.ವಿ. ಸದಾನಂದಗೌಡ (ಹಾಲಿ ಸಂಸದ) ಒಕ್ಕಲಿಗ.
- ಕೋಲಾರ ಮೀಸಲು – ಎನ್‌ಡಿಎ ಅಭ್ಯರ್ಥಿ. ಬಹುತೇಕ ಜೆಡಿಎಸ್‌ನ ಅಭ್ಯರ್ಥಿ ಕಣಕ್ಕೆ.
- ಚಿಕ್ಕಬಳ್ಳಾಪುರ – ಎಂಟಿಬಿ ನಾಗರಾಜ್ (ಮಾಜಿ ಸಚಿವ) ಹಿಂದುಳಿದ ವರ್ಗ. / ನಿತಿನ್ ಪುರುಷೋತ್ತಮ್ (ಬಿಬಿಎಂಪಿ ಮಾಜಿ ಸದಸ್ಯ) ಹಿಂದುಳಿದ ವರ್ಗ.
- ತುಮಕೂರು – ವಿ.ಸೋಮಣ್ಣ (ಮಾಜಿ ಸಚಿವ) ವೀರಶೈವ- ಲಿಂಗಾಯತ.
- ಹಾಸನ – ಎನ್‌ಡಿಎ ಅಭ್ಯರ್ಥಿ. ಬಹುತೇಕ ಜೆಡಿಎಸ್‌ನ ಅಭ್ಯರ್ಥಿ ಕಣಕ್ಕೆ.
ಹೀಗೆ 28 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಪಟ್ಟಿ ಮಾಡಿದ್ದು, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ. ನಡ್ಡಾರಿಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.